ಧೈರ್ಯವಾಗಿ ಪ್ರಶ್ನಿಸುತ್ತಿದ್ದೇವೆ ಸ್ವಾಮಿ... ಸುಳ್ಳನ್ನು ಯಾರು ಮುದ್ರಿಸಿದರೂ ಅಪರಾಧವೆ...?
ವಕ್ಫ್‌ನಿಂದ ರೈತನ ಆತ್ಮಹತ್ಯೆ ಎಂಬ ಮಾಧ್ಯಮಗಳ ಸುಳ್ಳು ಸುದ್ದಿ (?) ಮತ್ತು ಮಾಧ್ಯಮಗಳ ಮೇಲಿನ FIR ಆಧಾರದ ಮೇಲೆ ಒಂದು ತರ್ಕ
('ಧೈರ್ಯವಾಗಿ ಪ್ರಶ್ನಿಸಿ' ಎಂಬ ಶಾಲಾ ಬಾಗಿಲ ಮೇಲಿನ ಘೋಷ ವಾಕ್ಯದ ಅಡಿಯಲ್ಲಿ ಈ ತರ್ಕ ಪ್ರಶ್ನೆಗಳು!!)
ಮೊನ್ನೆ ನೆಡೆದಿದೆ ಎನ್ನಲಾದ ಒಂದು ಪ್ರಕರಣ.
ಪಹಣಿ ವಕ್ಫ್ ಆಸ್ತಿ ಆಗಿದೆ ಎಂದು ನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮ ಸುದ್ದಿ ಪ್ರಕಟವಾಗಿದ್ದು ನಂತರ ಅದು ಸುಳ್ಳು ಸುದ್ದಿ ಎಂದು ರಾಜ್ಯ ಸರಕಾರದ ಸಚಿವರ ಆರೋಪ, ತರುವಾಯ ಪೊಲೀಸರಿಂದ ಮಾಧ್ಯಮಗಳ ಮೇಲೆ FIR ದಾಖಲು ಆದ ಪ್ರಕರಣ.
ವಕ್ಫ್‌ನಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಸುಳ್ಳು ಅನ್ನುವುದಾದರೆ ಮಾಧ್ಯಮದ ಮೇಲೆ FIR ಹಾಕಿದ್ದು ಸರಿ ಇದೆ. ಕೇಸ್ ಆಗಲಿ, ತನಿಖೆ ನೆಡೆಯಲಿ. ಸುಳ್ಳನ್ನು ಮುದ್ರಿಸುವುದು ತಪ್ಪು. ಸುಳ್ಳು ವದಂತಿ ಹರಡುವುದು ಅಪರಾಧ.
ಈ ಸುಳ್ಳು ಮುದ್ರಿಸಿದ ಪ್ರಕರಣವನ್ನು (ಮುದ್ರಿಸಿದ ಸುದ್ದಿ, ಸುಳ್ಳು ಎಂದು ಭಾವಿಸಿ), ಇನ್ನೊಂದು ಕೋನದಲ್ಲಿ ತಾರ್ಕಿಕವಾಗಿ ವಿಶ್ಲೇಷಣೆ ಮಾಡೋಣ:
ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ಬಂದಿದ್ದಕ್ಕೆ ಯಾವ ರೈತರೂ ಸಾಯದೇ ಇದ್ದರೂ (ಯಾವ ರೈತರು ಸಾಯುವುದು ಬೇಡ) ಪತ್ರಿಕೆಯಲ್ಲಿ 'ರೈತ ಆತ್ಮಹತ್ಯೆ' ಎಂದು ಸುಳ್ಳು ಸುದ್ದಿ ಪ್ರಕಟವಾಗಿರುವುದು FIR ಗೆ ಕಾರಣವಾಗಿದೆ ಅಂತಾದರೆ....
ಜಮೀನು ತಲತಲಾಂತರಗಳಿಂದ ರೈತರದ್ದೇ ಆಗಿದ್ದರೂ, ಯಾರೋ ಅಧಿಕಾರಿಗಳು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಸುಳ್ಳನ್ನು ಮುದ್ರಿಸಿರುವುದನ್ನು ಪರಿಗಣಿಸಿ ಅಧಿಕಾರಿಗಳ ಮೇಲೆ FIR ಹಾಕುವುದಕ್ಕೆ ಬರೋದಿಲ್ಲವಾ?
ಪಹಣಿಯಲ್ಲಿ ಸುಳ್ಳು ಮುದ್ರಿಸಲು ಪ್ರಚೋಧಿಸಿದ ಸಚಿವರು, ವಕ್ಫ್ ಬೋರ್ಡ್, ಸರಕಾರಗಳ ಮೇಲೂ FIR ಹಾಕಬಹುದಲ್ವಾ!!?
ಮುಖ್ಯಮಂತ್ರಿಗಳೇ ಪಹಣಿಯಲ್ಲಿನ ವಕ್ಫ್ ಆಸ್ತಿ ಅಂತಿರುವುದನ್ನು ತೆಗೆಯಲು ಸೂಚಿಸಿದ್ದಾರೆ ಅಂತಾದ ಮೇಲೆ, ಮೊದಲು ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ಮುದ್ರಣವಾಗಿರುವುದು ತಪ್ಪು ಮತ್ತು ಸುಳ್ಳು ಅಂತಾಯ್ತಲ್ಲ?
ಮುಖ್ಯಮಂತ್ರಿಗಳೇ ಸುಳ್ಳು ಮುದ್ರಣವಾಗಿರುವ (ವಕ್ಫ್ ಆಸ್ತಿ ಎಂದು) ಪಹಣಿಯನ್ನು ಸರಿ ಪಡಿಸಲು ಸೂಚನೆ ಕೊಟ್ಟಿದ್ದಾರೆ ಅಂತಾದರೆ, ಮತ್ತು ಈಗ ಅಧಿಕಾರಿಗಳು ಪಹಣಿಯ ಕಾಲಂ 11 ರಲ್ಲಿ ಮುದ್ರಿತವಾದ ವಕ್ಫ್ ಆಸ್ತಿ ಎಂಬ ಸುಳ್ಳನ್ನು ರೈತರ ಒಡೆತನದ ಜಮೀನುಗಳ ಪಹಣಿಗಳಿಂದ ತೆಗೆಯುತ್ತಿದ್ದಾರೆ (ವೈಟ್ಣರ್ ಹಾಕಿ!?) ಅಂತಾದರೆ ಮೊದಲು ಸುಳ್ಳನ್ನು ಮುದ್ರಿಸಿದ್ದರು ಅನ್ನುವುದು ಯಾವ ನ್ಯಾಯಾಂಗ ತನಿಖೆಯು ಇಲ್ಲದೆ ಸ್ಪಷ್ಟವಾಗುತ್ತದೆ ಅಲ್ವಾ?
ಸುಳ್ಳು ಮಸಹಿತಿಯನ್ನು ಮುದ್ರಿಸುವುದು ಅಪರಾಧ, FIR ಆಗಬೇಕು ಅನ್ನುವುದು ಕೇವಲ ಪತ್ರಿಕಾ ಮಾಧ್ಯಮಗಳಿಗೆ ಮಾತ್ರ ಆಗಿರಲಿಕ್ಕಿಲ್ಲ ಅಲ್ವವಾ?
ತಪ್ಪನ್ನು ಪಹಣಿಯಲ್ಲಿ ಮುದ್ರಿಸಿರುವುದು, ಮಾಧ್ಯಮದಲ್ಲಿ ರೈತ ಆತ್ಮಹತ್ಯೆಗೆ ಕಾರಣ ವಕ್ಫ್ ಅಂತ ಸುಳ್ಳು ಮುದ್ರಿಸಿರುವಷ್ಟೇ ಅಪರಾಧ ಅಲ್ವಾ?
(ಒಂದು ವೇಳೆ ಸದರಿ ರೈತರ ಆತ್ಮಹತ್ಯೆಗೆ ವಕ್ಫ್ ಕಾರಣ ಅನ್ನುವುದು ಸುಳ್ಳು ಸುದ್ದಿ ಆಗಿದ್ದರೆ!)
ಹೀಗೆ ಮಾಡುವುದಾದರೆ, ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸುಳ್ಳು ಮತ್ತು ತಪ್ಪುಗಳನ್ನು ಮುದ್ರಿಸಿದ ಎಷ್ಟು ಅಧಿಕಾರಿಗಳ, ಸಚಿವರ, ಬೋರ್ಡ್‌ಗಳ ಮೇಲೆ FIR ಹಾಕಬೇಕಾಗುತ್ತದೆ? ಯಾರು ಹಾಕುವುದು? ಯಾವಾಗ ಹಾಕ್ತಾರೆ? ಹೀಗೆ ಅಧಿಕಾರಿಗಳ ಮೇಲೆ ಪಹಣಿಯಲ್ಲಿ ಸುಳ್ಳು ಮುದ್ರಿಸಿದ್ದಕ್ಕೆ ಸಂಬಂಧಿಸಿದ ರೈತರು ಕಂಪ್ಲೇಂಟ್ ಕೊಡಬೇಕಾ?
ಧೈರ್ಯವಾಗಿ ಪ್ರಶ್ನಿಸಿ ಎಂಬ ಇತ್ತೀಚಿನ ಶಾಲೆಯ ಬಾಗಿಲ ಮೇಲಿನ ಸ್ಪೂರ್ತಿದಾಯಕ ಪ್ರಚೋದನೆಯ ವಾಕ್ಯದಿಂದ ಇದಿಷ್ಟು ಪ್ರಶ್ನಿಸಿದ್ದು.
ವಕ್ಫ್ ಆಸ್ತಿ ಎಂಬ ಸುಳ್ಳುಗಳನ್ನು ಪಹಣಿಯಲ್ಲಿ ಮುದ್ರಿಸುತ್ತಿರುವವರಿಗೆ FIR ಹಾಕುವ ಕೆಲಸ ಪ್ರಾರಂಭವಾಗಲಿ!
ಸುಳ್ಳನ್ನು ಯಾರು ಮುದ್ರಿಸಿದರೂ ಅಪರಾಧವೆ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ