ಧರ್ಮಸ್ಥಳ ಲಕ್ಷದೀಪೋತ್ಸವ: ಸುಗಮ ಸಂಗೀತ ಗಾನಸುಧೆ

Upayuktha
0


ಧರ್ಮಸ್ಥಳ: ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆಯುತ್ತಿರುವ  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಗಮ ಸಂಗೀತ ಕಾರ್ಯಕ್ರಮವು ಶ್ರೀದೇವಿ ಸಚಿನ್ 'ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ'  ತಂಡದವರಿಂದ ಮಂಗಳವಾರ ನಡೆಯಿತು.


ಆದಿ ಪೂಜಿತ ಗಣಪನನ್ನು ಸ್ತುತಿಸುವುದರೊಂದಿಗೆ ಶ್ರೀದೇವಿ ಸಚಿನ್ ಕಾರ್ಯಕ್ರಮವನ್ನು ಆರಂಭಿಸಿದರು. 'ಓಂ ಮಹಾಪ್ರಾಣ ದೀಪಂ ಶಿವಂ' ಎಂದು ಮಹಾಪ್ರಾಣನಾದ ಮಹಾದೇವನ ಸ್ತುತಿಯನ್ನು ಶಿವಶಂಕರ್ ಹಾಡಿದರು. 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂದು ತಂಡದ ಪುಟಾಣಿ ಮಕ್ಕಳು ಗುರುವಿಗೆ ಗೌರವ ಸೂಚಿಸಿದರು. 'ಭೋ ಶಂಭೋ' ಎಂದು ಶಿವನ ನಾಮಸಂಕೀರ್ತನೆಯನ್ನು ಆದರ್ಶ್ ಪ್ರಸ್ತುತಪಡಿಸಿದರು. ಗೋವರ್ಧನ ಗಿರಿಧಾರಿ’ ಎಂದು ಶ್ರೀ ಕೃಷ್ಣನನ್ನು ಕೊಂಡಾಡಿದರು.


‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಎಂದು ತಂಡದ ಪುಟಾಣಿ ಮಕ್ಕಳು ಹಾಡಿದರು. 'ಎಲ್ಲಾ ನಿನ್ನ ಲೀಲೆ ತಾಯೇ '  'ಲೋಕದ ಕಣ್ಣಿಗೆ ರಾಧೆಯು ಕೂಡ' ಎಂದು ಜಗನ್ಮಾತೆ ದೇವಿಯನ್ನು ಮತ್ತು ಪ್ರೇಮದ ಸಂಕೇತವಾದ  ಶ್ರೀ ರಾಧೆಯನ್ನು ಸ್ಮರಿಸಲಾಯಿತು. 'ಸಮರಸ ಭಾವದ ಸರಿಮಪ ಸ್ವರದಲ್ಲಿ ಹೊಸ ಹಾಡೊಂದನು ಹಾಡೋಣ' ಎಂದು ತಂಡದ ಸಂಗೀತ ಶಿಕ್ಷಕಿ ಶ್ರೀದೇವಿ ಸಚಿನ್ ಮತ್ತು ತಂಡದ ಪುಟಾಣಿ ವಿದ್ಯಾರ್ಥಿಗಳು ಹಾಡಿದರು. 


ತಬಲದಲ್ಲಿ ಆತ್ಮರಾಮ್ ನಾಯಕ್, ಕೀಬೋರ್ಡ್ ನಲ್ಲಿ ಷಣ್ಮುಖ ಸಜ್ಜ ಮೈಸೂರು ಮತ್ತು ರಿಧಮ್ ಪ್ಯಾಡ್ ನಲ್ಲಿ ವಿನಯ್ ರಂಗದೊಳ್ ಸಹಕರಿಸಿದರು. ಕಾರ್ಯಕ್ರಮವನ್ನು ಸಮೀಕ್ಷಾ ಶಿರ್ಲಾಲು ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top