ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ

Upayuktha
0

ತೀರ್ಥರಾಮ ಎಚ್.ಬಿಯವರಿಗೆ ಗೌರವ ಸಮರ್ಪಣೆ




ಸುಳ್ಯ: ಗುತ್ತಿಗಾರುವಿನ ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ತೀರ್ಥರಾಮ ಎಚ್.ಬಿ ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ ಇವರನ್ನು ಕುಟುಂಬಸ್ಥರು ದೀಪಾವಳಿ ಹಬ್ಬದಲ್ಲಿ ಕುಟುಂಬಸ್ಥರ ಸಮಾಗಮದಲ್ಲಿ ಗೌರವಿಸಿದರು.


ಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆಯವರು ಅಧ್ಯಕ್ಷತೆ ವಹಿಸಿದರು. ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಅಧ್ಯಕ್ಷ ಎಚ್. ಬಿ. ಕೇಶವ ಹೊಸೋಳಿಕೆ, ಕಾರ್ಯದರ್ಶಿ ರವೀಂದ್ರ ಹೊಸೋಳಿಕೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಸಾಹಿತಿ ಯೋಗೀಶ್ ಹೊಸೋಳಿಕೆ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top