ಸ್ವಾವಲಂಬಿ ಬದುಕಿನ ಪ್ರೇರಕರು ಡಿ ವೀರೇಂದ್ರ ಹೆಗ್ಗಡೆ: ಜಿತೇಂದ್ರ ಕುಂದೇಶ್ವರ

Chandrashekhara Kulamarva
0

ಹೆಗ್ಗಡೆಯವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ




ಮಂಗಳೂರು: ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯೋಜನೆ ರೂಪಿಸಿದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದಂದು ಜನರ ಜೀವ ಉಳಿಸುವ ರಕ್ತದಾನದ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಹೇಳಿದರು.


ಎಸ್‌ಡಿಂ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನಾಚರಣೆ ಪ್ರಯುಕ್ತ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ದೈಹಿಕ ಶಿಕ್ಷಣ ವಿಭಾಗ, ರೆಡ್‌ಕ್ರಾಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಲಯನ್ಸ್‌ ಕ್ಲಬ್‌ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಪ್ರಕೃತಿಯಿಂದ ವಿಮುಖವಾಗಿ ಬದುಕಲು ಕೃತಕ ಸಾಧನಗಳನ್ನು ಅವಲಂಬಿಸಿರುವ ಮಾನವ, ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ಲಸಿಕೆ ಇಲ್ಲದೆ ಬದುಕಲಾರ ಎಂಬ ಸ್ಥಿತಿಗೆ ತಲುಪಿದ್ದಾನೆ. ಆದ್ದರಿಂದ ಪರೋಪಕಾರಮ್‌ ಇದಮ್‌ ಶರೀರಂ ನಾಣ್ಣುಡಿಗೆ ಅನುಗುಣವಾಗಿ ರಕ್ತದಾನ, ಪರೋಪಕಾರ ಮಾಡುತ್ತಾ ಮಾನವೀಯತೆಯಿಂದ ಬದುಕು ಕಟ್ಟಿಕೊಳ್ಳುವ ಅಗತ್ಯ ಇದೆ ಎಂದರು.


ಪ್ರಾಂಶುಪಾಲ ಡಾ.ತಾರಾನಾಥ್‌ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜಯರಾಜ್‌ ಪ್ರಕಾಶ್‌, ಲಯನ್ಸ್‌ ರಕ್ತದಾನ ವಿಭಾಗದ ಸಂಯೋಜಕ ನಾಗೇಶ್‌ ಎನ್.‌ಜೆ., ಎಚ್‌ಡಿಎಫ್‌ಸಿ ಬ್ಯಾಂಕ್‌ ಉಪಪ್ರಬಂಧಕಿ ಲಕ್ಷ್ಮೀ ಉಪಾಕ್ಷ ಉಪಸ್ಥಿತರಿದ್ದರು.


ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪರಾಜ್‌ ಕೆ. ಸ್ವಾಗತಿಸಿದರು. ಎನ್‌ಎಸ್‌ಎಸ್‌ ನಾಯಕಿ ದೀಪ್ತಿ ಬಂಗೇರ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶಶಿಪ್ರಸಾದ್‌, ಎನ್‌ಎಸ್‌ಎಸ್‌ ಯೋಜನಾಧಿಕಾರಿ ಡಾ. ಡಿಂಪಲ್‌ ಮೇಸ್ತ, ವಿದ್ಯಾರ್ಥಿ ಸಂಯೋಜಕರುಗಳಾದ ಸತ್ಯಾತ್ಮ ಭಟ್‌, ತೇಜಸ್‌, ಭಾಗ್ಯಶ್ರೀ ಇದ್ದರು. ಗಾಯತ್ರಿ ಪ್ರಾರ್ಥಿಸಿದರು. ಶೃತಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top