ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಒಂದು ಶಿಬಿರಕ್ಕೊಂದು ಹೋಗಿ ಮರಳಿ ಹಿಂದಿರುಗಿ ಬಸ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದಾಗ ಕಾಣಿತು ಸಂಕಟದಲ್ಲಿದ್ದ ನೋವಿನಲ್ಲಿ ಇದ್ದ ಈ ಪಕ್ಷಿ. ಯಾರು ವಿಚಾರಿಸುವವರೇ ಇರಲಿಲ್ಲ. ದಾರಿಹೋಕರು ನೋಡಿದರೂ ಒಂದು ಸೆಕೆಂಡ್ ನಿಂತು ನೋಡಿ ಮುಂದುವರೆಯುತ್ತಿದ್ದರು. ಏನು ಮಾಡುವುದು? ಪೊಲೀಸ್ ಗೆ ಕಾಲ್ ಮಾಡೋಣವಾ ಅಥವಾ ಆಂಬುಲೆನ್ಸ್ ಗೆ ಕಾಲ್ ಮಾಡೋಣವಾ ಎಂದು ಯೋಚಿಸುತ್ತಲೇ ಬೆಂಗಳೂರಿನ ವೈಲ್ಡ್ ಲೈಫ್ ಅನಿಮಲ್ಸ್ ಪ್ರೊಟೆಕ್ಟನ್ ಸೆಂಟರ್ ಎಆರ್ ಆರ್ ಸಿ ರವರಿಗೆ ಕಾಲ್ ಮಾಡಿಯೇ ಬಿಟ್ಟೆ. ತಕ್ಷಣವೇ ಕರೆಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿ ತಕ್ಷಣವೇ ಬರುತ್ತೇವೆ ಬರ್ತಾ ಇದ್ದೇವೆ ಎಂದರು. ಟ್ರಾಫಿಕ್ ಇದ್ದ ಕಾರಣ 1 ಗಂಟೆಯಲ್ಲಿ ಬಂದು ರೆಸ್ಕ್ಯೂ ಮಾಡಿದರು.
ಪಕ್ಷಿಯು ಸಹ ಮನುಷ್ಯನ ಹಾಗೆ ಒಂದು ಜೀವಿ ಕಣ್ರೀ. ಈ ಧರೆಯಲ್ಲಿ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಕಣ್ರೀ. ದಯವಿಟ್ಟು ಸಂಕಷ್ಟದಲ್ಲಿದ್ದ ಪ್ರಾಣಿ ಪಕ್ಷಿಗಳನ್ನು ಕಂಡಾಗ ವೈಲ್ಡ್ ಲೈಫ್ ಅನಿಮಲ್ಸ್ ಪ್ರೋಟೆಕ್ಟನ್ ಸೆಂಟರ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ತಕ್ಷಣವೇ ಸ್ಥಳಕ್ಕೆ ಬಂದು ರೆಸ್ಕ್ಯೂ ಮಾಡಿ ಚಿಕಿತ್ಸೆ ನೀಡಿ ರಕ್ಷಣೆ ಮಾಡುತ್ತಾರೆ.
"ಜೀವ ಸಂಕುಲ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ"
- ಪ್ರಜ್ವಲ್ ಕೆ.ವಿ.ಸಿ, ಚಿಕ್ಕಬಳ್ಳಾಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ