ಬಿಎಂಟಿಸಿ ಬಸ್‌ನಲ್ಲಿ ಕುರಿಗಳು ಸಾರ್ ಕುರಿಗಳು ನಾವು...

Upayuktha
0

ಸಾರಿಗೆ ಸಚಿವರೇ ಇತ್ತ ನೋಡಿ, ಸಮಸ್ಯೆ ಬಗೆಹರಿಸಿ 




ಸಾರ್ವಜನಿಕ ಸಾರಿಗೆಯಲ್ಲಿ ಒಂದು ಬಸ್‌ನಲ್ಲಿ ಮೂರು ಬಸ್‌ಗೆ ಆಗುವಷ್ಟು ಜನರು. ರಾತ್ರಿ 7 ಗಂಟೆಗೆ ಸುಮ್ಮೇನಹಳ್ಳಿಯಿಂದ ಬನಶಂಕರಿಗೆ ಹೊರಟ  ಬಸ್‌ನಲ್ಲಿ ಜನರು ಜನ. ಬಸ್ ನಿರ್ವಾಹಕ ಟಿಕೆಟ್ ಕೊಡಲು ಹರಸಾಹಸ.


ಬಸ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರು ನಿಲ್ಲಲು ಆಗದೇ, ಪ್ರಯಾಣಿಕರು ಅವರ ಅವರ ಬೆವರಿನ ಕೆಟ್ಟ ವಾಸನೆ ಕುಡಿಯುತ್ತ ನಿಂತ ಪ್ರಯಾಣಿಕರ ಆರೋಗ್ಯಕ್ಕೆ ಸರ್ಕಾರ ಕೊಟ್ಟಿರುವ ಉಚಿತ ಬಸ್ ಪ್ರಯಾಣ ಕಾರಣವೇ? ಅಥವಾ ಬಿಎಂಟಿಸಿ ಬಸ್ ಡಿಪೋದಿಂದ ಬಸ್ ಗಳು ಸರಿಯಾದ ಸಮಯಕ್ಕೆ ಹೋರಾಡುತ್ತಿಲ್ಲವೆ ಅಥವಾ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಹಕರು ಹೇಳುವ ಟ್ರಾಫಿಕ್ ಜಾಮ್ ಸಮಸ್ಯೆ ಕಾರಣವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ?


ಒಟ್ಟಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಕಾಸು ಕೊಟ್ಟು ಪ್ರಯಾಣಿಸುವ ಪ್ರಯಾಣಿಕರು ಆದ ನಮ್ಮ ಪಾಡು, ಹೇಳತೀರದ ಈ ಸಮಸ್ಯೆಗೆ ಸಾರಿಗೆ ಸಚಿವರು  ಪರಿಹಾರ ನೀಡುವವರೇ ಕಾದು ನೋಡಬೇಕು ಏನಂತೀರಾ?


- ತೀರ್ಥಹಳ್ಳಿ ಅನಂತ ಕಲ್ಲಾಪುರ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top