ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪುರಸ್ಕಾರ ನ.25ರಂದು ಪ್ರದಾನ

Chandrashekhara Kulamarva
0
ಪ್ರಶಸ್ತಿಗೆ ಕಾಪುತಡ್ಕ ಶಂಕರನಾರಾಯಣ ಶಾಸ್ತ್ರಿ, ಮಾಡಾವು ಗೋಪಾಲಕೃಷ್ಣ ಭಟ್ಟರು ಆಯ್ಕೆ




ಬೆಳ್ಳಾರೆ: ಚೂಂತಾರು ಸರೋಜಿನ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಇವರಿಂದ ಕಳೆದ ವರ್ಷ ಸ್ಥಾಪಿಸಲ್ಪಟ್ಟ "ವೇದಮೂರ್ತಿ ಬ್ರಹ್ಮಶ್ರೀ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪುರಸ್ಕಾರ'ಕ್ಕೆ (ಎರಡನೇ ವರ್ಷದ) ಪುರೋಹಿತರೂ ಹಿರಿಯ ಪರಿಚಾರಕರೂ ಆಗಿರುವ ಕಾಪುತಡ್ಕ ಶಂಕರನಾರಾಯಣ ಶಾಸ್ತ್ರಿ ಮತ್ತು ಪುರೋಹಿತರಾದ ಮಾಡಾವು ಎಲ್ಯಡ್ಕ ಗೋಪಾಲಕೃಷ್ಣ ಭಟ್‌ ಇವರು ಆಯ್ಕೆ ಆಗಿದ್ದಾರೆಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಟ್ರಸ್ಟಿ ಡಾ. ಮುರಲೀ ಮೋಹನ ಚೂಂತಾರುರವರು ಪ್ರಕಟಿಸಿರುತ್ತಾರೆ.


ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ ಮತ್ತು ಕೇಶವ ಜೋಯಿಸ್‌ರವರಲ್ಲಿ ವೇದವ್ಯಾಸ ಮಾಡಿರುವ ಶಂಕರನಾರಾಯಣ ಶಾಸ್ತ್ರಿಗಳು ವಿಟ್ಲದ ಅರಸರ "ಆಸ್ಥಾನ ಶಾಸ್ತ್ರಿ" ಪರಂಪರೆಯ, ಚಕ್ರಕೋಡಿ ಶಾಸ್ತ್ರಿ ಮನೆತನದವರಾಗಿದ್ದಾರೆ. ಇವರು ಹಾಲು ಮಾರಾಟದಿಂದ ತೊಡಗಿ, ಟೈಲರ್ ವೃತ್ತಿಯನ್ನು ಮಾಡುತ್ತಾ ಪಾಕಶಾಸ್ತ್ರ ಪ್ರವೀಣರೂ ಆಗಿದ್ದರು.ಉತ್ತಮ ಕೃಷಿಕರೂ ಆಗಿರುವ ಇವರು ಕಳೆದ ಮೂವತ್ತೈದು ವರ್ಷಗಳಿಂದ ವೃತ್ತಿ - ಪ್ರವೃತ್ತಿಯಿಂದ ಪೌರೋಹಿತ್ಯ ಹಾಗೂ ಪೌರೋಹಿತ್ಯ ವಿಭಾಗದ ಪರಿಚಾರಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿತ್ತಾ ಬರುತ್ತಿದ್ದಾರೆ.


ಮಾಡಾವಿನ ಎಲ್ಯಡ್ಕ ಗೋಪಾಲಕೃಷ್ಣ ಭಟ್‌ ಇವರು ಕೇಶವ ಜೋಯಿಸರ ಶಿಷ್ಯರಾಗಿ ಬೆಳ್ಳಾರೆಯ ಶ್ರೀ ಸದಾಶಿವ ವೇದಪಾಠ ಶಾಲೆಯಲ್ಲಿ ವೇದಾಧ್ಯಯನ ನಡೆಸಿದ ವೈದಿಕ ವಿದ್ವಾಂಸರು. ಕಳೆದ ಮೂರು ದಶಕಗಳಿಂದ ಪುರೋಹಿತರಾಗಿ ಎಲ್ಲ ವಿಧದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಡುತ್ತಾ ಸನಾತನ ಧರ್ಮ ಸಂರಕ್ಷಣಾ ಕಾರ್ಯದಲ್ಲಿ ನಿರತರಾದವರು.


ಈರ್ವರಿಗೂ 'ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪುರಸ್ಕಾರ' ವನ್ನು ಚೂಂತಾರಿನ ಉಪಾಸನಾ ಮನೆಯಲ್ಲಿ ಬಂಧು ಬಳಗದವರ ಸಮ್ಮುಖದಲ್ಲಿ ನ.25 ರ ಸೋಮವಾರದಂದು ಅಪರಾಹ್ನ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಟ್ರಸ್ಟಿಗಳಲ್ಲೋರ್ವರಾದ ಚೂಂತಾರು ಮಹೇಶ ಭಟ್ ತಿಳಿಸಿದ್ದು, ಅಪರಾಹ್ನ 2.00 ಗಂಟೆಯಿಂದ ನಡೆಯಲಿರುವ ಸಮಾರಂಭದಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top