ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Upayuktha
0


ಸುರತ್ಕಲ್‌: ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ) ಕುಳಾಯಿ ಮತ್ತು ಎಂ ಸುಮತಿ ಫೌಂಡೇಷನ್ ಕುಳಾಯಿ ವತಿಯಿಂದ ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ಇಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಆಯೋಜಿಸಲಾಯಿತ್ತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ರಮೇಶ್ ಎಂ ಅವರು ಶಾಲೆ ಮತ್ತು ಆಡಳಿತ ಮಂಡಳಿ ಹಾಗೂ ತರಬೇತುದಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಶ್ರೀನಿವಾಸ ಕುಳಾಯಿ ಟ್ರಸ್ಟಿನ ಸಮಾಜ ಸೇವೆ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಿಂದ ಪ್ರಪಂಚ ಮಕ್ಕಳಿಗಾಗಿ ಈ ಪ್ರಪಂಚ ಹಾಗೂ ಮಕ್ಕಳು ಸಂತೋಷವಾಗಿ ಜೀವನ ನಡೆಸಲು ಅಗತ್ಯವಿರುವ ವಾತಾವರಣ ನಿರ್ಮಾಣಕ್ಕಾಗಿ ಸರ್ವರ ಸಹಕಾರಕ್ಕಾಗಿ ವಿನಂತಿಸಿದರು. ಉದ್ಯಮಿ ಪ್ರದೀಪ್ ರವರು ಮಕ್ಕಳಿಗೆ ಅಗತ್ಯವಿರುವ ಪುಸ್ತಕ ಹಾಗೂ ಸಿಹಿತಿಂಡಿ ವಿತರಿಸಿದರು.


ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಕೇಶವ ಸಾಲ್ಯಾನ್, ಕಾರ್ಯದರ್ಶಿ ಜಯಂತ್ ಶೆಟ್ಟಿ, ಕೋಶಾಧಿಕಾರಿ ಜೀವನ್ ಬೆಳ್ಳಿಯಪ್ಪ, ಮುಖ್ಯೋಪಾಧ್ಯಾಯಿನಿ, ತರಬೇತುದಾರರು, ಪೋಷಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top