ಶ್ರೀನಿವಾಸ ದೇವಸ್ಥಾನ, ವೈಕುಂಠ ವಳಚ್ಚಿಲ್, ಮಂಗಳೂರು
.png)
ಮಂಗಳೂರು: ಶ್ರೀನಿವಾಸ ದೇವಸ್ಥಾನ, ವೈಕುಂಠ ವಳಚ್ಚಿಲ್, ಮಂಗಳೂರು ಇಲ್ಲಿ ನವೆಂಬರ್ 13 ರಂದು ನಡೆದ ಶ್ರೀನಿವಾಸ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಭ್ರಮದ ಸಂಪನ್ನಗೊಂಡಿದೆ. ಬೆಳಿಗ್ಗೆ ತುಳಸಿ ಪೂಜೆ, ಗೋ ಪೂಜೆ, ಶ್ರೀನಿವಾಸ ಲಕ್ಷ ತುಳಸಿ ಅರ್ಚನೆಗಳನ್ನು ವೈದಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದ ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.
ಸಂಜೆ ಮೈಸೂರು ನಗಾರಿ, ಹುಲಿ ಕುಣಿತ, ಭಜನೆ, ಕುಣಿತ ಭಜನೆಯು ಭಕ್ತರನ್ನು ಮಂತ್ರಮುಗ್ಧ ರನ್ನಾಗಿಸಿತು. ಸಂಜೆ ದೀಪೋತ್ಸವ ಹಾಗೂ ಮಹಾಪೂಜೆಯನ್ನು ನಡೆಸಲಾಯಿತು. ದೀಪೋತ್ಸವ ಸಂದರ್ಭದಲ್ಲಿ ಭಕ್ತರು ಸಾಂಪ್ರದಾಯಿಕ ದೀಪಗಳ ಜೊತೆಗೆ ಆಕಾಶ ದೀಪಗಳನ್ನು ಹಾರಿಸುವ ಮೂಲಕ ಆಕಾಶ ದೀಪೋತ್ಸವವನ್ನೂ ಆಚರಿಸಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಎ. ಶ್ಯಾಮ್‌ರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಸಿಎ.ಎ.ರಾಘವೇಂದ್ರ ರಾವ್, ಉಪಾಧ್ಯಕ್ಷ ಡಾ| ಎ. ಶ್ರೀನಿವಾಸ ರಾವ್, ನಿರ್ದೇಶಕಿ ವಿಜಯಲಕ್ಷ್ಮೀ ಆರ್. ರಾವ್, ಕಾರ್ಯದರ್ಶಿ ಮಿತ್ರಾ ಎಸ್. ರಾವ್, ಕಾಲೇಜಿನ ಎಲ್ಲಾ ಪ್ರಾಂಶುಪಾಲರುಗಳು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಊರ ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ