ಭಗವದ್ಗೀತೆ ಪರಂಪರೆ ಶಿಕ್ಷಣಕ್ಕೆ ಸ್ಪೂರ್ತಿ: ಸಾಲಿಗ್ರಾಮ ಗಣೇಶ್ ಶೆಣೈ

Upayuktha
0


ದಾವಣಗೆರೆ: ನಮ್ಮ ನಿಮ್ಮೆಲ್ಲರ ಸನಾತನ ಧರ್ಮದ ಐತಿಹಾಸಿಕ ಪರಂಪರೆ ಭಗವದ್ಗೀತೆಯಲ್ಲಿ ಇದೆ. ಈ ಪವಿತ್ರವಾದ ಭಕ್ತಿಯು ಮಕ್ಕಳ ಶಿಕ್ಷಣಕ್ಕೆ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆ ಸ್ಪೂರ್ತಿ. ಪಠ್ಯಪುಸ್ತಕ ಜತೆಯಲ್ಲಿ ಭಗವದ್ಗೀತೆಯ ಪಾರಾಯಣವನ್ನು ರೂಢಿಸಿಕೊಂಡರೆ ವಿದ್ಯಾಭ್ಯಾಸಕ್ಕೆ ಪರಿಪೂರ್ಣತೆ ಇರುತ್ತದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಹೇಳಿದರು.


ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮಂಗಲ್ಪಾಡಿಯ ಏಕಾಹ ಭಜನಾ ಮಂಡಳಿಯ ವಜ್ರ ಮಹೋತ್ಸವ ಸಮಿತಿ ಹಾಗೂ ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ 69ನೇ ರಾಜ್ಯೋತ್ಸವ ಪ್ರಯುಕ್ತ ಇತ್ತೀಚೆಗೆ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಮಕ್ಕಳಿಗೆ ರಾಜ್ಯ ಮಟ್ಟದ ಉಚಿತ ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟನೆ ಮಾಡಿ ಶೆಣೈಯವರು ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಮಕ್ಕಳು ಶಿಸ್ತು ಬದ್ದವಾಗಿ ಶೈಕ್ಷಣಿಕ ಕಾಳಜಿಯೊಂದಿಗೆ ಸಮಯಪ್ರಜ್ಞೆಯೊಂದಿಗೆ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶಕ್ಕೆ ಬುನಾದಿ ಎಂದರು.


ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗೀತಜ್ಞಾನ ಯಜ್ಞ ಸಂಸ್ಥೆಯ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ ಮಾತನಾಡಿ, ಮಕ್ಕಳ ಅಭಿವೃದ್ಧಿಗೆ ಮುಂದಿನ ಸಾಧನೆಗಳಿಗೆ ಪೋಷಕರು, ಶಿಕ್ಷಕರು ಬದ್ದತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.


ಮಂಗಲ್ಪಾಡಿಯ ಏಕಾಹ ಭಜನಾ ಮಂಡಳಿಯ ಟ್ರಸ್ಟಿಗಳಾದ ಲಿಂಗಪ್ಪ ಪಟೇಲ್, ದಾವಣಗೆರೆಯ ಕಲಾಕುಂಚ ಡಿ.ಸಿ.ಎಂ. ಶಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಹೆಚ್. ಚನ್ನಬಸಪ್ಪ, ಪ್ರಧಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಮಾತನಾಡಿ, ಮಕ್ಕಳ ಮಾನವೀಯ ಮೌಲ್ಯ ಬೆಳವಣಿಗೆ ಇಂತಹ ಧಾರ್ಮಿಕ ಚಟುವಟಿಕೆಗಳು ಅತ್ಯಗತ್ಯ ಎಂದು ಮಕ್ಕಳಿಗೆ ಶುಭ ಕೋರಿದರು.


ಈ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ತೀರ್ಪುಗಾರರಾದ ಸಂಜಯ ಬೇಕಲ್,  ಸರೋಜ ಭಟ್, ಸುರೇಖಾ ಪುಣಿಂಚಿತ್ತಾಯ, ಜಯಲಕ್ಷ್ಮಿ ನಂದೋಡಿ, ಯಶೋದಾ ಕೈರಂಗಳ, ಲೀಲಾವತಿ ಉಳ್ಳಾಲ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಚಿತ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಮಕ್ಕಳ ವಯೋಮಾನದ ಹಂತದಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹೀಗೆ ವಿಂಗಡಿಸಿ ಸ್ಪರ್ಧೆ ನಡೆಸಿ ಬಹುಮಾನ ವಿಜೇತರಿಗೆ ಸ್ಮರಣಿಕೆ, ಪುಸ್ತಕ, ನಗದು ಬಹುಮಾನ, ಅಭಿನಂದನಾ ಪತ್ರ ವಿತರಿಸಲಾಯಿತು.


ವಿದ್ಯಾರ್ಥಿಗಳಾದ ವೇದಾಂತ್ ಕಾರಂತ್, ಪ್ರಣವ್ ಕೃಷ್ಣ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ವೈಭವಪೂರ್ಣ ಆಧ್ಯಾತ್ಮ ಪರಂಪರೆಯ ಸಮಾರಂಭದಲ್ಲಿ ಅಶೋಕ ಬಾಡೂರು ಸ್ವಾಗತಿಸಿದರು. ಸಾಹಿತಿ ಶ್ರೀಮತಿ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಚಂದನ್ ಕಾರಂತ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top