ಮಂಗಳೂರು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾನಿಲಯದ ಬೆಂಗಳೂರು ಮತ್ತು ಭೋಪಾಲ್ ಕ್ಯಾಂಪಸ್‍ನಲ್ಲಿ ಲಭ್ಯವಿರುವ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಮತ್ತು ಭೋಪಾಲ್ ಕ್ಯಾಂಪಸ್‍ಗಳಲ್ಲಿ ಎರಡು ವರ್ಷಗಳ ಪೂರ್ಣಕಾಲಿಕ ಸ್ನಾತಕೋತ್ತರ ಕಾರ್ಯಕ್ರಮಗಳಾದ ಎಂಎ ಶಿಕ್ಷಣ, ಎಂಎ ಅಭಿವೃದ್ಧಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (ಎಂ.ಪಿ.ಎಚ್), ಎಂಎ ಅರ್ಥಶಾಸ್ತ್ರ, ಎಂಎ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಹಾಗೂ ನಮ್ಮ ನಾಲ್ಕು ವರ್ಷಗಳ ಪೂರ್ಣಕಾಲಿಕ ವಸತಿ ಸಹಿತ ಪದವಿ ಕಾರ್ಯಕ್ರಮಗಳಾದ ಬಿಎ ಆನರ್ಸ್ ಮತ್ತು ಬಿ.ಎಸ್ಸಿ ಆನರ್ಸ್ ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿಶ್ವವಿದ್ಯಾಲಯದ ವೆಬ್ ಸೈಟ್ ಮೂಲಕ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 2024ರ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಆಸಕ್ತಿ ಹೊಂದಿರುವವರಿಗಾಗಿ, ಅರ್ಜಿ ಸಲ್ಲಿಸಲು 2024ರ ನವೆಂಬರ್ 14 ಕೊನೆಯ ದಿನವಾಗಿದೆ. ಬೋಧನಾ ಶುಲ್ಕ ಮತ್ತು ವಸತಿ ವೆಚ್ಚಗಳನ್ನು ಒಳಗೊಂಡ ಅಗತ್ಯತೆ-ಆಧರಿತ ಹಣಕಾಸಿನ ನೆರವನ್ನು (ಪೂರ್ಣ ಅಥವಾ ಭಾಗಶಃ) ನೀಡುತ್ತದೆ ಎಂದು ಪ್ರಕಟಣೆ ಹೇಳಿದೆ.
ವೃತ್ತಿ ಅವಕಾಶಗಳು ಮತ್ತು ನೇಮಕಾತಿಗೆ ನೆರವು: ನಮ್ಮ ಪದವೀಧರರಿಗೆ ಸವಾಲುಭರಿತ ಮತ್ತು ನಿರೀಕ್ಷೆಗೆ ತಕ್ಕ ವೃತ್ತಿ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗುವ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಘಟಕವಿದೆ. ಈ ಘಟಕವು ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕೊಡುಗೆ ನೀಡಲು ಸೂಕ್ತ ಉದ್ಯೋಗವನ್ನು ಗಳಿಸುವಲ್ಲಿ ಅವರಿಗೆ ಸಹಾಯ ಮಾಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ವಿವರಗಳಿಗೆ ಇಮೇಲ್: outreach@apu.edu.in ವೆಬ್‍ಸೈಟ್: www.azimpremjiuniversity.edu.in ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ