ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಗೆ 18 ಪದಕ

Upayuktha
0


ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ತುಮಕೂರು ಇದರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 07 ರಿಂದ 10 ರವೆರೆಗೆ ಮಹಾತ್ಮ ಗಾಂಧಿ ಕ್ರೀಡಾಂಗಣ ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 7 ಚಿನ್ನ, 6 ಬೆಳ್ಳಿ ಮತ್ತು 05 ಕಂಚಿನ ಪದಕಗಳೊಂದಿಗೆ 18 ಪದಕಗಳನ್ನು ಪಡೆದುಕೊಂಡಿತು. ರಾಷ್ಟ್ರ ಮಟ್ಟದ ಅಥ್ಲೆಟಿಕ್  ಕ್ರೀಡಾಕೂಟಕ್ಕೆ 16 ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ.


ಬಾಲಕರ ವಿಭಾಗದಲ್ಲಿ: ಶೋಭಿತ್ ದೇವಾಡಿಗ-ಚಕ್ರಎಸೆತ (ಪ್ರಥಮ), ನಿತಿನ್ ಎಲ್ ಜಿ-ಚಕ್ರಎಸೆತ (ದ್ವಿತೀಯ), ಅಬ್ದುಲ್ ರಜಕ್- ಹ್ಯಾಮರ್ ಎಸೆತ (ದ್ವಿತೀಯ), ಶಿವಾನಂದ ಪೂಜಾರಿ-800ಮೀ (ತೃತೀಯ), 4x400ಮೀ ರಿಲೇ (ದ್ವಿತೀಯ), ತೇಜಲ್ ಕೆ ಆರ್-110ಮೀ ಹರ್ಡಲ್ಸ್  (ಪ್ರಥಮ), ದಯಾನಂದ-200ಮೀ (ತೃತೀಯ), 4x400ಮೀ ರಿಲೇ (ದ್ವಿತೀಯ), ಸುಮಂತ್ ಬಿ ಎಸ್-ತ್ರಿವಿಧ ಜಿಗಿತ (ದ್ವಿತೀಯ), ವಿನಾಯಕ್ - 5ಕಿಮೀ ನಡಿಗೆ (ಪ್ರಥಮ), ನೊಯೆಲ್-ಉದ್ದ ಜಿಗಿತ (ತೃತೀಯ), ವಿನೋದ್-4x100ಮೀ ರಿಲೇ (ಪ್ರಥಮ), ಪೃಥ್ವಿರಾಜ್-4x100ಮೀ ರಿಲೇ (ಪ್ರಥಮ), ಧ್ರುವ-4x100ಮೀ ರಿಲೇ (ಪ್ರಥಮ), ರಾಘವೇಂದ್ರ- 4x400ಮೀ ರಿಲೇ(ದ್ವಿತೀಯ).


ಬಾಲಕಿಯರ ವಿಭಾಗದಲ್ಲಿ: ವಿಸ್ಮಿತಾ-ಗುಂಡು ಎಸೆತ (ಪ್ರಥಮ), ವೃತಾ ಹೆಗ್ಡೆ-ಗುಂಡು ಎಸೆತ(ದ್ವಿತೀಯ), ಅಂಬಿಕಾ-3ಕಿಮೀ ನಡಿಗೆ (ಪ್ರಥಮ), ಚರಿಷ್ಮಾ-1500ಮೀ (ದ್ವಿತೀಯ), 4ಕಿಮೀ ಗುಡ್ಡಗಾಡು ಓಟ (ತೃತೀಯ), ಲಹರಿ-4x100ಮೀ ರಿಲೇ (ಪ್ರಥಮ), ಚೊಂಡಮ್ಮ- 4x100ಮೀ ರಿಲೇ (ಪ್ರಥಮ), ವೈಷ್ಣವಿ-4x100ಮೀ ರಿಲೇ (ಪ್ರಥಮ). ವಿಜೇತರಾದ ಕ್ರೀಡಾಪಟುಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top