ಕೆನರಾ ಕಾಲೇಜಿನಲ್ಲಿ 69ನೆಯ ಕನ್ನಡ ರಾಜ್ಯೋತ್ಸವ ಆಚರಣೆ

Upayuktha
0


ಮಂಗಳೂರು: ಕೆನರಾ ಕಾಲೇಜಿನಲ್ಲಿ 69ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಸಹಪ್ರಾಧ್ಯಾಪಕರಾದ ಡಾ.ಮಾಧವ ಮೂಡುಕೋಣಾಜೆ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ಕವಿಗಳು ಸಾಹಿತಿಗಳು ಕನ್ನಡ ಭಾಷೆ ನೆಲ ಜಲದ ಉಳಿವಿಗಾಗಿ ನಡೆಸಿದ ಹೋರಾಟವನ್ನು, ನೀಡಿದ ಕೊಡುಗೆಯನ್ನು ಸ್ಮರಿಸಿದರು.


ಪರಕೀಯರು ನಮ್ಮನ್ನು ಭೌತಿಕ ಮತ್ತು ಬೌದ್ಧಿಕವಾಗಿ ಆಕ್ರಮಣ ಮಾಡಿದ್ದರಿಂದ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೀಳರಿಮೆಯನ್ನು ನಿರ್ಮಾಣ ಮಾಡುವ ಶಿಕ್ಷಣ ಪದ್ಧತಿ, ಭಾಷೆ ಮೇಲೆ ನಡೆದ ದಾಳಿ ನಮ್ಮ ಸಂಸ್ಕೃತಿಯ ಮೇಲೂ ಪ್ರಭಾವ ಬೀರಿದೆ. ಇಂದು ಮಾತೃಭಾಷೆಯನ್ನು ಮರೆಯುವ ಮಟ್ಟಕ್ಕೆ ಮನಸ್ಸು ಕಲುಷಿತವಾಗಿದೆ. ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೆ ಕನ್ನಡ ಭಾಷೆ ನೆನಪು ಸದಾ ಇರಬೇಕು. ಇದು ಮಾನವೀಯತೆ, ಸಂಬಂಧ, ಪ್ರೀತಿ ಎಲ್ಲವನ್ನು ಉಳಿಸುವ ಭಾಷೆ ಎಂದು ಹೇಳಿದರು.


ಕಾಲೇಜು ಪ್ರಾಂಶುಪಾಲೆ ಡಾ.ಪ್ರೇಮಲತಾ.ವಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು.ಎಸ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೇಘನಾ ಅತಿಥಿಗಳನ್ನು ಪರಿಚಯಿಸಿದರು.ಅನನ್ಯ.ಜಿ ಶೆಟ್ಟಿ ವಂದಿಸಿದರು. ಅಭಿಷೇಕ್ ವಿ ಪಾಟೀಲ್ ನಿರೂಪಿಸಿದರು. ಕೇಂದ್ರ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಲ, ಉಪನ್ಯಾಸಕಿ ಶೈಲಜಾ ಪುದುಕೋಳಿ, ಎಲ್ಲಾ ಶಿಕ್ಷಕ ಶಿಕ್ಷಕರೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.


إرسال تعليق

0 تعليقات
إرسال تعليق (0)
To Top