ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ)ಯ ವತಿಯಿಂದ ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟ ಬೆಳ್ತಂಗಡಿ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ಬಾಲಕ-ಬಾಲಕಿಯರು ಪಾಲ್ಗೊಂಡಿದ್ದರು.
ಸುದೀಕ್ಷಾ 400ಮೀ., 3000ಮೀ. ಓಟದಲ್ಲಿ ಪ್ರಥಮ ಸ್ಥಾನ, 4×400ಮೀ. ರಿಲೇಯಲ್ಲಿ ಸುದೀಕ್ಷಾ, ನಿಶ್ಮಿತಾ, ನಿಕ್ಷಿತಾ, ಶ್ವೇತಾ ಪ್ರಥಮ ಸ್ಥಾನ, ಶ್ವೇತಾ ಜ್ಯಾವಲಿನ್ ತ್ರೋದಲ್ಲಿ ದ್ವಿತೀಯ ಸ್ಥಾನ, ನಿಕಿತಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಕಿಶನ್ ಕುಮಾರ್ 800ಮೀ.,ಜ್ಯಾವಲಿನ್ ತ್ರೋದಲ್ಲಿ ದ್ವಿತೀಯ ಸ್ಥಾನ, ವಿಶಾಂತ್ ಉದ್ದ ಜಿಗಿತ, ಡಿಸ್ಕಸ್ ತ್ರೋದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಉಳಿದಂತೆ ನಿಕಿತಾ ಟ್ರಿಪಲ್ ಜಿಗಿತದಲ್ಲಿ, ಹೀನಾ ಕೌಸರ್ 100 ಮೀ. ಹಾಗೂ 200 ಮೀ. ಓಟದಲ್ಲಿ 4×400 ಮೀ ರಿಲೇಯಲ್ಲಿ ಕಿಶನ್ ಕುಮಾರ್, ವಿಶಾಂತ್, ಸುಮಂತ್, ರಕ್ಷಿತ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ