ಮಂಗಳೂರು: ಲಯನ್ ಕದ್ರಿಹಿಲ್ಸ್ ಮಂಗಳೂರು, ಶ್ರೀರಾಮಾಂಜನೇಯ ಭಜನಾ ಮಂಡಳಿ ಪಲ್ಲಮಜಲು, ಇಂಡಿಯನ್ ಕಾನ್ಸರ್ ಸೊಸೈಟಿ ಮಂಗಳೂರು ಆಶ್ರಯದಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ನುರಿತ ವೈದ್ಯರಿಂದ ಬಿ.ಸಿ.ರೋಡು ಪಲ್ಲಮಜಲು ಎಂಬಲ್ಲಿ ಅ.20ರಂದು ಭಾನುವಾರ ಆಯುರ್ವೇದ ಹಾಗೂ ಆಂಗ್ಲ ಪದ್ಧತಿಯ ಚಿಕಿತ್ಸಾ ಶಿಬಿರ ನಡೆಯಲಿದೆ.
ಇದೇ ವೇಳೆ ಕಾನ್ಸರ್ ತಪಾಸಣೆ ಹಾಗೂ ಉಚಿತ ರಕ್ತ ಪರೀಕ್ಷೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಸಹ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಣಚೂರು ವೈದ್ಯಕೀಯ ಸಂಸ್ಥೆಯ ಚೇರ್ ಮನ್ ಡಾ ಹಾಜಿ ಕಣಚೂರು ಮೋನು, ನಿರ್ದೇಶಕ ಅಬ್ದುಲ್ ರಹಿಮಾನ್ ಹಾಗೂ ಆಯುರ್ವೇದ ವೈದ್ಯಕೀಯ ನಿರ್ದೇಶಕ ಲಯನ್ ಡಾ ಸುರೇಶ ನೆಗಳಗುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ