ಬಳ್ಳಾರಿ: ಮುಡಾ ಪ್ರಕರಣದ ತನಿಖೆ ಬಳಿಕ ನಿಮ್ಮ ಮೇಲಿರುವ ಆರೋಪ ಮುಕ್ತವಾದರೆ. ಶುದ್ಧರಾಮಯ್ಯರಾಗಿ ಬನ್ನಿ ಎಂದು ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಚಾಟಿ ಬೀಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು. ಮುಡಾ ಹಗರಣದಲ್ಲಿ ರಾಜೀನಾಮೆ ನೀಡಬೇಕೆಂದು ಪಾದಯಾತ್ರೆ ಮಾಡಿದ್ದೇವು.
ನಮ್ಮ ಪಾದಯಾತ್ರೆಗೆ ಸಿದ್ದರಾಮಯ್ಯ ಕೌಂಟರ್ ಕಾರ್ಯಕ್ರಮ ಮಾಡಿದ್ರು. ರಾಜ್ಯಪಾಲರ ಬಗ್ಗೆ ಎ ಕವಚನದಲ್ಲಿ ಮಾತನಾಡಿ ಅವರಿಗೆ ಅವಮಾನ ಮಾಡಿದ್ರು. ರಾಜ್ಯಪಾಲರ ಹಕ್ಕಿನ ಬಗ್ಗೆ ಮಾತನಾಡಿ ಈಬಹಿಂದೆ ಯಡಿಯೂರಪ್ಪ ಮೇಲೆ ಅರೋಪ ಬಂದಾಗ ರಾಜೀನಾಮೆಗೆ ಅಗ್ರಹಿಸಿದ್ರು. ಇಗ ಅದು ಬೇರೆ ಇದು ಬೇರೆ ಎನ್ನುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತು ಆಡಳಿತದಲ್ಲಿದ್ದಾಗ ಒಂದುಮಾತು ಡಬಲ್ ಸ್ಟಾಂಡ್ ಸಿದ್ಧರಾಮಯ್ಯ ಇವರು ಎಂದು ವ್ಯಂಗವಾಡಿದರು. ಈಗ ಸಿದ್ದರಾಮಯ್ಯ ಮುಖದಲ್ಲಿ ಮಂದಾಹಾಸವಿಲ್ಲ ಕೇವಲ ರಾಜೀನಾಮೆ ಕೊಡಲ್ಲ, ನಾನು ತಪ್ಪೇ ಮಾಡಿಲ್ಕ ಅನ್ನೋದು ಬಿಟ್ರೇ ಇನ್ನೇನು ಮಾತನಾಡುತ್ತಿಲ್ಲ.
ಸೈಟ್ ಯಾಕೆ ಹಿಂದಕ್ಕೆ ಕೊಡಬೇಕು ಎಂದವರು ಈಗ ಇಡಿ ಎಂಟ್ರಿ ಆಗುತ್ತದೆ ಎಂದ ಕೂಡಲೇ ವಾಪಸ್ ಕೊಡಿಸಿದ್ದಾರೆ. ಡಿನೋಟಿಫೈ ವಿಚಾರದಲ್ಲಿ ಯಾರಾರ ಬಳಿ ಎಷ್ಟೆಷ್ಟು ಹಣ ಪಡೆದಿದ್ದಾರೆ ಎಲ್ಲರಿಗೂ ಗೊತ್ತು. ಕಳ್ಳತನ ಪ್ರಕರಣ ಮೈಮೇಲೆ ಬಂದಾಗ ಕಳ್ಳತನದ ವಸ್ತು ವಾಪಾಸ್ ನೀಡಿದರೆ ಮುಗಿದು ಹೋಯ್ತಾ? ಮೂಡದಲ್ಲಿ ಐದು ಸಾವಿರಕ್ಕೂ ಹೆಚ್ಚು ಕೋಟಿ ಹಗರಣ ನಡೆದಿದೆ ಇದರ ಬಗ್ಗೆ ವಿಚಾರಣೆ ನಡೆಯಬೇಕು ಎಂದರು. ದಲಿತ, ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಸಂವಿಧಾನದ ಬಗ್ಗೆ ಗೌರವ ಇದ್ರೇ ಮೊದಲು ರಾಜೀನಾಮೆ ನೀಡಬೇಕು.
ಓಟ್ ಬ್ಯಾಂಕ್ ಗಾಗಿ ಜಾತಿಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು ಎಂದರು. ವಿಧಾನ ಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಮಾಡಿದ್ರೇ ಸುಮ್ಮನೆ ಇರುತ್ತೀರಾ.ಡಿಜಿ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಏನು ಕ್ರಮ ಕೈಗೊಂಡರು. ಗಣೇಶ ಹಬ್ಬಕ್ಕೆ ನೂರಾರು ನಿಯಮ ಟಿಪ್ಪು ಜಯಂತಿಗೆ ಯಾವುದೇ ನಿಯಮವಿಲ್ಲ.
ಪ್ಯಾಲೆಸ್ಟೈನ್ ಜಿಂದಾಬಾದ್ ಎನ್ನುತ್ತಾರೆ. ಇಟಲಿಯ ಮೇಡಂ ಮನವೊಲಿಸಲು ಸಿದ್ದರಾಮಯ್ಯ ಅವರು ಈ ರೀತಿ ತಪ್ಪು ಮಾಡಿದ ಯಾರ ಮೇಲೂ ಕ್ರಮ ಕೈಗೊಳ್ಳಲ್ಲ ಎಂದು ಆರೋಪಿಸಿದರು. ಎಂಎಲ್ ಸಿ ವೈ.ಎಂ.ಸತೀಶ್, ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರಾದ ಹೆಚ್.ಹನುಮಂತಪ್ಪ, ಕೆ.ಎ. ರಾಮಲಿಂಗಪ್ಪ ಎರ್ರಂಗಳಿ ತಿಮ್ಮಾರೆಡ್ಡಿ, ಮೊದಲಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ