ಬಳ್ಳಾರಿ: ಅಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ವತಿಯಿಂದ ದಸರಾ ಭಾವ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಅಧ್ಯಕ್ಷರಾದ ಶಂಕರ ಬಂಡೆ ಯಲ್ಲನಗೌಡ ಕಲೆಯನ್ನು ಜನರಿಗೆ ಅಸಕ್ತಿ ರೀತಿಯಲ್ಲಿ ಪ್ರದರ್ಶನ ಮಾಡಬೇಕು ಅಗ ಮಾತ್ರ ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಟಿ ವಿ ಸಿರಿಯಲ್ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ಬಹಳ ಸಂತೋಷ ಎಂದು ನುಡಿದರು.
ನಿವೃತ್ತ ಬ್ಯಾಂಕ್ ನೌಕರರಾದ ಗೆಣಿಕೆಹಾಳು ಶಾಂತಪ್ಪ ನವರು ನಮ್ಮ ಬ್ಯಾಂಕ್ ಕಾಲೋನಿ ಉದ್ಯಾನವನದಲ್ಲಿ ಟ್ರಸ್ಟ್ ನವರು ದಸರಾ ಭಾವ ಸಂಗಮ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಸಂತೋಷ ಪ್ರತಿ ವರ್ಷ ದಸರಾ ನವರಾತ್ರಿ ಸಂದರ್ಭವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನುಡಿದರು.
ಟ್ರಸ್ಟ್ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಸ್ವಾಗತ ಕೋರಿದರು. ಮುಖ್ಯ ಅತಿಥಿಗಳಾಗಿ ಬಸವರಾಜ ನಿವೃತ್ತ ಬ್ಯಾಂಕ್ ನೌಕರರು, ನೃತ್ಯ ಗುರುಗಳಾದ ಎಸ್ ಕೆ ಜಿಲಾನಿ ಭಾಷ, ಸೂರ್ಯ ಕಲಾ ಟ್ರಸ್ಟ್ ಅಧ್ಯಕ್ಷರಾದ ಕೆ ಸಿ ಸುಂಕಣ್ಣ, ರಾಘವ ಮೆಮೋರಿಯಲ್ಅ ಸೋಸಿಯೇಷನ್ ಜಂಟಿ ಕಾರ್ಯದರ್ಶಿಯಾದ ಎಂ ರಾಮಾಂಜನೇಯಲು, ಸಂಗೀತ ಗುರುಗಳಾದ ರಾಘವೇಂದ್ರ ಗೂಡುದೂರು ಆಗಮಿಸಿದ್ದರು. ತದನಂತರ ರಾಘವೇಂದ್ರ ಗೂಡುದೂರು ಮತ್ತು ತಂಡದಿಂದ ವಚನ ಗಾಯನ, ಎಮ್ಮಿಗನೂರು ಜಡೆಪ್ಪ ಮತ್ತು ತಂಡದಿಂದ ಜಾನಪದ ಗಾಯನ, ಎಸ್ ಕೆ ಜಿಲಾನಿ ಭಾಷ ಮತ್ತು ತಂಡದಿಂದ ಜಾನಪದ ನೃತ್ಯ, ಸೂರ್ಯ ಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯವನ್ನು ಪ್ರದರ್ಶನ ನೀಡಿದರು.
ಕಾರ್ಯಕ್ರಮ ನಿರೂಪಣೆ ವೀರೇಶ ದಳಾವಾಯಿ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಕುಮಾರ್ ಸ್ವಯಂ ಮತ್ತು ಗೆಳೆಯರು, ಶ್ರೀಮತಿ ಜ್ಯೋತಿ ಯಲ್ಲನಗೌಡ, ಸುಬ್ಬಣ್ಣ, ರಾಜಶೇಖರ, ರಾಜೇಶ್ ,ನಾಗನ ಗೌಡ, ಶಿವರುದ್ರ ಸ್ವಾಮಿ ಮತ್ತು ಬ್ಯಾಂಕ್ ಕಾಲೋನಿ ಜನರು ಬಹಳ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


