ಬಳ್ಳಾರಿ:ವ್ಯಾಯಾಮ, ಕಾಲ್ನಡಿಗೆ, ಯೋಗ ಗಳಂತಹ ದೈಹಿಕ ಚಟುವಟಿಕೆಗಳಿಂದ ದೇಶದ ಜನರು ಉತ್ತಮ ಆರೋಗ್ಯ ವನ್ನು ಸಾಧಿಸುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟೀಯ ಅಂಚೆ ಸಪ್ತಾಹದ ಅಂಗವಾಗಿ " ಫಿಟ್ ಪೋಸ್ಟ್, ಫಿಟ್ ಇಂಡಿಯಾ " ಎಂಬ ವಿಶೇಷ ಕಾಲ್ನಡಿಗೆ ಜಾಥಾ ವನ್ನು ಅಂಚೆ ನೌಕರರು ಹಮ್ಮಿಕೊಂಡಿದ್ದೇವೆ ಎಂದು ಜಾಥಾವನ್ನು ಉದ್ಘಾಟಿಸಿದ ಅಂಚೆ ಅಧೀಕ್ಷಕರಾದ ಪಿ.ಚಿದಾನಂದ ರವರು ಅಭಿಪ್ರಾಯ ಹಂಚಿಕೊಂಡರು.
ಅಲ್ಲದೇ ಉತ್ತಮ ಆರೋಗ್ಯದಿಂದ ನೌಕರರು ಉತ್ತಮ ಸೇವೆಯನ್ನು ಅಂಚೆ ಇಲಾಖೆಯ ಗ್ರಾಹಕರಿಗೆ ಸಲ್ಲಿಸಲು ಸಾಧ್ಯವಾಗುತ್ತದೆ. ಇದರಿಂದ ಅಂಚೆ ಇಲಾಖೆಯು ಸದೃಢವಾಗಿ ಭಾರತ ದೇಶವೂ ಸದೃಢವಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಮಾತನಾಡಿದ ಅಂಚೆ ಅಧೀಕ್ಷಕರು, ನಡಿಗೆ ಮೂಲಕ ಆರೋಗ್ಯದ ಸಂದೇಶ ಸಾರುವ ಈ ಕಾರ್ಯಕ್ರಮವನ್ನು ಬಳ್ಳಾರಿ ಯ ಕೋಟೆ ಭಾಗದಲ್ಲಿ ಈ ದಿನ ಹಮ್ಮಿಕೊಂಡಿದ್ದು ಸುಮಾರು 150ಕ್ಕೂ ಅಧಿಕ ಅಂಚೆ ನೌಕರರು ನಡಿಗೆ ಯಲ್ಲಿ ಹೆಜ್ಜೆ ಹಾಕಿದ್ದು, ರಾಷ್ಟೀಯ ಸಪ್ತಾಹದ ಅಂಗವಾಗಿ ದಿನಾಂಕ 7 ಅಕ್ಟೋಬರ್ ನಿಂದ 11 ಅಕ್ಟೋಬರ್ ವರೆಗೆ ದಿನಕ್ಕೊಂದು ವಿಶೇಷ ಕಾರ್ಯಕ್ರಮವನ್ನು ಅಂಚೆ ಕಚೇರಿಗಳಲ್ಲಿ ಆಯೋಜಿಸಿದ್ದು, 7 ರಂದು ಗ್ರಾಹಕರ ಸಭೆ, 8 ರಂದು ಅಂಚೆಚೀಟಿ ಮೌಲ್ಯ ಸಾರಲು ಶಾಲೆಗಳಲ್ಲಿ ಕಾರ್ಯಕ್ರಮ, 9 ರಂದು ವಿಶ್ವ ಅಂಚೆ ದಿನಾಚರಣೆಯ ನಿಮಿತ್ತ ಕಾಲ್ನಡಿಗೆ ಜಾಥಾ, 10 ರಂದು ಆಧಾರ್ ಜೋಡಣೆ, ಜೀವವಿಮೆ ಮತ್ತು ಖಾತೆ ತೆರೆಯುವ ಜನ ಸಂಪರ್ಕ ಕಾರ್ಯಕ್ರಮಗಳು ಜರುಗಲಿದೆ ಎಂದು ಮಾಧ್ಯಮ ದೊಂದಿಗೆ ಮಾಹಿತಿ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ವಿಭಾಗೀಯ ಕಚೇರಿಯ ಸಹಾಯಕ ಅಧೀಕ್ಷಕ ಅರುಣ್ ಕಾಮತ್, ಬಳ್ಳಾರಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಕೆ ರಾಜಶೇಖರ್ ಹಾಗೂ ವಿಭಾಗೀಯ ಕಚೇರಿಯ, ಪ್ರಧಾನ ಅಂಚೆ ಕಚೇರಿಯ ಹಾಗೂ ನಗರದ ವಿವಿಧ ಅಂಚೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಈ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ