ಪಣಜಿ: ಗೋವಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳು ಭಾಷಿಕರಿದ್ದೀರಿ. ಇಂದು ಹೊರನಾಡ ಗೋವೆಯಲ್ಲಿ ತುಳುಕೂಟ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ. ತುಳು ಭಾಷಿಕರು ಜಗತ್ತಿನಾದ್ಯಂತ ನೆಲೆಸಿದ್ದಾರೆ. ಗೋವಾದಲ್ಲಿ ತುಳು ಭವನ ನಿರ್ಮಾಣ ಮಾಡಿ ಇದಕ್ಕೆ ನಮ್ಮೆಲ್ಲ ಸಹಾಯ ಸಹಕಾರ ಇರಲಿದೆ ಎಂದು ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನೀಲಕುಮಾರ್ ನುಡಿದರು.
ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ತುಳು ಕೂಟವನ್ನು ಅಕ್ಟೋಬರ್ 20 ರಂದು ಸಂಜೆ ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿದ್ದ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ತುಳು ಭಾಷೆ ಪುರಾತನ ಭಾಷೆ. ಗೋವಾದಲ್ಲಿ ಇಂದು ಗಣೇಶ ಶೆಟ್ಟಿ ರವರ ನೇತೃತ್ವದಲ್ಲಿ ಉದ್ಘಾಟನೆಗೊಂಡ ತುಳು ಕೂಟಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ವಿ. ಸುನೀಲಕುಮಾರ್ ನುಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ ಕುಮಾರ್ ರೈ ಮಾತನಾಡಿ-ಗೋವಾದಲ್ಲಿ ತುಳು ಕೂಟಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಲಭಿಸುವಂತೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗೋವಾದಲ್ಲಿ ತುಳು ಕೂಟ ಸ್ಥಾಪನೆಯಾಗಿರುವುದು ಸಂತಸ ತಂದಿದೆ, ನಾನು ನಿಮ್ಮೊಂದಿಗೆ ಯಾವಾಗಲೂ ಇದ್ದೇನೆ ಎಂದರು.
ತುಳು ಕೂಟ ಗೋವಾ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು ಮಾತನಾಡಿ-ಈ ಸಮಾರಂಭದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದು ನನ್ನ ಪ್ರಯತ್ನ ಸಾರ್ಥಕವಾಯಿತು. ತುಳು ಭಾಷಿಕರು ನಾವೆಲ್ಲರೂ ಒಂದೇ ಕುಟುಂಬದವರು. ಮುಂದೆಯೂ ಕೂಡ ಒಳ್ಳೊಳ್ಳೆಯ ಕಾರ್ಯಮ ಮಾಡೋಣ. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ತುಳು ಕೂಟ ಗೋವಾ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು ಧನ್ಯವಾದ ಸಲ್ಲಿಸಿದರು.
ತುಳು ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪುರಾತನ ವಸ್ತುಗಳ ಪ್ರದರ್ಶನ ಕೂಡ ನಡೆಸಲಾಯಿತು. ರಾಜ ಮಹಾರಾಜರು ಬಳಸಿದ ವಸ್ತುಗಳು, ನಗನಾಣ್ಯಗಳು, ತುಳು ನಾಡಿನ ಪುರಾತನ ವಸ್ತುಗಳ ಪ್ರದರ್ಶನ ನಡೆಸಲಾಯಿತು. ಶಿವದೂತೆ ಗುಳಿಗೆ ಎಂಬ ಪ್ರಸಿದ್ಧ ಪೌರಾಣಿಕ ನಾಟಕದ 650 ನೇಯ ಪ್ರದರ್ಶನ ನಡೆಸಲಾಯಿತು. ಈ ನಾಟಕ ಜನ ಮೆಚ್ಚುಗೆಗೆ ಕಾರಣವಾಯಿತು.
ಈ ಸಂದರ್ಭದಲ್ಲಿ ಯಶಸ್ವಿ ಉದ್ಯಮಿ ಹಾಗೂ ಅಖಿಲ ಭಾರತ ತುಳು ಕೂಟದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು., ದಕ್ಷಿಣ ಕನ್ನಡ ಕಂಬಳ ಕಮಿಟಿಯ ಕಾರ್ಯದರ್ಶಿ ಕೆ.ಗುಣಪಾಲ ಕದಂಬ, ಪ್ರೊ. ಸುಧಾಕರ ಶೆಟ್ಟಿ, ಮೂಡುಬಿದ್ರೆ ತುಳು ಕೂಟದ ಅಧ್ಯಕ್ಷ ಧನಕೀರ್ತಿ ಬಾಳಿಪ್, ಪುತ್ತೂರು ತುಳು ಕೂಟದ ಅಧ್ಯಕ್ಷ ಸಿಪ್ರಿನ್ ಡಿಸೋಜಾ, ಗೋವಾ ತುಳು ಕೂಟದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ತುಳು ಕೂಟ ಗೋವಾದ ಗೌರವಧ್ಯಕ್ಷ ಚಂದ್ರಹಾಸ ಅಮಿತ್, ತುಳು ಕೂಟ ಗೋವಾದ ಗೌರವಧ್ಯಕ್ಷ ವಿಜಯೇಂದ್ರ ಶೆಟ್ಟಿ, ತುಳು ಕೂಟ ಗೋವಾದ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು, ಗೋವಾ ತುಳು ಕೂಟದ ಕಾರ್ಯದರ್ಶಿ ಶಶಿಧರ ನಾಯ್ಕ, ಗೋವಾ ತುಳು ಕೂಟದ ಖಜಾಂಚಿ ಸಿಎ ಪ್ರಶಾಂತ ಜೈನ್ ಪತ್ತಿತರರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಯೆಕ್ಕಾರ, ಸೃತಿ ಶೆಟ್ಟಿ ಗೋವಾ ಕಾರ್ಯಕ್ರಮ ನಿರೂಪಿಸಿದರು. ಗೋವಾ ರಾಜ್ಯಾದ್ಯಂತ ವಿವಿದೆಡೆ ನೆಲೆಸಿರುವ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತುಳು ಕೂಟ ಗೋವಾದ ಕಾರ್ಯದರ್ಶಿ ಶಶಿಧರ್ ನಾಯ್ಕ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ