ಸೇವಾ ಯೋಜನಾ ಘಟಕಗಳು ಮತ್ತು ರೋವರ್ಸ್& ರ್ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಇಂದು ಗಾಂಧಿ ಜಯಂತಿ ದಿನಾಚರಣೆ
ಉಜಿರೆ: “ ಸೇವೆ ಎಂದರೆ ಬೇರೆಯವರು ಏನು ಮಾಡುತ್ತಾರೆ ಎಂಬುವುದನ್ನು ನಾವು ಲೆಕ್ಕ ಹಾಕುವುದಲ್ಲ. ಬದಲಾಗಿ ನಮ್ಮಿಂದ ಏನು ಮಾಡಲು ಸಾಧ್ಯ ಹಾಗೆ ನಾವು ಏನು ಮಾಡುತ್ತಿದ್ದೇವೆ ಎನ್ನುವುದೇ ಸೇವೆಯ ಮೊದಲ ಹೆಜ್ಜೆ” ಎಂದು ಉಜಿರೆಯ ಶ್ರೀ. ಧ. ಮಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯರ್ವಾಹಕ ನಿರ್ದೇಶಕ ಕೆ.ಎನ್ ಜನಾರ್ದನ್ ಹೇಳಿದರು.
ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ರೋವರ್ಸ್& ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಇಂದು ಗಾಂಧಿ ಜಯಂತಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆ.ಎನ್ ಜನಾರ್ದನ್ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಮಹಾತ್ಮ ಗಾಂಧಿಯವರ ಜನ್ಮ ದಿನವಾದ ಇಂದು ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಆಚರಣೆಯನ್ನು ನಿಮ್ಮ ಜೊತೆ ಉತ್ತಮ ರೀತಿಯಲ್ಲಿ ಆಚರಿಸಲು ನನ್ನನ್ನೂ ನಿಮ್ಮ ಜೊತೆ ಸೇರಿಸಿಕೊಂಡದ್ದಕ್ಕೆ ಬಹಳ ಸಂತಸವಿದೆ” ಎಂದು ಸಂತೋಷ ಹಂಚಿಕೊಂಡರು. ರಾ.ಸೇ.ಯೊ. ಮತ್ತು ರೋವರ್ಸ್& ರ್ರೇಂಜರ್ಸ್ ಸ್ವಯಂ ಸೇವಕರನ್ನು ಉದ್ದೇಶಿಸಿ “ ನಿಮ್ಮ ಈ ಸೇವಾ ಗುಣ ನನಗೆ ತುಂಬಾ ಹೆಮ್ಮೆ ಎನಿಸಿದೆ. ಜೀವನಲ್ಲಿ ಈ ರೀತಿಯಾದ ಸೇವಾ ಗುಣಗಳನ್ನು ಮೈಗೂಡಿಸಿಕೊಂಡಿದ್ದರೆ ಬಹಳ ಒಳ್ಳೆಯದು ” ಎಂದು ಹೇಳಿದರು.
“ತ್ಯಾಗಕ್ಕೂ ಸೇವೆಗೂ ತುಂಬಾ ವ್ಯತ್ಯಾಸವಿದೆ. ಅದೇ ರೀತಿ ಸಹಾಯಕ್ಕೂ ತ್ಯಾಗಕ್ಕೂ ತುಂಬಾ ವ್ಯತ್ಯಾಸವಿದೆ. ಯಾರಾದರೂ ನಮ್ಮಿಂದ ಕೆಳಗಿದ್ದವರಿಗೆ ನಾವು ಸಹಾಯ ಮಾಡಿದಾಗ ಸಹಜವಾಗಿ ನಮಗೆ ನಾವು ಅವರಿಗಿಂತ ಮೇಲಿದ್ದೇವೆ ಎಂಬ ಅಹಂ ಬರಬಹುದು. ಆದ್ದರಿಂದ ಇದ್ದನ್ನು ನಾವು ಸೇವೆ ಎನ್ನಲು ಸಾಧ್ಯವಿಲ್ಲ. ಸೇವೆಯಲ್ಲಿ ಮುಖ್ಯವಾಗುವುದು ನಾವು ಯಾರಿಗೆ ಎಷ್ಟು ಸೇವೆಯನ್ನು ನೀಡಿದ್ದೇವೆ, ಮಾಡಿದ್ದೇವೆ ಎನ್ನುವುದಲ್ಲ ಬದಲಾಗಿ ಯಾವ ರೀತಿ ನಮ್ಮ ಸೇವೆ ಅವರಿಗೆ ಸಹಕಾರಿಯಾಗಿದೆ ಎನ್ನುವುದು ಮುಖ್ಯವಾಗುವುದು. ರಾಮಾಯಣದಲ್ಲಿ ಶ್ರೀ ರಾಮನು ರಾಮಸೇತುವನ್ನು ನಿರ್ಮಿಸುವ ಸಂದರ್ಭಲ್ಲಿ ಯಾವ ರೀತಿ ಅಳಿಲು ತನ್ನ ಸೇವೆ ಮಾಡಿತೋ ಹಾಗೆ ನಮ್ಮಿಂದ ಸಾಧ್ಯವಾಗುವ ಸೇವೆಯನ್ನು ನಾವು ಸಮಾಜಕ್ಕೆ ನೀಡುತ್ತಾ ಬರಬೇಕು. ಇದಕ್ಕೆ ಗಾಂಧೀಜಿ ಅವರ ಜೀವನವೇ ಉದಾಹರಣೆ. ಅವರ ಜೀವನವೇ ಸ್ವತಃ ಒಂದು ಉದಾಹರಣೆ ಎಂದರೆ ಸುಳ್ಳಾಗದು” ಎಂದರು.
“ಹಲವಾರು ದೇಶಗಳನ್ನು ನಾನು ಸುತ್ತಿದ್ದೇನೆ. ಎಲ್ಲಾ ದೇಶಗಳ ಜನರಿಂದಲೂ ಕೂಡ ಭಾರತೀಯರಿಗೆ ತುಂಬಾ ಬುದ್ಧಿವಂತರೇ ಇದ್ದಾರೆ .ಎಲ್ಲಾ ದೇಶದ ಜನರ ಅಭಿಪ್ರಾಯ ಇದುವೇ. ಆದರೆ ಎಲ್ಲರೂ ನಮ್ಮ ದೇಶದ ಮೇಲೆ ಹೇಳುವಂತಹ ದೂರು ಎಂದರೆ ಅದು ಸ್ವಚ್ಛತೆಯ ಬಗ್ಗೆ. ಹಲವರು ನಮ್ಮ ದೇಶದ ಸ್ವಚ್ಛತೆಯ ಬಗ್ಗೆ ಮಾತನಾಡುತ್ತಾರೆ. ಗಾಂಧೀಜಿ ಅವರ ಜೀವನದಿಂದ ನಾವು ಮೊದಲಾಗಿ ಅಳವಡಿಸಿಕೊಳ್ಳ ಬೇಕಿರುವುದು ಸ್ವಚ್ಛತೆ.” ಎಂದು ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಲೇಜು ಪ್ರಾಂಶುಪಾಲ ಡಾ. ಬಿ. ಎ ಕುಮಾರ ಹೆಗ್ಡೆ ಮಾತನಾಡಿದರು. “ಕರ್ತವ್ಯ, ಶ್ರದ್ಧೆಗೆ ಇನ್ನೊಂದು ಹೆಸರೇ ಗಾಂಧೀಜಿ. ಅವರು ಬದುಕಿದ ಜೀವನವೇ ನಮಗೆಲ್ಲರಿಗೂ ಮಾದರಿ. ಅವರಿಗೆ ರವೀಂದ್ರ ನಾಥ್ ಠಾಗೋರ್ ಇಟ್ಟಂತಹಾ
“ ಮಹಾತ್ಮ” ಎಂಬ ಹೆಸರು ಸರಿಯಾಗಿದೆ.” ಎಂದು ಅವರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕ ವೇಣು, ಮಹಾತ್ಮಾ ಗಾಂಧೀಜಿ ಕುರಿತು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ. ಹೆಚ್ ಸ್ವಾಗತಿಸಿದರು. ಆರುಂಧತಿ ಮತ್ತು ತಂಡದವರು ಪ್ರಾರ್ಥಿಸಿದರು. ರೇಂಜರ್ ಹರ್ಷಿಣಿ ನಿರೂಪಿಸಿ, ರೋವರ್ ಸುಮುಖ ವಂದಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಪ್ರೊ.ದೀಪ ಆರ್. ಪಿ ಮತ್ತು ರೋವರ್ಸ್& ರೇಂಜರ್ಸ್ ನಾಯಕಿ ಗಾನವಿ.ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ರಾ.ಸೇ.ಯೋ ಘಟಕದ ವತಿಯಿಂದ ಉಜಿರೆಯ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಜರಗಿತು. ಕಾಲೇಜಿನ ಮುಂಭಾಗದಿಂದ ಉಜಿರೆಯ ಜನಾರ್ದನ ದೇವಸ್ಥಾನದ ವರೆಗೆ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದರು. ರೋವರ್ಸ್& ರೇಂಜರ್ಸ್ ಘಟಕದಿಂದ ವಿದ್ಯಾರ್ಥಿಗಳು ಸರ್ವ ಧರ್ಮ ಪ್ರಾರ್ಥನೆ ಕೈಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ