ಅರಸೀಕೆರೆ: ತತ್ವಪದಕಾರರ ಗಾಯನ ಸ್ಪರ್ಧೆ

Upayuktha
0


ಹಾಸನ: ಅರಸೀಕೆರೆ ಗಣಪತಿ ಆಸ್ಥಾನ ಮಂಟಪದಲ್ಲಿ ಶನಿವಾರ ಅರಸೀಕೆರೆ ತತ್ವಪದಕಾರರ ಗಾಯನ ಸ್ಪರ್ಧೆ ಸಮಾವೇಶವನ್ನು ಜಾನಪದ ಪರಿಷತ್ತು ವತಿಯಿಂದ ನಡೆಸಲಾಯಿತು.


ಆಕಾಶವಾಣಿ ಉದ್ಘೋಷಕ ಗೊಲ್ಲರಹಳ್ಳಿ ರಮೇಶ್ ಅವರ ಪ್ರಾರ್ಥನೆಯೊಂದಿಗೆ ಕಾಯ೯ಕ್ರಮ ಪ್ರಾರಂಭವಾಯಿತು. ಶಾಸಕ ಕೆ.ಎಂ ಶಿವಲಿಂಗೇಗೌಡರು ರಾಗಿ ಬೀಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಬಾಲ್ಯದ ದಿನಗಳಲ್ಲಿ, ಬೆಳಗಿನ ಜಾವ ಪ್ರತಿ ಮನೆಗಳಲ್ಲೂ ರಾಗಿ ಬೀಸುತ್ತಾ ಹಾಡುತ್ತಿದ್ದ ಹಾಡುಗಳನ್ನು ನೆನಪಿಸಿಕೊಂಡರು.


ಜಾನಪದ ಕಲೆಗಳ ಶ್ರೇಷ್ಠತೆಯನ್ನು ಕೊಂಡಾಡಿ ಜಾನಪದ ಕಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಿ, ಜನಪದ ಕಲೆಗಳಿಗೆ ಉತ್ತೇಜನ ನೀಡೋಣ ಎಂದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ. ಪರಮೇಶ್ ರವರು, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಗ್ರಾಮೀಣ ಪ್ರದೇಶದಲ್ಲಿರುವ ಕಲಾವಿದರನ್ನು ಉತ್ತೇಜಿಸಿದಾಗ, ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಕಲೆ ಜಾತ್ಯತೀತ ಮನಸ್ಥಿತಿ ನಿರ್ಮಿಸುವ ಶಕ್ತಿ ಹೊಂದಿವೆ. ಮಕ್ಕಳಿಗೆ ಜಾನಪದ ಕಲೆಗಳನ್ನು ಪರಿಚಯಿಸಿ ಸಂಸ್ಕಾರ ನೀಡಬೇಕಾಗಿದೆ. ತಾಲೂಕು ಜಾನಪದ ಪರಿಷತ್ತು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವೈವಿಧ್ಯ ಕಾರ್ಯಕ್ರಮ ರೂಪಿಸುತ್ತದೆ ಎಂದರು.


ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡರು ಮಾತನಾಡುತ್ತಾ, ಜಾನಪದ ಎಂದಿಗೂ ನಾಶವಾಗದ ಶಾಶ್ವತ ಕಲೆಯಾಗಿದೆ. ಜಾನಪದರ ಜೀವನವೇ ಸಮಾಜಕ್ಕೆ ದೊಡ್ಡ ಸಂದೇಶವಾಗಿದೆ, ಜಾನಪದರು ಸರಳವಾಗಿ ಬದುಕಿ ಶ್ರೇಷ್ಠ ಮೌಲ್ಯಗಳನ್ನು ಸಾರಿದ್ದಾರೆ. ತತ್ವಪದಕಾರರು ಜಾತ್ಯತೀತ ಮೌಲ್ಯಗಳನ್ನು ಬಿತ್ತಿ ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಶ್ರಮಿಸಿದ್ದಾರೆ. ಈ ಕಾರ್ಯಕ್ರಮವು ಬಹಳ ವಿಶಿಷ್ಟ ಸ್ವರೂಪದಲ್ಲಿ ಮೂಡಿಬಂದಿದೆ ಮುಂದಿನ ದಿನಗಳಲ್ಲಿ ವಿವಿಧ ಜಾನಪದ ಪ್ರಕಾರಗಳ ಕಲೆಗಳನ್ನು ಪ್ರದರ್ಶಿಸಲು ಜಾನಪದ ಪರಿಷತ್ತು ಅವಕಾಶ ಕಲ್ಪಿಸುತ್ತದೆ ಎಂದರು.


ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಸಾಹಿತಿ ಎನ್. ಎಲ್ ಚನ್ನೇಗೌಡ, ಗೊರೂರು ಅನಂತರಾಜು ಮತ್ತು ಕಲಾವಿದರಾದ ಸಿಂಗಟಗೆರೆ ಕಲ್ಲೇಶಪ್ಪನವರು ಕಲಾವಿದರಿಗೆ ಶುಭ ಹಾರೈಸಿ ಮಾತನಾಡಿದರು. ಗೊಲ್ಲರಹಳ್ಳಿ ರಮೇಶ್ ರವರು ಜಾನಪದ ಕಲಾವಿದರ  ಆರ್ಥಿಕ ಸಂಕಷ್ಟಗಳ ಕುರಿತು ತಮ್ಮ ಅನುಭವ  ವಿಚಾರಗಳನ್ನು ಹಂಚಿಕೊಂಡರು. ಪರಿಷತ್ತಿನ ಉಪಾಧ್ಯಕ್ಷರಾದ ಪುಟ್ಟಸ್ವಾಮಿಯವರು ಕಲೆಗಳಿಗೆ  ಪ್ರೋತ್ಸಾಹ ನೀಡಲು ನಾವು ಸದಾ ಸಿದ್ಧ. ಇಂತಹ ಕಾರ್ಯಕ್ರಮ ತಾಲೂಕಿನಲ್ಲಿ ಹೆಚ್ಚು ನಡೆಯಬೇಕು ಎಂದರು.



ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ರುದ್ರಾಕ್ಷ ಇಂಟರ್ನ್ಯಾಷನಲ್ ಫೌಂಡೇಶನ್ ಪರಮಪೂಜ್ಯ ಜಯಪ್ರಕಾಶ್ ಗುರೂಜಿರವರು ಕಲಾವಿದರಿಗೆ ಶುಭ ಹಾರೈಸಿ ಮುಕ್ತ ಕಂಠದಿಂದ ಶ್ಲಾಘಿಸಿದರು. ಹಿರಿಯ ಕಲಾವಿದ ಡಾ. ಎಂ. ಆರ್ ಬಸಪ್ಪ ಮಾಳೇನಳ್ಳಿ, ಎಸ್ ಎಂ ನಿಂಗಪ್ಪ ದಿಬ್ಬೂರು, ಕೃಷ್ಣಪ್ಪದಾಸರು ಚಿಟ್ಟನಹಳ್ಳಿ, ಕೊಬ್ಬರಿ ಹರೀಶ್, ಪುಟ್ಟಾಚಾರ್ ಗೊಲ್ಲರಹಳ್ಳಿ ಇವರನ್ನು ಸನ್ಮಾನಿಸಲಾಯಿತು.


ತತ್ವಪದಗಳ ಗಾಯನ ಸ್ಪರ್ಧೆಯಲ್ಲಿ 16 ತಂಡಗಳ ಸುಮಾರು 160 ಕಲಾವಿದರು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ನಿರ್ವಹಣ ಸಿದ್ದೇಶ್ವರ ಕಲಾತಂಡ ರಾಂಪುರ, ದ್ವಿತೀಯ ಸ್ಥಾನ ಜೇನುಕಲ್ ಸಿದ್ದೇಶ್ವರ ತಂಡ ಕರಗುಂದ,  ತೃತೀಯ ಸ್ಥಾನ ಶ್ರೀ ಮರುಳ ಸಿದ್ದೇಶ್ವರ ತಂಡ ಬೆಂಡೆಕೆರೆ ಹಾಗೂ ಪ್ರೋತ್ಸಾಹಕ ಸ್ಥಾನ ಕೆಂಗಲ್ಸ್ ಸಿದ್ದೇಶ್ವರ ತಂಡ ಬೊಮ್ಮೇನಹಳ್ಳಿ, ಪಡೆದುಕೊಂಡವು.


ಕಾರ್ಯಕ್ರಮ ನಿರೂಪಣೆ ಸಾಹಿತಿ ದಿಬ್ಬೂರು ರಮೇಶ್, ಶ್ರೀಮತಿ ಕಾತ್ಯಾಯಿನಿ ತೆವರಿಮಠ ನಡೆಸಿಕೊಟ್ಟರು. ಕಾರ್ಯದರ್ಶಿ ದಿಬ್ಬೂರು ಯೋಗೇಶ್ ಸ್ವಾಗತಿಸಿ. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಕುಸುಮ ಮಧುಸೂದನ್ ವೇದಿಕೆ ನಿರ್ವಹಣೆ ಮಾಡಿದರು. ಶ್ರೀಮತಿ ಗಂಗಮ್ಮ ಸನ್ಮಾನಿತರ ಪರಿಚಯ ಮಾಡಿದರು. ಪತ್ರಿಕಾ ಕಾರ್ಯದರ್ಶಿ ರಾಮನಹಳ್ಳಿ ಸಿದ್ದೇಶ್ ಸ್ಪರ್ಧೆ ಉಸ್ತುವಾರಿ ವಹಿಸಿದ್ದರು.  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್ ಮಂಜುನಾಥ್, ನಗರಸಭಾ ಸದಸ್ಯ ಕಿರಣ್ ಕುಮಾರ್, ಇತಿಹಾಸ ಸಂಶೋಧಕ ಡಾ. ಹೆಂಜಗೊಂಡನಹಳ್ಳಿ ಹರೀಶ್, ಸಮಾಜ ಸೇವಕ ಕುಮಾರಣ್ಣ ಮತ್ತಿತರರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top