ಸ್ವಚ್ಛತಾ ಅಭಿಯಾನ: ಪುಟ್ಟ ಗ್ರಾಮದಲ್ಲಿ ಬರೋಬರಿ 21 ಚೀಲಗಳು ಕಸ !

Upayuktha
0


ಅದರಲ್ಲಿ ಬಹುತೇಕ ಮದ್ಯದ ಬಾಟಲಿಗಳು, ಗುಟ್ಕಾ, ಜರ್ದಾ, ವಿಮಲ್, ಮಧು ಇತ್ಯಾದಿ!!





ನಿನ್ನೆ ಅಕ್ಟೋಬರ್ ಎರಡರಂದು ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಟ್ಟ ಗ್ರಾಮಗಳಾದ ಕೊಳಾವರ, ಮೇಲುಕೊಪ್ಪ, ಕವಡೇಕಟ್ಟೆ, ಕಮ್ಮಕ್ಕಿ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಸ್ಥಳೀಯ ಗ್ರಾಮ ವಿಕಾಸ ಮತ್ತು ಅಮೃತ ಸ್ವಸಹಾಯ ಸಂಘದಿಂದ ಆಯೋಜಿಸಲಾಗಿತ್ತು.


ಕೊಳಾವರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ  ಪ್ರಾರಂಭ ಮಾಡಿದ ಸ್ವಚ್ಛತಾ ಕಾರ್ಯಕ್ರಮವನ್ನು ಕವಡೇ ಕಟ್ಟೆಯ ಗಡಿಕಲ್ ರೋಡಿನ ಬಾಳಾಪುರದ ಬಾರ್ಡಿನವರೆಗೆ (ಮೂರನೇ ಮೈಲಿಕಲ್ಲು ಸಮೀಪ) ಮಾಡಲಾಯಿತು.


ಪುಟ್ಟ ಗ್ರಾಮಗಳಾದರೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಟ್ಟು ಸಿಕ್ಕಿದ ಕಸ ಸುಮಾರು ಭರ್ತಿ ಇಪ್ಪತ್ತೊಂದು ಚೀಲಗಳು!!!


ಅದರಲ್ಲಿ ಬಹುತೇಕ ಮದ್ಯದ ಬಾಟಲಿಗಳು, ಟಿನ್‌ಗಳು, ನೀರಿನ ಬಾಟಲಿಗಳು, ಗುಟ್ಕಾ, ಜರ್ದಾ, ವಿಮಲ್, ಮಧು, ಮದ್ಯ ಪ್ರಿಯರು ಬಳಸಿದ ಪಾರ್ಸಲ್ ಆಹಾರದ ಕವರ್‌ಗಳು ಇತ್ಯಾದಿಗಳೇ ಹೆಚ್ಚು!!


ಪುರಾಣ ಮತ್ತು ರಾಮಾಯಣ ಕಾಲದ ಇತಿಹಾಸ ಪ್ರಸಿದ್ದ ಕೊಳಾವರ (ರಾಮ ಮಾಯಾಜಿಂಕೆಯನ್ನು ವಧೆ ಮಾಡಿದಾಗ, ಅದರ ಕೊರಳು ಭಾಗ ಬಂದು ಬಿದ್ದಿದ್ದು ಈ ಕೊಳಾವರದಲ್ಲಿ. ಅದು ಈಗಲೂ ಶಿಲಾ ರೂಪದಲ್ಲಿ ಈ ಸ್ಥಳದಲ್ಲಿ ಇದೆ) ಕ್ಷೇತ್ರದ ಶ್ರೀ ಮಲ್ಲಿಕಾರ್ಜುನನ ಸನ್ನಧಿ, ಆಂಜನೇಯನ ವಾಸ ಸ್ಥಳ, ನಾಗ ದೇವರ ಅನೇಕ ಬನಗಳು, ನಾಗನ ನೆಡೆ ಇರುವ ದಾರಿ-ಹಾಡ್ಯಗಳು, ರಾಮ ನವರಾತ್ರಿಯಲ್ಲಿ ಉತ್ಸವ ನೆಡೆಯುವ ಬೀದಿ, ಬ್ರಹ್ಮ-ಚೌಡಿಯಂತಹ ಶಕ್ತಿ ದೇವರುಗಳ ಕ್ಷೇತ್ರ.....


ಇಂತಹ ಪುಣ್ಯ ಭೂಮಿಯಲ್ಲಿ ಮಣ್ಣಿನಲ್ಲಿ ಕರಗದ ಮತ್ತು ಹೊಲಸು ಕಸಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಹಾಕಲಾಗುತ್ತಿದೆ ಅಂತಾದರೆ... ಛೇ.


ಪವಿತ್ರ ಕ್ಷೇತ್ರದಲ್ಲಿ ಈ ರೀತಿ ಮಲೀನ ಮತ್ತು ಕಲ್ಮಶ ಕಸವನ್ನು ಹಾಕುವವರಿಗೆ ನಮ್ಮ ಕ್ಷೇತ್ರ ದೇವರುಗಳು ಸದ್ಬುದ್ದಿಯನ್ನು ಕೊಡಲಿ, ಜವಾಬ್ದಾರಿಯ ಮನಸ್ಸನ್ನು ಅನುಗ್ರಹಿಸಲಿ.  


ಈಗ ತೆಗೆದಿರುವುದು ಒಂದಿಷ್ಟು ಕಸ ಮಾತ್ರ. ಇನ್ನೊಮ್ಮೆ ಇಂತಹದೇ ಪ್ರಯತ್ನವನ್ನು ಮಾಡಿ, ಇನ್ನಷ್ಟು ಸ್ವಚ್ಚಗೊಳಿಸುವ ಪ್ರಯತ್ನ ಮಾಡೋಣ.


"ನಿರ್ಲಕ್ಷ್ಯದಿಂದ ಪರಿಸರಕ್ಕೆ ಬಿಸಾಕಿದ ಅರ್ಧ ಇಂಚಿನ ಗುಟ್ಕಾ ಪ್ಲಾಸ್ಟಿಕ್ ತ್ಯಾಜ್ಯವು ನಮ್ಮ ಪರಿಸರವನ್ನು ಹಾಳು ಮಾಡುತ್ತದೆ. ಅದು ದನ, ಮಂಗ, ಪಕ್ಷಿ, ನಾಗರಗಳ ಹೊಟ್ಟೆಗೆ ಸೇರಿದರೆ, ಅವುಗಳ ವೇದನೆಯ ನಿಟ್ಟುಸಿರು ನಿರ್ಲಕ್ಷ್ಯದಿಂದ ಬಿಸಾಕಿದವನಿಗೆ ಶಾಪ ಆಗುತ್ತದೆ.  ಅನಾರೋಗ್ಯ, ಮಾನಸಿಕ ಟೆನ್ಷನ್‌ಗೆ, ಮನೆಯ ಕಲಹ, ಹಣದ ಮುಗ್ಗಟ್ಟುಗಳಿಗೆ ಕಾರಣ ನಿರ್ಲಕ್ಷ್ಯದಿಂದ ಪರಿಸರಕ್ಕೆ  ಬಿಸಾಕುವ ತ್ಯಾಜ್ಯದ ಶಾಪವೇ ಆಗಿರುತ್ತದೆ" ಅಂತ ಇತ್ತೀಚೆಗೆ ಮಂತ್ರಾಕ್ಷತೆಯ ಸಂದರ್ಭದಲ್ಲಿ ಪ್ರಾಜ್ಞರೊಬ್ಬರು ಜಾಗೃತಿಯ ಮಾತಾಡಿದ್ದರು.  

**


ನಾವೆಲ್ಲರೂ ತಮ್ಮ ಮನೆಗಳಲ್ಲಿ ಸೃಷ್ಟಿ ಆಗುವ ಎಲ್ಲ ಒಣ ಕಸಗಳನ್ನು ಪಂಚಾಯತಿ ಗಾಡಿಗೆ ಕೊಟ್ಟು ಸಹಕರಿಸೋಣ.  

ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಭಗವಂತ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ಭರವಸೆ ಮತ್ತು ಬೇಡಿಕೆಯೊಂದಿಗೆ ಎಲ್ಲ ರಿಗೂ ಧನ್ಯವಾದಗಳು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top