ವೀರ ಮರಣ ಹೊಂದಿದ್ದ ಸಿ.ಆರ್.ಪಿ.ಎಫ್ ಪಾಂಡುರಂಗಪ್ಪ ಅವರಿಗೆ ಶ್ರದ್ಧಾಂಜಲಿ

Chandrashekhara Kulamarva
0


ಚಿತ್ರದುರ್ಗ:
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಕೆರೆಕೊಂಡಾಪುರ ಗ್ರಾಮದ ನಿವಾಸಿ ದಿವಂಗತ ಪಾಂಡುರಂಗಪ್ಪ ಅವರಿಗೆ ಸಿ.ಆರ್.ಪಿ.ಎಫ್ ಅಧಿಕಾರಿ ಎಸ್.ಐ ಮಂಜುನಾಥ ಮತ್ತು ಗ್ರಾಮದ ಸಾರ್ವಜನಿಕರಿಂದ ಗೌರವ ಶದ್ರಾಂಜಲಿ ಸಲ್ಲಿಸಿದರು.

ದಿವಂಗತ ಪಾಂಡುರಂಗಪ್ಪ ತಂದೆ ಹೊನ್ನೂರಪ್ಪ, ತಾಯಿ ಹನುಮಕ್ಕ ಅವರ ಏಕೈಕ ಸುಪುತ್ರ ಆಗಿ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ಕನಸಿನಗಟ್ಟೆ ಕ್ಯಾಂಪಿನ ನಿವಾಸಿಯಾಗಿ 17 ಏಪ್ರಿಲ್ 1962 ರಲ್ಲಿ ಜನಿಸಿದರು.


ವೀರಮರಣ: 1985ರಲ್ಲಿ ಪಾಂಡುರಂಗಪ್ಪ ಅವರು ಸಿ.ಆರ್.ಪಿ.ಎಫ್ ಇಲಾಖೆಗೆ ಪ್ರಾರಂಭದಲ್ಲಿ ಸಿಪಾಯಿಯಾಗಿ ನೇಮಕವಾಗಿ ನಂತರ ಲೇನ್ಸ್ ನಾಯಕ್ ಆಗಿ ಮುಬಂಡ್ತಿ ಪಡೆದುಕೊಂಡರು. ಆದರೆ ತ್ರಿಪುರ ರಾಜ್ಯದ ಅಗರ್ ತಲ ತಾಲೂಕಿನಲ್ಲಿ ನರಸಿಂಗ್ ಗರ್ ನಲ್ಲಿ 4 ಅಕ್ಟೋಬರ್ 1996 ರಲ್ಲಿ ಉಗ್ರಗಾಮಿಗಳು ನೆಲಬಾಂಬ್ ಸ್ಫೋಟ ಮಾಡಿದ್ದರಿಂದ ಸ್ಥಳದಲ್ಲಿಯೇ ವೀರಮರಣ ಹೊಂದಿದ್ದರು.


2024ನೇ ಸಾಲಿನಲ್ಲಿ ಸಿ.ಆರ್.ಪಿ.ಎಫ್ ದೆಹಲಿಯ (ಡಿ.ಜಿ.ಪಿ) ಡೈರಟರೇಟ್ ಜನರಲ್ ಹಾಗೂ ಡಿ.ಐ.ಜಿ ಸಿ.ಆರ್.ಪಿ.ಎಫ್ ಗ್ರೂಪ್ ಸೆಂಟರ್ ಯಲಹಂಕ, ಬೆಂಗಳೂರು ಅವರು ಆದೇಶದ ಮೇರೆಗೆ ವೀರ ಮರಣ ಹೊಂದಿದ ಪಾಂಡುರಂಗಪ್ಪ ಅವರ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಶದ್ರಾಂಜಲಿಯನ್ನು ಇಲಾಖೆಯ ನೇತೃತ್ವದಲ್ಲಿ ಎಸ್.ಐ ಮಂಜುನಾಥ್ ಅವರು ಸ್ಥಳೀಯ ಜನರ ನಡುವೆ ನೆರವೇರಿಸಿದರು.


ಸಾರ್ವಜನಿಕರಿಂದ ಶಾಂತಿನಮನ- ಕೆರೆ ಕೊಂಡಾಪುರದ ಗ್ರಾಮದ ಸಾರ್ವಜನಿಕರು ಎರಡು ನಿಮಿಷಗಳ ಕಾಲ ವೀರ ಮರಣ ಹೊಂದಿದ ದಿವಂಗತ ಪಾಂಡುರಂಗಪ್ಪ ಅವರಿಗೆ ಎಸ್.ಐ ಮಂಜುನಾಥ ಹಾಗೂ ಸಾರ್ವಜನಿಕರು ಆತ್ಮಕ್ಕೆ ಮೌನಾಚರಣೆ ಮಾಡಿ ಹಾಗೂ ಪುಷ್ಪ ನಮನ ಸಲ್ಲಿಸಿದರು. ನಂತರ ವೀರಮರಣ ಹೊಂದಿದ ಪಾಂಡುರಂಗಪ್ಪ ಅವರ ಪತ್ನಿ ಪದ್ಮ ಅವರಿಗೆ ಎಸ್.ಐ ಮಂಜುನಾಥ ಅವರು ಸನ್ಮಾನ ಮಾಡಿದರು.


ಕುಟುಂಬದ ಬಗ್ಗೆ ಇಲಾಖೆಗೆ ಕಾಳಜಿ- ಸಿ.ಆರ್.ಪಿ.ಎಫ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವೀರಮರಣ ಹೊಂದಿದ್ದರೇ ಅವರ ಪತ್ನಿ ಮತ್ತು ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಕೇಳುವುದು, ಅವರಿಗೆ ಭೂಮಿ ಕೊಡಿಸುವ, ಮಕ್ಕಳಿಗೆ ಉದ್ಯೋಗ, ಸಂತೋಷ ಮತ್ತು ದುಃಖಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಅವರ ಮನೆಗಳಿಗೆ ಕಡ್ಡಾಯವಾಗಿ ಅಧಿಕಾರಿಗಳನ್ನು ಕಳಿಸಿ ಶ್ರದ್ಧಾಂಜಲಿ ಸಲ್ಲಿಸುವ ಕೆಲಸ ಕಡ್ಡಾಯವಾಗಿ ಮಾಡಬೇಕು ಎನ್ನುವ ಗುರಿ ಉದ್ದೇಶಗಳನ್ನು ಮಾಡಿದ್ದಾರೆ. 


ಈ ಸಮಯದಲ್ಲಿ ಪತ್ನಿ ಪದ್ಮಾ, ಕೆರೆಕೊಂಡಪುರ ಗ್ರಾಮದ ಸಾರ್ವಜನಿಕರಾದ ಎರಿಸ್ವಾಮಿ, ಚಂದ್ರಶೇಖರ, ಹೇಮಣ್ಣ, ಹನುಮಕ್ಕ, ಗಂಗಮ್ಮ, ಲಕ್ಷ್ಮೀ , ಪ್ರಿಯಾಂಕಾ, ಹುಲಿಗೆಮ್ಮ, ಪತ್ರಕರ್ತ ಗಿರೀಶ್ ಕುಮಾರ್ ಗೌಡ, ಬಳ್ಳಾರಿ ಅವರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top