12 ರಂದು ಪರ್ಕಳದ ಸರಿಗಮ ಭಾರತಿಯಲ್ಲಿ ವಿಜಯದಶಮಿ ಸಂಗೀತೋತ್ಸವ, ರಜತ ಸಂಭ್ರಮ -2024

Upayuktha
0


ಮಣಿಪಾಲ: ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಅ.12 ರಂದು ಬೆಳಿಗ್ಗೆ 8.00ರಿಂದ ರಾತ್ರಿ 9.00ರವರೆಗೆ ವಿಜಯದಶಮಿ ಸಂಗೀತೋತ್ಸವ ನಡೆಯಲಿದೆ. ಬೆಳಿಗ್ಗೆ 9.40ಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


ಅತಿಥಿಗಳಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಉಡುಪಿಯ ಹಿರಿಯ ಸಾಹಿತಿ ಪ್ರೊ.ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ರೊ. ಮಂಜುನಾಥ ಉಪಾಧ್ಯ ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್, ಪಟ್ಲ ಇವರನ್ನು ಅಭಿನಂದಿಸಿ ಗೌರವಿಸಲಾಗುವುದು. 


ಬೆಳಗ್ಗೆ 8.00ಕ್ಕೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಅವರು 'ಶ್ರೀ ದುರ್ಗಾ ಮಾತೆ'ಯ ಪ್ರಾರ್ಥನೆಯ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 8.45ರಿಂದ ಪಿಳ್ಳಾರಿ ಗೀತೆಗಳು, 9.00 ಅಭಿನವ್ ಭಟ್ ಹಾಗೂ  ತನ್ವಿ ಶಾಸ್ತ್ರಿ ಅವರಿಂದ ಹಾಡುಗಾರಿಕೆ.10.40ರಿಂದ ಶ್ರೀಮತಿ ಹೇಮಲತಾ ರಾವ್ ಉಡುಪಿ -ಹಾಡುಗಾರಿಕೆ, ವಯೊಲಿನ್ ಪ್ರಮಥ್ ಭಾಗವತ್, ಮೃದಂಗ: ಶಾಶ್ವತ್ ಕೆ. ಭಟ್.


11.40ರಿಂದ ಸಂಗೀತ ಕೃತಿಗಳ ಪ್ರಸ್ತುತಿ: ಸ್ವಸ್ತಿ ಎಂ ಭಟ್, ಅನುಶ್ರೀ, ರೋಶ್ನಿ ಎನ್.ಶೆಟ್ಟಿ, ಕಶಿಕ ಕೆ.ಶೆಟ್ಟಿ,  ಕ್ಷಿತಿಜ್ ಕೆ.ಶರ್ಮ, ತೀಕ್ಷಣ್ ಎಸ್.ಶೆಟ್ಟಿ, ಮನ್ವಿ ಹಾಗೂ ಸಾನ್ವಿಕ ಅವರಿಂದ. ವಯೊಲಿನ್ : ಪ್ರಮಥ್ ಭಾಗವತ್, ಅನುಶ್ರೀ ಮಳಿ, ಮೃದಂಗ: ಶ್ರೀವರ್ಚಸ್, ಶಾಶ್ವತ್ ಕೆ.ಭಟ್. 


12.00 ವೇದಘೋಷ, 12.30 ಸರಸ್ವತಿ ಪೂಜೆ,

2.00-3.30 ಶ್ರೀಮತಿ ಉಷಾ ರಾಮಕೃಷ್ಣ ಭಟ್ ಬೆಂಗಳೂರು ಅವರ ಹಾಡುಗಾರಿಕೆ, ವಯೊಲಿನ್: ಕೇಶವ ಮೋಹನ್ ಕುಮಾರ್ ಬೆಂಗಳೂರು, ಮೃದಂಗ: ಸುನಾದಕೃಷ್ಣ ಅಮೈ. 3.45ರಿಂದ ಎಲ್ಲಾ ಕಲಾವಿದರಿಂದ  'ಶ್ರೀ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ' ಹಾಗೂ 'ನವಾವರಣ ಕೃತಿ'ಗಳ ಪ್ರಸ್ತುತಿ ನಡೆಯಲಿದೆ. 5.00ರಿಂದ ಕು. ದಿವ್ಯಶ್ರೀ ಭಟ್ ಮಣಿಪಾಲ ಹಾಡುಗಾರಿಕೆ, ವಯೊಲಿನ್: ಪೃಥ್ವಿ ಭಾಸ್ಕರ್, ಮೈಸೂರು ಮೃದಂಗ: ನಿಕ್ಷಿತ್.ಟಿ. ಪುತ್ತೂರು. 7.00ರಿಂದ ಉಡುಪಿಯ ಕು. ಮಾನಸ ಹಾಗೂ ಮಂಗಳೂರಿನ 'ನೃತ್ಯಾಂಗನ್' ದ ನಿರ್ದೇಶಕಿ ವಿದುಷಿ ಶ್ರೀಮತಿ ರಾಧಿಕಾ ಶೆಟ್ಟಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top