ಏತಡ್ಕ: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ 2014 ರಿಂದ ಪಳ್ಳತ್ತಡ್ಕ ಹವ್ಯಕ ವಲಯದ ಪ್ರತಿ ಮನೆ ಮನೆಗಳಲ್ಲಿ ಪ್ರತಿರುದ್ರ ಕಾರ್ಯಕ್ರಮವನ್ನು ಪ್ರದೋಷ ಕಾಲದಲ್ಲಿ ಸಾಮೂಹಿಕವಾಗಿ ನಡೆಸುತ್ತಿದ್ದೇವೆ. ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ 256ನೇ ಪ್ರತಿ ರುದ್ರ ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಸಂಜೆ 6.30 ರಿಂದ 9 ರತನಕ ನಡೆಯುತ್ತದೆ. ನೂರಾರು ರುದ್ರ ಪಠಣಗಾರರಿಗೆ ಸ್ಫೂರ್ತಿಯಾಗಿ ಹೊಸ ತಲೆಮಾರಿನವರ ಗಮನ ಸೆಳೆದಿದೆ ಎಂದು ಪ್ರತಿ ರುದ್ರದ ಮುಖ್ಯ ಸಂಚಾಲಕ ಮೋಹನ ಕೋರಿಕ್ಕಾರು ತಿಳಿಸಿದರು.
ರುದ್ರ ಪಾಠಕರಿಗೆ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶಾಮ ಭಟ್ ಮನವಿ ಪತ್ರ, ಶಿವಾರ್ಪಣಂ ಯೋಜನೆಯಂತೆ ಕುಂಬಳ ತರಕಾರಿ ಗಿಡ ಹಾಗೂ ಶಿವ ಪಂಚಾಕ್ಷರಿ ಪುಸ್ತಕಗಳನ್ನು ವಿತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ