ವಿಶ್ವದಾದ್ಯಂತ ವಿಶ್ವಗುರು ಮಧ್ವ ಸ್ಮರಣೆ

Upayuktha
0


ಉಡುಪಿ: ದ್ವೈತ ಮತ ಪ್ರತಿಪಾದಕ, ಉಡುಪಿ ಶ್ರೀಕೃಷ್ಣ ಪ್ರತಿಷ್ಠಾಪಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತ್ಯುತ್ಸವವನ್ನು ವಿಜಯದಶಮಿ ಪರ್ವಕಾಲದಲ್ಲಿ ಭಾನುವಾರ ಆಚರಿಸಲಾಗಿದ್ದು, ಆ ಮೂಲಕ ವಿಶ್ವದಾದ್ಯಂತ ವಿಶ್ವಗುರು ಆಚಾರ್ಯ ಮಧ್ವರ ಸ್ಮರಣೆ ನಡೆಸಲಾಯಿತು.


ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯಲ್ಲಿ ಮಧ್ವ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ಆಚಾರ್ಯ ಮಧ್ವರು ಅದೃಶ್ಯರಾದ ಶ್ರೀ ಅನಂತೇಶ್ವರ ದೇವಸ್ಥಾನದ ಆಚಾರ್ಯ ಮಧ್ವ ಸನ್ನಿಧಿಯಲ್ಲಿ ನೂರು ಮಂದಿ ವೈದಿಕರಿಂದ ತ್ರಿಶತ ಶ್ರೀವಾಯುಸ್ತುತಿ ಪಾರಾಯಣ ಹಾಗೂ ಪುಷ್ಪಾರ್ಚನೆ ನಡೆಯಿತು. ಪುತ್ತಿಗೆ ಉಭಯ‌ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.


ಸಂಜೆ ರಥಬೀದಿಯಲ್ಲಿ ಆಚಾರ್ಯ ಮಧ್ವರ ಭಾವಚಿತ್ರ ಹಾಗೂ ಗ್ರಂಥಗಳ ರಥೋತ್ಸವ ನಡೆಯಿತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಕುರಿತು ಉಪನ್ಯಾಸ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.


ಪಣಿಯಾಡಿಯಲ್ಲಿ ಶ್ರೀಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆದ ಶ್ರೀ ಮಧ್ವ ಜಯಂತಿ ಕಾರ್ಯಕ್ರಮದಲ್ಲಿ ವೇದವ್ಯಾಸ ಐತಾಳರ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀ ವಾಯುಸ್ತುತಿ ಹೋಮ, ವಿಶೇಷ ಪೂಜೆ ನಡೆಯಿತು. ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಆಚಾರ್ಯ ಮಧ್ವರ ತತ್ವ ಚಿಂತನೆ ನಡೆಯಿತು.


ಪಾಡಿಗಾರು ಪುತ್ತಿಗೆ ಮಠ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ಮಧ್ವ ಜಯಂತಿ ಆಚರಿಸಲಾಯಿತು.


ಆಸ್ಟ್ರೇಲಿಯಾ ಪುತ್ತಿಗೆ ಮಠದಲ್ಲಿ: ಆಸ್ಟ್ರೇಲಿಯಾದ ಪುತ್ತಿಗೆ ಶಾಖಾ ಮಠದಲ್ಲಿ ಮಧ್ವ ಜಯಂತಿ ಸಡಗರದಿಂದ ಆಚರಿಸಲಾಯಿತು.

ಕಳೆದ ಬಾರಿಯ ಮಧ್ವ ನವಮಿಯಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಮಧ್ವಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಿದ್ದರು. ಆಚಾರ್ಯ ಮಧ್ವರ ವಿಗ್ರಹದ ಮುಂದೆ  ಶ್ರೀ ಮಧ್ವ ವಿಜಯ ಪಾಠ ಕೇಳಿದ ಭಕ್ತಾಭಿಮಾನಿಗಳಿಂದ ಮಧ್ವ ಜಯಂತಿ ಸದವಸರದಲ್ಲಿ ಸಮಗ್ರ ಮಧ್ವವಿಜಯ ಪಾರಾಯಣ, ವಾಯುಸ್ತುತಿ, ದ್ವಾದಶ ಸ್ತೋತ್ರ ಇತ್ಯಾದಿಗಳ ಪಠಣ ನಡೆಯಿತು. ವಿಶೇಷ ಪೂಜೆ ಏರ್ಪಾಡಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top