ನಿಮ್ಮನ್ನು ಬಿಕನಾಸಿ ಹರಿಪ್ರಸಾದ್ ಅನ್ನೋಣವೇ?
ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ನಿಮ್ಮ ಹೆಸರಿನ ಹಿಂದೆ ಬಿ ಕೆ ಅಂತ ಇರೋದ್ರಿಂದ ಬಿಕನಾಸಿ ಹರಿಪ್ರಸಾದ್ ಎಂದು ಕರೆಯಬಾರದೇಕೆ? ಎಂದು ಶ್ರೀಗಳ ಆಪ್ತ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ಣ ಬಹುಮತ ಇರೋ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಮಂತ್ರಿ ಸ್ಥಾನ ನಿಗಮ ಮಂಡಳಿ ಹೀಗೆ ಏನೊಂದೂ ಇಲ್ಲದೇ ಅಕ್ಷರಶಃ ಮೂಲೆಗುಂಪಾಗಿರುವ ನೀವು ಮೊದಲು ನಿಮ್ಮ ರಾಜಕೀಯ ನೋಡ್ಕೊಳ್ಳಿ. ಕಾಂಗ್ರೆಸ್ ಮುಖಂಡರನ್ನು ಮೆಚ್ಚಿಸಲು ಪೇಜಾವರ ಶ್ರೀಗಳ ವಿರುದ್ಧ ನಾಲಗೆ ಹರಿಬಿಡಲು ಎಳ್ಳಷ್ಟೂ ಯೋಗ್ಯತೆ ಇಲ್ಲದವರು ನೀವು.
ಪೇಜಾವರ ಶ್ರೀಗಳು ಏನು? ಅವರ ಸಾಧನೆ ವಿದ್ವತ್ತು ಅವರ ದೇಶನಿಷ್ಠೆ ಧರ್ಮನಿಷ್ಠೆ ಸಮಾಜದ ಒಳಿತಿನ ಬಗ್ಗೆ ಅವರಿಗಿರುವ ಕಳಕಳಿ ಇತ್ಯಾದಿಗಳನ್ನು ನಿಮಗೆ ವಿವರಿಸುವ ಅಗತ್ಯ ಇಲ್ಲ. ಕತ್ತೆಗೆ ಕಸ್ತೂರಿಯ ಕಿಮ್ಮತ್ತು ಅರ್ಥವಾಗಲು ಸಾಧ್ಯವಿಲ್ಲ.
ಇಡೀ ದೇಶ ರಾಜ್ಯದಲ್ಲಿ ಯಾವತ್ತೂ ಒಂದು ಸೀಮಿತ ಜಾತಿಯ ಪರ ಮಾತನಾಡದೇ ಹೋರಾಟ ಪ್ರತಿಭಟನೆ ಹಕ್ಕೊತ್ತಾಯ ಆಗ್ರಹಗಳನ್ನು ಮಾಡದೇ ಸಮಸ್ತ ಹಿಂದು ಸಮಾಜದ ಇಡೀ ನಾಡಿನ ಜನರ ಒಳಿತಿಗಾಗಿ ಸಂದರ್ಭ ಎದುರಾಗೆಲ್ಲ ಶ್ರೀಗಳು ಧ್ವನಿ ಎತ್ತುತ್ತಿರುವುದನ್ನು ದೇಶವೇ ನೋಡಿ ಗೌರವಿಸುತ್ತಿರುವುದಕ್ಕೆ ನಿಮ್ಮೆ ಯೋಗಗುರು ಬಾಬಾ ರಾಮ್ ದೇವ್ ರಂಥವರು ಬಂದು ಕಾಲಿಗೆರಗಿ ನಮಸ್ಕರಿಸಿದ್ದು ಒಂದು ಸಾಕ್ಷಿ ಅಷ್ಟೆ.
ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿ ಬಿಲ್ಲವ ಸಮಾಜದ ಅನೇಕ ಬಡವರೂ ಸೇರಿದಂತೆ ನೂರಾರು ಮಂದಿಗೆ ಬಡ ಕುಟುಂಬಗಳಿಗೆ ಭಕ್ತರ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಮಾಡುತ್ತಿರುವ ಶ್ರೀಗಳ ವಿಶಾಲ ಹೃದಯಿಗಳನ್ನು ಅರ್ಥ ಮಾಡಿಕೊಳ್ಳಲು ಜೀವನ ಪರ್ಯಂತ ಢೋಂಗಿ ಜಾತ್ಯತೀತ ವಾದದ ಮುಖವಾಡ ಹಾಕಿಕೊಂಡೇ ಜಾತಿ ಲಾಬಿ ನಡೆಸಿ ಅಧಿಕಾರ ಗಿಟ್ಟಿಸುವ ದೈನೇಸಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ನಿಮ್ಮಂಥವರಿಗೆ ಏಳು ಜನ್ಮ ಹುಟ್ಟಿ ಬಂದರೂ ಅರ್ಥವಾಗದ ಸಂಗತಿ. ನಿಮ್ಮ ನೀಚ ರಾಜಕಾರಣದ ತೀಟೆ ತೀರಿಸಿಕೊಳ್ಳಲು ಪೇಜಾವರ ಶ್ರೀಗಳನ್ನು ಬಳಸಿಕೊಳ್ಳುವುದನ್ನು ಖಂಡಿಸುತ್ತೇವೆ. ಇಂಥ ಹೇಳಿಕೆಗಳಿಗಾಗಿ ಶ್ರೀಗಳವರಲ್ಲಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತೇವೆ.
- ಜಿ ವಾಸುದೇವ ಭಟ್ ಪೆರಂಪಳ್ಳಿ
ಶ್ರೀಗಳ ಆಪ್ತರು ಮತ್ತು ಸಾಮಾಜಿಕ ಕಾರ್ಯಕರ್ತರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ