ಅಭಿಮತ: ಕಾಂಗ್ರೆಸ್ ಋಣ ತೀರಿಸುವ ಕೆಲಸ ಮಾಡಿದ ದಸರಾ ಉದ್ಘಾಟಕರು

Upayuktha
0

ಮಾನ್ಯ ಹಂ ಪ ನಾಗರಾಜಯ್ಯನವರೇ, ಇವತ್ತು ಮೈಸೂರು ದಸರಾ ಉದ್ಘಾಟನೆಯ ಸಂದರ್ಭದಲ್ಲಿ "ಸರ್ಕಾರಗಳನ್ನು ಕೆಡಿಸೋದು ಸುಲಭ, ಉಳಿಸೋದು ಕಷ್ಟ; ಸರ್ಕಾರ ಅಸ್ಥಿರಗೊಳಿಸಬೇಡಿ ಎಂದೆಲ್ಲ ಮಾತಾಡಿ ಜೀವನ‌ಪರ್ಯಂತ ನೀವು ದಂಪತಿಗಳು ಕಾಂಗ್ರೆಸ್ ನಿಂದ ಪಡೆದ ಋಣವನ್ನು ತೀರಿಸೋ ಕೆಲಸ ಮಾಡಿದ್ಧೀರಿ. ಬಹಳ ಸಂತೋಷ.


ಆದ್ರೆ ಈ ಹಿಂದೆಯೂ ಈ ದೇಶದಲ್ಲಿ ಇಂತಹ ಕೆಲಸಗಳು ಈ ದೇಶದಲ್ಲಿ ನಡೆದಿತ್ತಲ್ವಾ? ಅಟಲ್ ಜೀ ಸರ್ಕಾರವನ್ನು ಸಂಸದರೂ, ಒರಿಸ್ಸ ಮುಖ್ಯಮಂತ್ರಿಯಾಗಿಯೂ ಆಗಿದ್ದ ಗಿರಿಧರ ಗಮಾಂಗರನ್ನು ನಾಟಕೀಯವಾಗಿ ಕರೆಸಿ ಕೇವಲ ಒಂದು ಮತಕ್ಕೆ ಬೀಳಿಸಿ ದೇಶಕ್ಕೆ 500 ಕೋಟಿಗೂ ಮಿಕ್ಕ ಖರ್ಚಿನ ಚುನಾವಣೆಯನ್ನು ಹೊರೆಸಿದ್ರಲ್ವಾ ಆಗೆಲ್ಲ ನೀವೆಲ್ಲ ಬಾಯಲ್ಲಿ ಹುಣಸೇ ಬೀಜ ಹಾಕ್ಕೊಂಡಿದ್ರಾ !? ಸಾಹಿತಿಯಾಗಿರುವ ತಾವೆಲ್ಲ ಈ ರೀತಿ ಆತ್ಮವಂಚನೆ ಮಾಡ್ಕೊಂಡ್ರೆ ಏನರ್ಥ ಹೇಳಿ ?! ತಾಯಿ ಚಾಮುಂಡಿ ಇದನ್ನು ಮೆಚ್ಚಿಯಾಳೇ?? 


- ಜಿ ವಾಸುದೇವ ಭಟ್ ಪೆರಂಪಳ್ಳಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top