"ಮೈದಾ" ಬಗ್ಗೆ ಮತ್ತಷ್ಟು ಆತಂಕಕಾರಿ ಸತ್ಯ
ಮೈದಾ ತಯಾರಿಯಲ್ಲಿ ಉಪಯೋಗಿಸುವ ALLOXEN ಎಂದರೇನು? ಬಯೋಕೆಮೆಸ್ಟ್ರೀ ಲ್ಯಾಬುಗಳಲ್ಲಿ- ಇನ್ಸುಲಿನ್- ಪರೀಕ್ಷೆಮಾಡಲು ಬಿಳಿ ಇಲಿ, ಗಿನಿಹಂದಿ ಇವುಗಳಿಗೆ ALLOXEN ಇಂಜೆಕ್ಟ್ ಮಾಡಲಾಗುತ್ತದೆ. ಆಗ ಆ ಬಡಪಾಯೀ ಮೃಗಗಳು ಮಧುಮೇಹ -DIABETES- ರೋಗಕ್ಕೆ ತುತ್ತಾಗುತ್ತವೆ. ಈ ಕಾರಣದಿಂದ ಮೈದಾ ಶರೀರದೊಳಕ್ಕೆ ಸೇರಿದಾಗ ಡಯಾಬಿಟಿಸ್ ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚು. ಡಯಾಬಿಟಿಸ್ ಜನ್ಯ ರೋಗಗಳು B P, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಹೃದಯ ಸಮಸ್ಯೆ, ಗಾಂಗ್ರಿನ್, ನರಸಮಸ್ಯೆ, ನೇತ್ರ ಸಮಸ್ಯೆ ಸಾಲದೇ? ಇನ್ನೇನು ಬಾಕಿ ಇದ್ದರೆ ಅವಕ್ಕೂ..!
ಈಗ ಸಕಲ ರೋಗಗಳನ್ನು ಪ್ರಯೋಗ ಪರೀಕ್ಷೆ ಇನ್ನೇನು ಬೇಕಾದರೂ ಮಾಡಿಕೊಳ್ಳಲು ಇಲಿ ಹಂದಿ ತಯ್ಯಾರ್. ಮನುಷ್ಯನ ನವೀನ ರೋಗಗಳ ಮೂಲ ಹೀಗೆಲ್ಲಾ ಎಲ್ಲಿಂದೆಲ್ಲ ಉತ್ಪತ್ತಿಗೆ ಕಾರಣ ನೋಡಿ. ಇನ್ಸುಲಿನ್ ಇಂಜೆಕ್ಷನ್ ನಿಂದ ಸುರುವಾಗಿ ಮಾತ್ರೆ, ಗುಳಿಗೆ, ಪಿಲ್ಸು, ECG , ಡಯಾಲಿಸಿಸ್ಸು, ಸ್ಕಾನಿಂಗು, X ರೆ, ಒಪರೇಷನ್ನು ಎಲ್ಲದಕ್ಕೂ ಮಸ್ತ್ ಮಸ್ತ್ ಗಿರಾಕಿಗಳು ತಯಾರ್. ಕೃತಕ ಆಹಾರ ನಮಗೆ ಮೀಸಲು. ಶ್ರೀಮಂತ ರಾಷ್ಟ್ರಗಳೆನಿಸಿಕೊಂಡ ಪರ್ದೆಷಿಗಳು ಈ ಆಹಾರ ವಸ್ತುಗಳನ್ನು ಬಳಸುವುದೇ ಇಲ್ಲ ಎಂಬುದು ಸತ್ಯ ಸಂಗತಿ. ನಮ್ಮಲ್ಲಿ ಯಾವ ಕಾನೂನಿನಿಂದಲೂ ನುಣುಚಿಕೊಂಡು ಬೇಕಾಬಿಟ್ಟಿ ವ್ಯಾಪಾರವಾಗುವ ಮೆಡಿಸಿನ್‌ಗಳು ಹಲವು ರಾಷ್ಟ್ರಗಳಲ್ಲಿ ನಿಷೇಧಿಸಿರುತ್ತಾರೆ...! ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ ಸ್ವಾಮೀ...
- ಬಳ್ಳಮೂಲೆ ಗೋವಿಂದ ಭಟ್
(ಲೇಖಕರು ನಿವೃತ್ತ ಶಿಕ್ಷಕರು, ನಾಟಿ-ಆಯುರ್ವೇದ ಔಷಧಗಳ ತಜ್ಞರು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ