ಕಲ್ಯಾಣಪುರ (ಉಡುಪಿ): ಆರೋಗ್ಯದಲ್ಲಿ ಪ್ರಾಥಮಿಕ ಹಂತದ ಪರೀಕ್ಷೆ ಮತ್ತು ರೋಗ ಪತ್ತೆ ಹಚ್ಚುವಿಕೆ ಇದನ್ನು ನಾವು ಉಚಿತ ಆರೋಗ್ಯ ಶಿಬಿರದಲ್ಲಿ ಮಾಡಬಹುದಾಗಿದೆ ಹೀಗಾಗಿ ಈ ಶಿಬಿರಗಳು ನಮ್ಮ ಆರೋಗ್ಯದ ರಕ್ಷಣೆಯ ಪ್ರಮುಖ ಹಂತವಾಗಿದೆ ಎಂದು ಜಿಲ್ಲಾ ಸರ್ಜನ್ ಡಾ. ಅಶೋಕ್ ಟಿ ತಿಳಿಸಿದರು.
ಅವರು ಕಲ್ಯಾಣಪುರ ನೇಜಾರು ಸಮುದಾಯ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು ಜೆಸಿಐ ಉಡುಪಿ ಇಂದ್ರಾಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ, ಕೆಎಂಸಿ ದಂತ ವೈದ್ಯಕೀಯ ವಿಭಾಗ, ಪ್ರಸಾದ್ ನೇತ್ರಾಲಯ, ಗಣಪತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಧನ್ವಂತರಿ ಸ್ವಸಹಾಯ ಸಂಘ, ಅಪ್ಪು ಅಭಿಮಾನಿಗಳ ಸಂಘ ಮತ್ತು ಗ್ರಾಮ ಪಂಚಾಯತ್ ಕಲ್ಯಾಣಪುರ ಮುಂತಾದ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಅಲೂಮ್ನಿ ಕ್ಲಬ್ ಜೋನ್ ಚೇರ್ಮನ್ ಲೋಕೇಶ್ ರೈ, ಈ ರೀತಿಯ ಶಿಬಿರಗಳು ನಮ್ಮ ಆರೋಗ್ಯದ ದೃಷ್ಟಿಯಿಂದ ಮಹತ್ವಪೂರ್ಣವಾಗಿವೆ. ರೋಗ ಬರುವ ಮೊದಲು ಸರಿಯಾದ ಆರೋಗ್ಯವನ್ನು ಕಾಪಾಡಿದರೆ ಯಾವುದೇ ತೊಂದರೆಗಳು ಬರಲು ಅಸಾಧ್ಯ. ಈ ನಿಟ್ಟಿನಲ್ಲಿ ಈ ಶಿಬಿರವು ಜನರಿಗೆ ಉಪಯೋಗವಾಗಿದೆ ಎಂದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ವಿಜ್ಞೇಶ್ ಪ್ರಸಾದ್, ಗಣೇಶ್ ಆಟೋ ಕೇರ್ ನ ವಸಂತ್ ಕುಮಾರ್, ಗಿರಿಜಾ ಹೆಲ್ತ್ ಕೇರ್ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ, ಗಣಪತಿ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ. ವಿಷ್ಣು ಕೆಎಂಸಿ ಮಣಿಪಾಲದ ಡಾ. ರಿಷಿಕ ಗುಪ್ತ, ಮೇರಿ ಸಾಂಥಿಸ್, ಡಾ.ಧಾತ್ರಿ ಶೆಟ್ಟಿ, ಜಿಲ್ಲಾಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ ದಿನೇಶ್, ಫಿಸಿಯೋಥೆರಪಿಸ್ಟ್ ಲಿಸೆಂಡ್ರಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷರಾದ ಡಾ. ಚಿತ್ರಾ ವಿಜಯ್ ನೆಗಳೂರು ವಹಿಸಿದ್ದರು.
ನಿಕಟಪೂರ್ವ ಅಧ್ಯಕ್ಷೆ ರೀಟಾ ಪೆರೆರಾ ಸ್ವಾಗತಿಸಿದರು. ಶಿಬಿರದ ಸಂಯೋಜಕ ಡಾ. ವಿಜಯ್ ನೆಗಳೂರು ಧನ್ಯವಾದ ನೀಡಿದರು. ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಕವಾ೯ಲು ನಿರೂ ಪಿಸಿದರು. ಶಿಬಿರದಲ್ಲಿ ರಕ್ತ ತಪಾಸಣೆ ಥೈರೊಯ್ಡ್ ಪರೀಕ್ಷೆ, ಇಸಿಜಿ ದಂತದ ತಪಾಸಣಿ, ಕಣ್ಣಿನ ತಪಾಸನೆ ಬಿಎಂಡಿ ಮುಂತಾದುಗಳು ನಡೆದವು ಸುಮಾರು 200 ಜನ ಶಿಬಿರದ ಪ್ರಯೋಜನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ