ನವರಾತ್ರಿಯ ವ್ರತಗಳು ಮತ್ತು ಪೂಜೆ

Upayuktha
0


ಅಮಾಯುಕ್ತಾ ನ ಕರ್ತವ್ಯಾ ಪ್ರತಿಪತ್ಪೂಜನೆ ಮಮ |

ಮುಹೂರ್ತಮಾತ್ರಾ ಕರ್ತವ್ಯಾ ದ್ವವಿತೀಯಾದಿಗುಣಾನ್ವಿತಾ ||


ಅರ್ಥ : ಅಮವಾಸ್ಯೆಯುಕ್ತ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು ಮಾಡಬಾರದು. ಇಂತಹ ಸಮಯದಲ್ಲಿ ಪಾಡ್ಯಯುಕ್ತ ಬಿದಿಗೆಯಂದು ವ್ರತವನ್ನು ಪ್ರಾರಂಭಿಸಿ ಪೂಜೆಯನ್ನು ಮಾಡುವುದು ಉತ್ತಮ.


ಹಸ್ತ ನಕ್ಷತ್ರಯುಕ್ತ ಪಾಡ್ಯದಂದು ಕಲಶವನ್ನು ಸ್ಥಾಪನೆ ಮಾಡುವುದು ಉತ್ತಮ. ತಮ್ಮ ಕುಲಾಚಾರಕ್ಕನುಸಾರ ಅಷ್ಟಮಿ ಅಥವಾ ನವಮಿ ತಿಥಿಗೆ ಹವನವನ್ನು ಮಾಡಬೇಕು. ಅನಂತರ ಅನ್ನಗ್ರಹಣ ಮಾಡಬೇಕು. ಸಂಪೂರ್ಣ ಪೂಜಾಸಾಮಗ್ರಿಗಳ, ಹಾಗೆಯೇ ದೇವಿಯ ಪ್ರತಿಮೆಯನ್ನು ಅದೇ ದಿನ ವಿಸರ್ಜನೆ ಮಾಡಬೇಕು. ದೇವಿಯ ಪೂಜೆಯಲ್ಲಿ ಅರಿಶಿಣ-ಕುಂಕುಮ, ಬಿಲ್ವಪತ್ರೆ ಮುಂತಾದವುಗಳಿರುವುದು ಉತ್ತಮ. ದೇವಿಯ ಪೂಜೆಯಲ್ಲಿ ತುಳಸಿ ಮತ್ತು ಗರಿಕೆಗಳನ್ನು ಉಪಯೋಗಿಸುವಂತಿಲ್ಲ.


ಮುಂದಿನಂತೆ ಯಾವುದಾದರೂಂದು ಪ್ರಕಾರದ ಉಪಾಸನೆಯನ್ನು ಮಾಡಬಹುದು : ಶ್ರೀ ದುರ್ಗಾಸಪ್ತಶತಿಯನ್ನು ಪಠಿಸುವುದು, ಪ್ರತಿದಿನ 15 ಬಾರಿ ಶ್ರೀಸೂಕ್ತದ ಪಠಣವನ್ನು ಮಾಡಬೇಕು. ಅದಕ್ಕಿಂತ ಮೊದಲು ಸೂರ್ಯಮಂತ್ರದ ಒಂದು ಮಾಲೆ ಜಪವನ್ನು ಮಾಡಬೇಕು.


ಶ್ರೀಸೂಕ್ತದ ತಾಂತ್ರಿಕ ಉಪಾಸನೆ : ಈ ಉಪಾಸನೆಯನ್ನು ಪ್ರತಿದಿನ ಮುಂಜಾನೆ 2.30 ಕ್ಕೆ ಪ್ರಾರಂಭ ಮಾಡಬೇಕು. ಮೊದಲು ವಿನಿಯೋಗ, ನ್ಯಾಸ ಮುಂತಾದವುಗಳನ್ನು ಮಾಡಬೇಕು. ಅನಂತರ ಶ್ರೀಯಂತ್ರದ ಮೇಲೆ ಶ್ರೀಲಕ್ಷ್ಮಿಯ ಮೂರ್ತಿಯನ್ನು ಇಟ್ಟು ಶ್ರೀಸೂಕ್ತವನ್ನು 21 ಬಾರಿ ಪಠಿಸಿ ಅಭಿಷೇಕ ಮಾಡಬೇಕು. ಬಳಿಕ 11 ಬಾರಿ ಶ್ರೀಸೂಕ್ತವನ್ನು ಪಠಿಸಿ ತುಪ್ಪ ಮತ್ತು ಗುಗ್ಗುಳಗಳಿಂದ ಹವನವನ್ನು ಮಾಡಬೇಕು. ಇದರಿಂದ ಲಕ್ಷ್ಮೀಮಾತೆಯು ಪ್ರತ್ಯಕ್ಷ ದರ್ಶನ ನೀಡುವಳು. ಅವಳಿಗೆ ಪ್ರತಿನಿತ್ಯವೂ ತಮ್ಮ ಮನೆಯಲ್ಲಿಯೇ ಉಳಿಯಲು ಪ್ರಾರ್ಥನೆ ಮಾಡಬೇಕು.


ಮಂತ್ರಜಪದ ಪದ್ಧತಿ : ಗುರುಗಳು ಯಾವುದೇ ದೇವಿಯ ಮಂತ್ರವನ್ನು ಕೊಟ್ಟಿದ್ದರೂ, ಅದನ್ನು ಪ್ರತಿದಿನ 1 ಮಾಲೆ ಜಪವನ್ನು ರಕ್ತಚಂದನದ ಮಾಲೆಯಿಂದ ಮಾಡಬೇಕು. ಎರಡು ಮಂತ್ರಜಪಗಳಲ್ಲಿ ಸ್ವಲ್ಪ ಅಂತರವನ್ನು ಇಡಬೇಕು. ಜಪವನ್ನು ಮಾಡುವಾಗ ನಾನೇ ಅವ್ಯಯ ಅವಿನಾಶಿ ಭಗವತಿಯಾಗಿದ್ದೇನೆ, ಎಂಬ ಭಾವವನ್ನು ಇಟ್ಟುಕೊಳ್ಳಬೇಕು. 


ಎರಡು ಮಂತ್ರಜಪಗಳಲ್ಲಿನ ಅಂತರವನ್ನು ಎಷ್ಟು ಹೆಚ್ಚಿಗೆ ಇಡಲು ಸಾಧ್ಯವಾಗುತ್ತದೆಯೋ, ಅಷ್ಟು ಹೆಚ್ಚಿಗೆ ಇಡಬೇಕು, ಇದರಿಂದ ಭಾವವೃದ್ಧಿಯಾಗುತ್ತದೆ ಮತ್ತು ತಾನು ಸ್ವತಃ ಜಗದಂಬೆಯಾಗಿದ್ದೇನೆ ಎಂಬ ಅನುಭೂತಿ ಬರುತ್ತದೆ. ಶಕ್ತಿ-ಉಪಾಸಕರು ಇದೇರೀತಿ ಉಪಾಸನೆಯನ್ನು ಮಾಡಿ ಅನುಭೂತಿಯನ್ನು ಪಡೆಯುತ್ತಿರುತ್ತಾರೆ; ಆದರೆ ಅವರು ವಿನಿಯೋಗ, ನ್ಯಾಸ, ಮುದ್ರೆ ಮುಂತಾದ ಕಠಿಣ ಕ್ರಿಯೆಗಳನ್ನು ಮೊದಲು ಮಾಡುತ್ತಾರೆ. 


ಭಗವತಿಯ ಸಾನ್ನಿಧ್ಯವನ್ನು ಪ್ರಾಪ್ತ ಮಾಡಿಕೊಂಡು ಸಂಪೂರ್ಣ ದೇಹವನ್ನು ಮಂತ್ರ ಮಯಗೊಳಿಸಿ ಅವರು ಈ ಉಪಾಸನೆಯನ್ನು ಮಾಡುತ್ತಾರೆ. ನವಾರ್ಣ ಮಂತ್ರದ ದೀಕ್ಷೆಯನ್ನು ಪಡೆದಿದ್ದರೆ, ಅದನ್ನು ಪ್ರತಿದಿನ 1 ಸಾವಿರ ಸಲ ಪಠಿಸಬೇಕು. ದೀಕ್ಷೆ ಪಡೆಯದಿರುವವರು, ಮಂತ್ರದ ಉತ್ಕೀಲನ ಮತ್ತು ಸಂಜೀವನ ಕ್ರಿಯೆಗಳನ್ನು ಮೊದಲು ಮಾಡಿ ನಂತರ ಜಪ ಮಾಡಬೇಕು. ನವರಾತ್ರಿಯಲ್ಲಿ ನವನಾಥ ಪಂಥದವರು ನವನಾಥರ ಉಪಾಸನೆಯನ್ನು ಮಾಡುತ್ತಾರೆ.


ಆಧಾರ : Sanatan.org/Kannada


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
To Top