ನವರಾತ್ರಿ ವಿಶೇಷ: ಶಂಕರಾಚಾರ್ಯರಿಂದ ಪ್ರತಿಷ್ಠಾಪಿತ ಕೊಲ್ಲೂರು ಮೂಕಾಂಬಿಕೆ

Upayuktha
0


ರಶುರಾಮ ಕ್ಷೇತ್ರವೆನಿಸಿಕೊಳ್ಳುವ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ  ಮೂಲಾದೇವಿಯ ರೂಪದ ಮೂಕಾಂಬಿಕಾ ದೇವಿಯ ಕ್ಷೇತ್ರ ಶ್ರೀ ಕ್ಷೇತ್ರ ಕೊಲ್ಲೂರು ಇದೆ. ಕೌಂಮಾಸುರನೆಂಬ ಹೆಸರಿನ ಅಥವಾ ಮೂಕಾಸುರನೆಂಬ ದೈತ್ಯನನ್ನು ಸಂಹರಿಸಿದ ದೇವಿಯೇ ಮೂಕಾಂಬಿಕೆಯಾಗಿದ್ದಾಳೆ. ಈ ಕ್ಷೇತ್ರದಲ್ಲಿ ದೇವಿಯು ಲಿಂಗದ ರೂಪದಲ್ಲಿ ವಾಸಿಸುತ್ತಾಳೆ. ಒಂದು ಕಡೆ ಮಹಾಕಾಳಿಯ ರೂಪದಲ್ಲಿ ಮತ್ತೊಂದು ಕಡೆ ಮಹಾಲಕ್ಷ್ಮಿಯ ರೂಪದಲ್ಲಿ ಪೂಜೆಗೊಳ್ಳುತ್ತಾಳೆ. ಇಲ್ಲಿ ಉದ್ಭವ ಲಿಂಗದ ರೂಪದಲ್ಲಿ ಆದಿಶಕ್ತಿಯು ನೆಲೆಸಿದ್ದಾಳೆ. ಇಲ್ಲಿ ಮೂಕಾಂಬಿಕೆಯು ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಐಕ್ಯಳಾಗಿದ್ದಾಳೆ.  ಈ ಲಿಂಗವನ್ನು ಚಿನ್ನದ ಸರವೊಂದು ಮಧ್ಯಂತರದಲ್ಲಿ ಎರಡು ಭಾಗವನ್ನಾಗಿ ಮಾಡುತ್ತದೆ ಮತ್ತು ಎಡ ಭಾಗದಲ್ಲಿ ಶಕ್ತಿ ಇದ್ದರೆ ಬಲ ಭಾಗದಲ್ಲಿ ಶಿವನಿದ್ದಾನೆ. ಇಲ್ಲಿ ದೇವಿಯು ಆದಿ ಶಂಕರರು ಧ್ಯಾನದಲ್ಲಿ ಕುಳಿತಿರುವಾಗ ಅವಳನ್ನು ಶ್ರೀ ಚಕ್ರದ ಯಂತ್ರದ ಪೀಠದಲ್ಲಿ ಕುಳ್ಳಿರಿಸಿದ್ದರು. ಈಗಲೂ ಅದೇ ಸ್ಥಳದಲ್ಲಿಟ್ಟು ಪೂಜಿಸಲಾಗುತ್ತದೆ. ಶಿವಶಕ್ತಿಯರ ಅಪರೂಪದ ದೇವಾಲಯವಾದ ಕೊಲ್ಲೂರಿನ ದೇವಾಯವು ಪಂಚಲೋಹದಿಂದ ನಿರ್ಮಿತವಾದುದಾಗಿದೆ. ಸೌಪರ್ಣಿಕ ನದೀ ತೀರದಲ್ಲಿರುವ ಕೊಲ್ಲೂರು ಕೂಡ ಒಂದು ಶಕ್ತಿಪೀಠವಾಗಿದೆ. ಆದರೆ 18 ಶಕ್ತಿಪೀಠಗಳಲ್ಲಿ ಒಂದಲ್ಲ. ಈ ದೇವಾಲಯದಲ್ಲಿ 108 ದುರ್ಗಾಲಯಗಳು ಮತ್ತು 108 ಶಿವಾಲಯಗಳು ಇರುವುದು ಇಲ್ಲಿ ಮತ್ತೊಂದು ವಿಶೇಷ.


ಪೌರಾಣಿಕ ಕಥೆಯ ಅನುಸಾರ ಕೋಲ ಎಂಬ ಮಹರ್ಷಿಯನ್ನು ಮೂಕಾಸುರ ಎಂಬ ರಾಕ್ಷಸನು ತಪಸ್ಸನ್ನು ಆಚರಿಸುವಾಗ ಉಪದ್ರವ ನೀಡುತ್ತಿದ್ದನು. ಆಗ ಮಹರ್ಷಿಯು ದೇವಿಯ ಮೊರೆ ಹೋಗಿ ಪ್ರಾರ್ಥಿಸಿದಾಗ ಆ ಅಸುರನನ್ನು ಸಂಹರಿಸಿ ಮೂಕಾಂಬಿಕೆಯಾದಳು. ಕೋಲ ಮಹರ್ಷಿಯು ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿದ ಕಾರಣ ಇಲ್ಲಿ ಶಿವ ನೆಲೆಸಿದ್ದಾನೆ ಎಂಬ ನಂಬಿಕೆಯೂ ಇದೆ. ಇಲ್ಲಿಯ ದೇಔಇ ಪಾರ್ವತಿಯ ಅವತಾರ ಪಾರ್ವತಿ ದೇವಿಯ ದೇವಾಲಯವಿರುವ ಏಕೈಕ ಕ್ಷೇತ್ರವೆಂದು ಪ್ರಸಿದ್ಧವಾಗಿದೆ.


ಶಂಕರಾಚಾರ್ಯರ ಕುರಿತು ಇನ್ನೊಂದು ಪ್ರಸಿದ್ಧ ಕಥೆಯಿದೆ. ಶಂಕರಾಚಾರ್ಯರು ಒಮ್ಮೆ ಕೊಡಚಾದ್ರಿಯಲ್ಲಿ ತಪಸ್ಸು ಮಾಡಿದರು. ಪ್ರಸನ್ನಳಾದ ದೇವಿಯು ವರವನ್ನು ಕೇಳಿದಾಗ ಶಂಕರಾಚಾರ್ಯರು ಕೇರಳದಲ್ಲಿ ಅವಳು ನೆಲೆಸುವಂತೆ ಬೇಡಿಕೊಳ್ಳುತ್ತಾರೆ. ಆಗ ದೇವಿಯು ಆದಿ ಶಂಕರರಿಗೆ ಮುಂದೆ ಹೋಗಲು ಹೇಳಿ ಹಿಂತಿರುಗಿ ನೋಡದೇ ಇರಲು ಹೇಳಿ ಹಾಗೇನಾದರೂ ಹಿಂತಿರುಗಿ ನೋಡಿದಲ್ಲಿ ಇರುವ ಜಾಗದಲ್ಲಿಯೇ ಇರುವುದಾಗಿ ಹೇಳುತ್ತಾಳೆ. ಕೊಲ್ಲೂರಿನ ಸಮೀಪದಲ್ಲಿ ದೇವಿಯ ನಿಂತಾಗ ಶಂಕರರು ಅಲ್ಲಿಯೇ ಹಿಂತಿರುಗಿ ನೋಡಿದಾಗ ದೇವಿಯನ್ನು ಇಲ್ಲಿ ಸ್ಥಾಪಿಸಿದರು ಎಂದು ಹೇಳಲಾಗಿದೆ. ಕೊಲ್ಲೂರು ಮೂಕಾಂಬಿಕೆಯು ಬಲ ಮತ್ತು ಭಾವನಾತ್ಮಕ ಶಕ್ತಿಯ ಪ್ರತೀಕವಾಗಿದ್ದಾಳೆ.



ದೇವಾಲಯದ ಕುರಿತು ಹಳೆಯ ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ದೇವಿಯ ವರ್ಣನೆ ಇದೆ. 8ನೇ ಶತಮಾನದಲ್ಲಿ ಇಲ್ಲಿಯ ದೇವಾಲಯವನ್ನು ಕಟ್ಟಿರುವ ಉಲ್ಲೇಖ ದೊರೆತಿದೆ. ಈ ದೇವಾಲಯದ ಅಭಿವೃದ್ಧಿ ಮತ್ತು ಯೋಗ ಕ್ಷೇಮವನ್ನು ನೋಡಿಕೊಂಡವರಲ್ಲಿ ಕೆಳದಿಯ ರಾಜವಂಶದವರು ಪ್ರಮುಖರಾಗಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ಪೂಜೆಯನ್ನು ಆರಾಧನೆಯನ್ನು ಮಾಡಿದವರಿಗೆ ಯಥೇಚ್ಛವಾದ ಧನಸಂಪತ್ತು ದೊರೆಯುವುದೆಂಬ ನಂಬಿಕೆಯಿದೆ. ದೇವಾಲಯದ ಧಾರ್ಮಿಕ ಶಕ್ತಿಗೆ ಮಾತ್ರವಲ್ಲ ಇಲ್ಲಿಯ ಸುಂದರ ಶಿಲ್ಪಕಲೆ ಮತ್ತು ಆಧ್ಯಾತ್ಮಿಕತೆಗೆ ಹಾಗೂ ಪ್ರಶಾಂತ ವಾತಾವರಣಕ್ಕೆ ಪ್ರಸಿದ್ಧವಾಗಿದೆ.


ಮುಂಜಾನೆಯ ಸುಪ್ರಭಾತ ಸೇವೆಯಿಂದ ಇಲ್ಲಿಯ ಪೂಜೆಗಳು ಆರಂಭವಾಗುತ್ತಿದ್ದು ಜಾವ ಜಾವದ ವಿಶೇಷ ಪೂಜೆಗಳು ನಡೆಯುತ್ತವೆ. ಅದರಲ್ಲೂ ನವರಾತ್ರಿಯ ಮಹಾಪರ್ವದಲ್ಲಿ ಇನ್ನೂ ಹೆಚ್ಚಿನ ವಿಶೇಷ ಪೂಜೆಯು ನಡೆಯುತ್ತದೆ. ದೇವಾಲಯದಲ್ಲಿ ಪ್ರವೇಶಿಸಲು ಭಾರತೀಯ ಸಂಪ್ರದಾಯಿಕ ಉಡುಗೆಗಳನ್ನು ಮಾತ್ರ ಧರಿಸಬೇಕು.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top