ನ್ಯಾನೋ ತಂತ್ರಜ್ಞಾನ ಒಂದು ಕ್ಷೇತ್ರಕ್ಕೆ ಸಂಬಂಧಿಸಿಲ್ಲ: ಡಾ.ಸಂತೋಷ್ ಕೆ. ತಿವಾರಿ

Upayuktha
0


ಉಜಿರೆ: 
"ನ್ಯಾನೋ ತಂತ್ರಜ್ಞಾನವು ಕೇವಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದಲ್ಲ, ಅದು ರಸಾಯನಶಾಸ್ತ್ರ ಭೌತಶಾಸ್ತ್ರ ಜೀವಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ್ದು" ಎಂದು ನಿಟ್ಟೆ ಎನ್.ಎ.ಎಂ.ಐಟಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಸಂತೋಷ್.ಕೆ ತಿವಾರಿ ಹೇಳಿದರು. 


ಎಸ್‌ಡಿಎಂ ಕಾಲೇಜಿನಲ್ಲಿ ರಾಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ ಆಯೋಜಿಸಿದ್ದ ನ್ಯಾನೋಟೆಕ್ನಾಲಜಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, "ಜೀವಶಾಸ್ತ್ರವು ನ್ಯಾನೋ ತಂತ್ರಜ್ಞಾನದ ಅತಿ ಮುಖ್ಯ ಭಾಗವಾಗಿದೆ.ನ್ಯಾನೋ ತಂತ್ರಜ್ಞಾನದ ವಿಶೇಷತೆ ಎಂದರೆ,ಇದು ಸಣ್ಣ ಮತ್ತು ಅದೃಶ್ಯ ಅಣುಗಳ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಿದೆ"ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ,"ನ್ಯಾನೋ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಒಂದು ಮುಖ್ಯ ವಿಷಯ. ಬಹುಶಃ ಮುಂದಿನ ದಿನಗಳಲ್ಲಿ ನಾವು ಇದರ ಮುಖಾಂತರ ಸಸ್ಯಬೆಳೆಗಳನ್ನು ಸುಧಾರಿಸುವ ಬಗ್ಗೆ ಯೋಚಿಸಬಹುದು, ಸಸ್ಯರೋಗಳನ್ನು ಗುರುತಿಸಿ ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಬಗ್ಗೆ ಯೋಚಿಸಬಹುದು. ವಿದ್ಯಾರ್ಥಿಗಳು ನ್ಯಾನೋ ತಂತ್ರಜ್ಞಾನವನ್ನು ಸೂಪರ್ ಸ್ಪೆಷಲೈಸೇಶನ್ ಆಗಿ ಆರಿಸಿಕೊಂಡು ವಿಶೇಷ ಅಧ್ಯಯನವನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳು ದೊರಕುತ್ತದೆ"ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ನ್ಯಾನೋಟೆಕ್ನಾಲಜಿ ದಿನದ ಪ್ರಯುಕ್ತ ಅಕ್ಟೋಬರ್ 3 ರಂದು ವಿಭಾಗ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ ಸೇರಿದಂತೆ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಕಾರ್ಯಕ್ರಮವನ್ನು ವಿದ್ಯಾರ್ಥಿನಿ  ರುಚಿರ ನಿರೂಪಿಸಿ, ವೈದೇಹಿ ಮತ್ತು ತಂಡ ಪ್ರಾರ್ಥಿಸಿ, ವಿದ್ಯಾರ್ಥಿನಿ ಶ್ರೇಯ ಎಸ್ ಭಟ್ ಸ್ವಾಗತಿಸಿ, ಗಿರೀಶ್ ಕೃಷ್ಣ ವಂದಿಸಿದರು.


Post a Comment

0 Comments
Post a Comment (0)
To Top