ಮುಂಡಾಜೆ: ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವನೆ, ಶಿಸ್ತು, ಸಮಯ ಪಾಲನೆ, ಹಾಗೂ ಜಾತಿ ಮತ ಪಂಥಗಳ ಭೇದವಿಲ್ಲದೆ ಕೂಡಿ ಬಾಳುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಲು ಎನ್ ಎಸ್ ಎಸ್ ಶಿಬಿರಗಳು ಸಹಕಾರಿ ಎಂದು ಶತಾಬ್ದಿ ವಿದ್ಯಾಲಯ ಸಮಿತಿ ರಿ. ಮುಂಡಾಜೆ ಇದರ ಸಂಚಾಲಕ ನಾರಾಯಣ ಫಡ್ಕೆ ಅಭಿಪ್ರಾಯ ಪಟ್ಟರು.
ಅವರು ಗುರುವಾರ (ಅ.3) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ ಇಲ್ಲಿ ನಡೆಯುತ್ತಿರುವ ಮುಂಡಾಜೆ ಪದವಿ ಪೂರ್ವ ಕಾಲೇಜು ಮುಂಡಾಜೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಜಾಲಿ ಓ ಎ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸೈಂಟ್ ಆಂಟನೀಸ್ ಚರ್ಚ್ ತೋಟತ್ತಾಡಿ ಇಲ್ಲಿನ ಧರ್ಮ ಗುರು ರೆ. ಫಾ.ಜೋಸ್ ಪೂವತ್ತಿಂಗಳ್ ಶುಭಾಶೀರ್ವಚನ ನೀಡಿದರು.
ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿಯ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸ್ಮಠ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರಿಯಡ್ಕದ ಮುಖ್ಯ ಶಿಕ್ಷಕಿ ಮೇರಿ ವಿ ವಿ, ಶ್ರೀ ಅಣ್ಣಪೂರ್ಣೇಶ್ವರಿ ಕ್ಷೇತ್ರ ಕುಡುಮಡ್ಕ ಇದರ ಆಡಳಿತ ಮೊಕ್ತೇಸರ ರಾಘವ ಗೌಡ ಕುಡುಮಡ್ಕ, ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಸೋಮನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ಎಸ್ಎಸ್ ಶಿಬಿರಾಧಿಕಾರಿ ನಮಿತಾ ಕೆ ಆರ್ ಸ್ವಾಗತಿಸಿ, ಸಂಖ್ಯಾಶಾಸ್ತ್ರ ಉಪನ್ಯಾಸಕಿ ವಿದ್ಯಾ ರಾವ್ ವಂದಿಸಿದರು. ಕನ್ನಡ ಉಪನ್ಯಾಸಕಿ ವಸಂತಿ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


