ಸಮಯವೆಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮಗೆ ಗೊತ್ತಿಲ್ಲದಂತೆ ಅದು ನಮ್ಮನ್ನು ನಿಯಂತ್ರಿಸುತ್ತದೆ. ಒಂದು ಕಡೆ ಸಮಯದ ಮಹತ್ವವನ್ನು ಹೇಗೆ ಹೇಳಿದ್ದಾರೆ. "ಒಂದು ವರ್ಷದ ಮಹತ್ವವನ್ನು ಅರಿಯಬೇಕೆಂದರೆ ಒಬ್ಬ ಫೇಲಾದ ವಿದ್ಯಾರ್ಥಿಯನ್ನು ಕೇಳಿ ನೋಡಿ,
ಒಂದು ತಿಂಗಳ ಮಹತ್ವವನ್ನು ಅರಿಯಬೇಕು ಎಂದರೆ ಅವಧಿಗೆ ಮುನ್ನವೇ ಮಗುವನ್ನು ಹೆತ್ತ ತಾಯಿಯನ್ನು ಕೇಳಿ. ಒಂದು ವಾರದ ಮಹತ್ವವನ್ನು ಅರಿಯಬೇಕು ಎಂದರೆ ಯಾವುದೋ ಕಾರಣದಿಂದ ಒಂದು ವಾರದ ಕೆಲಸವನ್ನು ಕಳೆದುಕೊಂಡ ಕಾರ್ಮಿಕನನ್ನು. ಕೇಳಿ ನೋಡಿ, ಒಂದು ದಿನದ ಮಹತ್ವವನ್ನು ಅರಿಯಬೇಕು ಎಂದರೆ ಸರಿಯಾಗಿ ಮಾಹಿತಿ ಸಿಗದೇ ಇಂಟರ್ವ್ಯೂ ಕಳೆದುಕೊಂಡ ನಿರುದ್ಯೋಗಿಯನ್ನು ಕೇಳಿ ನೋಡಿ,
ಒಂದು ಗಂಟೆಯ ಮಹತ್ವವನ್ನು ಅರಿಯಬೇಕು ಎಂದರೆ ಬಸ್ ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಿ ನೋಡಿ, ಒಂದು ನಿಮಿಷದ ಮಹತ್ವವನ್ನು ಅರಿಯಬೇಕು. ಎಂದರೆ ಸುದೈವದಿಂದ ಅಪಘಾತದಿಂದ ಪಾರಾದ. ವ್ಯಕ್ತಿಯನ್ನು ಕೇಳಿ ನೋಡಿ, ಒಂದು ಸೆಕೆಂಡಿನ ಮಹತ್ತ್ವ ಅನ್ನು ಅರಿಯಬೇಕು ಎಂದರೆ ಒಲಂಪಿಕ್‌ನಲ್ಲಿ ಚಿನ್ನದ ಪದಕದ ಬದಲಾಗಿ ಬೆಳ್ಳಿಯ ಪದಕವನ್ನು ಪಡೆದುಕೊಂಡ ಕ್ರೀಡಾಪಟು ಹೇಳುತ್ತಾನೆ.
ಪುರಂದರ ದಾಸರು ಕೂಡ "ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರ" ಎಂದು ಸಮಯದ ಮಹತ್ತ್ವ ಸಾರಿ ಹೇಳಿದ್ದಾರೆ.
ಸಮಯಕ್ಕೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ. ಹಳ್ಳಿಗಳಲ್ಲಿ "ಹಡೆದಾಗಿನ ಬ್ಯಾನಿ, ಸತ್ತಾಗಿನ ದುಃಖ ಮೂರೇ ದಿವಸ" ಎಂದು ಹೇಳುತ್ತಾರೆ. ಅಂದರೆ ಸಮಯಕ್ಕೆ ಎಲ್ಲ ನೋವನ್ನು. ಮರೆಸುವ ಶಕ್ತಿ ಇದೆ. ಅದು ತಿಪ್ಪೆಯನ್ನು ಉಪ್ಪರಿಗೆಯಾಗಿ ಮಾಡುವ ಶಕ್ತಿ ಇದೆ. ಕಾಲಚಕ್ರದ ಸೆಳೆತಕ್ಕೆ ಎಲ್ಲರೂ ಸಿಕ್ಕವರೇ. ಕೆಲ ವರ್ಷಗಳ ಹಿಂದೆ ಮುಘಲ್ ವಂಶಜ ಮಹಿಳೆಯೊಬ್ಬರು ದೆಹಲಿಯ ಚಾಂದನಿ ಚೌಕ್ನಲ್ಲಿ. ಅಲೆದಾಡುವ ಚಿತ್ರವೊಂದು ಪತ್ರಿಕೆಗಳ ಮುಖ್ಯ ವಿಷಯವಾಗಿತ್ತು.ಅದಕ್ಕೆ ಹೇಳುವುದು "ಕಾಲ ಎಲ್ಲರ ಎಳೆತದೆ ಕಾಲು". ಈಗಲಾದರೂ ಕಾಲದ ಮಹತ್ವವನ್ನು ಅರಿತುಕೊಂಡು ನಮ್ಮನ್ನು ಅರಿತುಕೊಂಡು ಬದುಕೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ