ಇದನ್ನು ಕೇಳಿದರೆ ಆಶ್ಚರ್ಯವಾಗಬಹುದು. ಆದರೆ ಅದು ಮಾತ್ರ ಸತ್ಯವಾಗಿದೆ. ಏಕೆಂದರೆ ಸಾಮಾನ್ಯವಾಗಿ ಎಲ್ಲರೂ ಹೂಡಿಕೆ ಎಂದರೆ ಕೇವಲ ಮ್ಯೂಚುವಲ್ ಫಂಡ್ ಮತ್ತು ಷೇರು ಪೇಟೆಯಲ್ಲಿ ಹೂಡಿಕೆ ಎಂದು ತಿಳಿದುಕೊಳ್ಳಲಾಗುತ್ತದೆ. ಆದರೆ ಅದು ಮಾತ್ರ ಬೇರೆಯೇ ಆಗಿದೆ.
ಸಾಮಾನ್ಯವಾಗಿ ಹೂಡಿಕೆ ಎಂದರೆ ಕೇವಲ ಲಾಭ ಗಳಿಸುವ ಸಾಧನ ಎಂದು ತಿಳಿದುಕೊಳ್ಳಲಾಗುತ್ತದೆ. ಆದರೆ ಹೂಡಿಕೆ ಎಂದರೆ ಅಷ್ಟು ಮಾತ್ರವಲ್ಲ ಅದಕ್ಕಿಂತಲೂ ಬೇರೆಯೇ ಅರ್ಥವನ್ನು ಹೊಂದಿರುತ್ತದೆ.
ಎಷ್ಟೋ ಸಾರಿ ನಾವು ನಮ್ಮ ಹಣವನ್ನು, ಪರಿಶ್ರಮವನ್ನು, ಸಮಯವನ್ನು ನಮಗೆ ಗೊತ್ತಿಲ್ಲದಂತೆ ಹೂಡಿಕೆ ಮಾಡಿ ಬಿಟ್ಟಿರುತ್ತೇವೆ. ನಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು, ನಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಹೂಡಿಕೆ ಮಾಡಿ ಅದು ನಮಗೆ ಸಿಗದಿದ್ದಾಗ "Complaint Box" ಗಳಾಗಿ ಬಿಟ್ಟಿರುತ್ತೇವೆ.
ಎಷ್ಟೋ ಸಾರಿ ಹಣವನ್ನು ಬೇಕಾಬಿಟ್ಟಿಯಾಗಿ ಕೆಟ್ಟ ಚಟಕ್ಕೆ ಖರ್ಚು ಮಾಡಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಮಾರಕವಾದ ಉದಾಹರಣೆಗಳು ಉಂಟು.
ಆದ್ದರಿಂದ ನಮ್ಮ ಹಣವನ್ನು, ಪರಿಶ್ರಮವನ್ನು, ಸಮಯವನ್ನು ವಿನಿಯೋಗಿಸಬೇಕಾದಾಗ ನಾವು ತುಂಬಾ ಜಾಗ್ರತೆ ವಹಿಸಬೇಕು.
ನಾವು ನಮ್ಮ ಸಮಯವನ್ನು ಜ್ಞಾನಾರ್ಜನೆಗೆ ಹೂಡಿಕೆ ಮಾಡಿದರೆ ನಾವು ಉತ್ತಮ. ಜ್ಞಾನವನ್ನು ಪಡೆದುಕೊಳ್ಳಬಹುದು. ಹಾಗೆಯೇ ನಮ್ಮ ಹಣವನ್ನು ಸರಿಯಾಗಿ ಹೂಡಿಕೆ ಮಾಡಿದರೆ ನಾವು ಉತ್ತಮ ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾಜಮುಖಿಯಾಗಿ ಬಾಳಬಹುದು.
ಅದೇ ಸಮಯದಲ್ಲಿ ನಮ್ಮ ಹೂಡಿಕೆಯನ್ನು ಎಲ್ಲಿ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಇಂಗ್ಲಿಷಿನಲ್ಲಿ ಹೇಳುತ್ತಾರೆ, ""Don't invest in wrong people", ಅದರ ಕಡೆಗೆ ಗಮನ ಹರಿಸೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


