ಕಣಚೂರು ಆಯುರ್ವೇದ ಅಸ್ಪತ್ರೆಯಿಂದ ಜಿಲ್ಲಾ ಕಾರಾಗೃಹದಲ್ಲಿ ವೈದ್ಯಕೀಯ ಶಿಬಿರ

Upayuktha
0

ಆಯುರ್ವೇದ ದಿನಾಚರಣೆ ಪ್ರಯುಕ್ತ




ಮಂಗಳೂರು: ಕಣಚೂರು ಆಯುರ್ವೇದ ಆಸ್ಪತ್ರೆ, ವೇದಂ ಆಯುರ್ವೇದ, ಕರ್ನಾಟಕ ಆಯುರ್ವೇದ ಕಾಲೇಜು ಮತ್ತು ಎಲೋಶಿಯಸ್ ಕಾಲೇಜು ಎನ್ ಎಸ್ ಎಸ್ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದ ಖೈದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಅ. 28 ರಂದು ನಡೆಸಲಾಯಿತು.


ಕಾರಾಗ್ರಹ ಅಧೀಕ್ಷಕ ಓಬಳೇಶಪ್ಪರವರು ಉದ್ಘಾಟಿಸಿ ಖೈದಿಗಳ ಆರೋಗ್ಯದೆಡೆಗೆ ಕೊಡುವ ಗಮನವು ಅವರ ಮನಸ್ಸಿಗೂ ಶಾಂತಿ ನೀಡಬಲ್ಲುದು ಎಂದರು.


ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಮಾತನಾಡಿ, ಖೈದಿಗಳಿಗೂ ಸಹಕಾರ ನೀಡುವ ಮೂಲಕ ಅವರ ಬೇಸರ ದೂರಾಗಿ ಮನಪರಿವರ್ತನೆಗೂ ಸಹಕಾರಿಯಾಗ ಬಲ್ಲುದು. ಆಗಾಗ ಈ ರೀತಿಯ ಶಿಬಿರ ಮಾಡುವ ಉದ್ದೇಶ ಸಂಸ್ಥೆಗಿದೆ ಎಂದರು.


ಕಣಚೂರಿನ ಆಯುರ್ವೇದ ಕಾರ್ಡನ್ನು ಸಹ ಇದೇ ವೇಳೆ ಕಾರಾಗೃಹ ಮುಖ್ಯಾಧಿಕಾರಿಗಳಿಗೆ ವೇದಂ ಆಯುರ್ವೇದ ಆಸಪ್ತ್ರೆಯ ಮುಖ್ಯಸ್ಥ, ಕಣಚೂರಿನ ಕಾಯಚಿಕಿತ್ಸಾ ವೈದ್ಯ ಡಾ ಕೇಶವ ರಾಜ್ ಹಸ್ತಾಂತರಿಸಿದರು.


ಅಲೋಶಿಯಸ್ ಕಾಲೇಜಿನ ಮ್ಯಾಕ್ಸಿಮ್, ಹಾಗೂ ಬೆಡ್ಮಡ್ ಫ್ರಂಕ್ ರವರು ಈ ಸತ್ಕಾರ್ಯದ ವಿವರ ನೀಡಿದರು. ಹಾಗೆಯೇ ಕರ್ನಾಟಕ ಆಯುರ್ವೇದ ಕಾಲೇಜಿನ‌ ಡಾ ವಾಣಿಶ್ರೀಯವರು ತಮ್ಮ ಸಂಸ್ಥೆಯೂ ಸಹ ಈ ಶಿಬಿರದೊಡನೆ ಜೊತೆಗೂಡಿದ್ದು ಅತೀವ ಸಂತಸ ತಂದಿದೆ ಎಂದರು.


ರಕ್ತ ತಪಾಸಣೆ, ಮೂಳೆ ಸಾಂದ್ರತೆ ಪರೀಕ್ಷೆಗಳನ್ನೊಳಗೊಂಡಂತೆ ಸುಮಾರು 350 ಖೈದಿಗಳಿರುವ ಈ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಶಿಬಿರದಲ್ಲಿ ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ, ಡಾ ಚರಣ್, ಡಾ ಜೈನುದ್ದೀನ್ ಸಹಾಯಕರಾಗಿ ಜಿಸ್ನಾ ಹಾಗೂ ಶ್ರಾವ್ಯಾ ಅವರೂ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top