ಮಂಗಳೂರು: ಕುದ್ರೋಳಿ ಭಗವತಿ, ತಿಲಕನಗರ, ಡೊಮಿನಿಕ್ ಚರ್ಚ್, ಲೇಡಿಹಿಲ್, ಕುಲಶೇಖರ, ಇಂಡಸ್ಟ್ರೀಯಲ್ ಹಾಗೂ ದತ್ತನಗರ ಫೀಡರ್‌ಗಳ ವ್ಯಾಪ್ತಿಗಳಲ್ಲಿ ಅ.15 ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಕುದ್ರೋಳಿ 33/11 ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಭಗವತಿ ಫೀಡರ್ ಮತ್ತು 33/11 ಕೆವಿ ಉರ್ವಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆವಿ ತಿಲಕನಗರ ಫೀಡರ್‌ನಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕಲಾಕುಂಜ ರಸ್ತೆ, ಭಗವತಿ ಕ್ಷೇತ್ರ, ಎಕ್ಸ್ ಪರ್ಟ್ ಕಾಲೇಜ್, ಬೆಸೆಂಟ್ ಕಾಂಪ್ಲೆಕ್ಸ್, ಸಿ.ಬಿ. ಹಾಲ್, ಶಾರದಾ ವಿದ್ಯಾಲಯ, ಓಶಿಯನ್ ಪರ್ಲ್ ಹೋಟೆಲ್ ಬೋಳೂರು, ಭಗವತಿ ನಗರ, ಮಠದಕಣಿ ರೋಡ್, ತಿಲಕ್‌ನಗರ, ಮಠದಕಣಿ 2ನೇ, 3ನೇ ಮತ್ತು 4ನೇ ಕ್ರಾಸ್, ಬರ್ಕೆ ಪೊಲೀಸ್ ಠಾಣೆ ಹಿಂಭಾಗ, ಹಿಂದೂಸ್ತಾನ್ ಲಿವರ್ ಹಿಂಬದಿ, ಅಮೃತಾನಂದಯಮಯಿ ಶಾಲೆ, ಜಾರಂದಾಯ ದೈವಸ್ಥಾನ, ಎಸ್.ಬಿ.ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಉರ್ವಸ್ಟೋರ್, ಲೇಡಿಹಿಲ್ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಉರ್ವಮಾರ್ಕೆಟ್ 33/11 ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಡೊಮಿನಿಕ್ ಚರ್ಚ್ ಫೀಡರ್ ಮತ್ತು 11ಕೆವಿ ಲೇಡಿಹಿಲ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಅ.15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಈ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಹಾಗಾಗಿ ಅಂದು ಕೋಡಿಕಲ್, ಡೊಮಿನಿಕ್ ಚರ್ಚ್ ರೋಡ್, ನಾಗಬ್ರಹ್ಮ ಸನ್ನಿದಿ ರೋಡ್, ವಿವೇಕಾನಂದ ನಗರ, 4ನೇ ಮೈಲಿ, ಜೆ.ಬಿ.ಲೋಬೋ, ಕೊಟ್ಟಾರ ಕ್ರಾಸ್, ಲೇಡಿಹಿಲ್, ಸಾಯಿ ಭಜನಾ ಮಂದಿರ, ಉರ್ವಸ್ಟೋರ್, ಕೊಟ್ಟಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇಂಡಸ್ಟ್ರೀಯಲ್ ಎಸ್ಟೇಟ್ /ದತ್ತನಗರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ
ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿ ಹಿನ್ನೆಲೆಯಲ್ಲಿ ಕುಲಶೇಖರ 110/33/11 ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರೀಯಲ್ ಫೀಡರ್ ಮತ್ತು 11 ಕೆವಿ ದತ್ತನಗರ ಫೀಡರ್‌ಗಳ ವ್ಯಾಪ್ತಿಯಲ್ಲಿ ಅ.15 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬಿಕರ್ನಕಟ್ಟೆ, ಕಲಾಯಿ ಕಂಡೆಟ್ಟು, ಜಯಶ್ರೀ ಗೇಟ್, ನಾಯ್ಗರಲೇನ್, ದತ್ತನಗರ, ಮೇಕೆದಗುಡ್ಡೆ, ವಲ್ಲಿ ಕಂಪೌಂಡ್, ಪದವು, ಶರ್ಬತ್ ಕಟ್ಟೆ, ಇಂಡಸ್ಟ್ರೀಯಲ್ ಎಸ್ಟೇಟ್ ಏರಿಯಾ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ