ಹುತಾತ್ಮ ಕಾರ್ಯಕರ್ತನ ಕುಟುಂಬಕ್ಕೆ ಮನೆ ನಿರ್ಮಾಣ ಪಕ್ಷದೊಳಗಿನ ಕೌಟುಂಬಿಕ ಭಾವನೆಗೆ ಸಾಕ್ಷಿ: ಶಾಸಕ ಡಾ. ಭರತ್ ಶೆಟ್ಟಿ
ಕಾವೂರು: ಕಾರ್ಯಕರ್ತರೆಲ್ಲಾ ಒಟ್ಟಾಗಿ ಪಕ್ಷಕ್ಕಾಗಿ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮನಾದ ಕಾರ್ಯಕರ್ತನ ಕುಟುಂಬಕ್ಕೆ ಗೃಹ ನಿರ್ಮಾಣ ಮಾಡಿ ಕೊಟ್ಟಿರುವುದು, ಬಿಜೆಪಿ ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ತೋರಿಸುತ್ತದೆ. ಬಿಜೆಪಿ ಒಂದು ಪಕ್ಷವಲ್ಲ ಕೌಟುಂಬಿಕ ಭಾವನೆಯನ್ನು ಹೊಂದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ನುಡಿದರು.
ಪದವಿನಂಗಡಿಯಲ್ಲಿ ಬಿಜೆಪಿ ಯುವಮೋರ್ಚಾವು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಪಾಕ್ಷಿಕ ಸೇವಾ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿಯವರ ಜನ್ಮದಿನದ ಅಂಗವಾಗಿ ಉತ್ತಮ ಸೇವಾ ಕಾರ್ಯವನ್ನು ಯುವಮೋರ್ಚಾ ಘಟಕ ಮಾಡಿದೆ. ಪಕ್ಷವು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸದಾ ಜನರ ಒಳಿತಿಗಾಗಿ ಸಮಾಜಮುಖ ಕೆಲಸಗಳು ಸಾಗುತ್ತಿವೆ. ರಕ್ತದಾನವು ಇತರರಿಗೆ ಜೀವನ ದಾನ ನೀಡುವಂತಹ ಪುಣ್ಯದ ಕೆಲಸವಾಗಿದೆ ಅಲ್ಲದೆ ಪಕ್ಷದ ಕಾರ್ಯಕರ್ತರ ಬದ್ದತೆಯು ಇತರರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರಿಗೆ ಗೃಹ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೇತೃತ್ವವನ್ನು ವಹಿಸಿದ್ದು ಈ ಸಂದರ್ಭ ಕಾರ್ಯಕರ್ತರೆಲ್ಲಾ ಸೇರಿ ಸಮ್ಮಾನಿಸಿದರು. ನೂತನ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರನ್ನು ಅಭಿನಂದಿಸಲಾಯಿತು. ಮಂಗಳೂರು ಉತ್ತರ ಕ್ಷೇತ್ರದ ಮನಪಾ ಸದಸ್ಯರಾದ ಸುಮಿತ್ರ ಕರಿಯ, ಸುಮಂಗಳ ರಾವ್, ಸಂಗೀತ ಆರ್.ನಾಯಕ್, ಶ್ವೇತ ಪೂಜಾರಿ, ಲೋಕೇಶ್ ಬೊಳ್ಳಾಚೆ, ನಯನ ಆರ್.ಕೋಟ್ಯಾನ್ ಮತ್ತಿತರರನ್ನು ಸಮ್ಮಾನಿಸಲಾಯಿತು.
ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಠಾರಿ, ಜಿಲ್ಲಾ ಪ್ರಮುಖರಾದ ರಣ್ ದೀಪ್ ಕಾಂಚನ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಉಪಾಧ್ಯಕ್ಷ ಅಶ್ವಿತ್ ನೋಂಡಾ ಉಪಾಧ್ಯಕ್ಷ ವರುಣ್ ರಾಜ್ ಅಂಬಟ್, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಂಜಿತ್ ಶೆಟ್ಟಿ, ಪ್ರಭಾರಿ ಪ್ರವೀಣ್ ಕೊಂಡಾಣ, ಪ್ರಮುಖರಾದ ಭರತ್ ರಾಜ್ ಕೃಷ್ಣಾಪುರ, ಶಾನ್ ವಾಜ್ ಹುಸೈನ್, ಯಶಪಾಲ್, ಸಾಕ್ಷತ್ ಶೆಟ್ಟಿ ಹಾಗೂ ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉತ್ತರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಕ್ಷಿತ್ ಪೂಜಾರಿ ವಂದಿಸಿದರು. ಬ್ಲಡ್ ಬ್ಯಾಂಕ್ ವೈದ್ಯರನ್ನು ಈ ಸಂದರ್ಭ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ