ಮಂಗಳೂರು: ಮಂಗಳೂರು ಹವ್ಯಕ ಸಭಾದ ವತಿಯಿಂದ ಜಿ.ಕೆ. ಭಟ್ ಸೇರಾಜೆಯವರ ನೇತೃತ್ವದಲ್ಲಿ ಶುಕ್ರವಾರ (ಸೆ.29) “ಜಾಂಬವತಿ ಕಲ್ಯಾಣ” ತಾಳಮದ್ದಲೆ ಬಹಳ ಚೊಕ್ಕದಾಗಿ ಮೂಡಿಬಂತು. ಮೇರು ಕಲಾವಿದ ವಿಟ್ಲ ಶಂಭು ಶರ್ಮ, ಜಿ.ಕೆ. ಭಟ್ ಸೇರಾಜೆ, ಗಣರಾಜ ಕುಂಬ್ಳೆ, ರಮೇಶ್ ಭಟ್ ಪುತ್ತೂರು ಮೊದಲಾದವರೊಂದಿಗೆ ಉದಯೋನ್ಮುಖ ಪ್ರತಿಭೆ ಕುಮಾರಿ ದೀಕ್ಷಾ ಪಾರ್ವತಿಯವರಿಗೂ ವೇದಿಕೆಯನ್ನು ಕಲ್ಪಿಸಿಕೊಡಲಾಯಿತು.
ಶಂಕರ ಭಟ್ ಕಲ್ಮಡ್ಕ ಮತ್ತು ಎಸ್. ಎನ್. ಭಟ್ ಬಾಯಾರು ಹಿಮ್ಮೇಳದಲ್ಲಿ ಸಹಕರಿಸಿದರು. ಸುಮಾರು ನೂರಕ್ಕೂ ಹೆಚ್ಚು ಜನ ಕಲಾಪ್ರೇಮಿಗಳು ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ವೀಕ್ಷಿಸಿ ಆನಂದಿಸಿದರು.
ಹವ್ಯಕ ಸಭಾದ ಸಂಪ್ರದಾಯದಂತೆ ಖ್ಯಾತ ಅರ್ಥದಾರಿ ವಿಟ್ಲ ಶಂಭು ಶರ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿ. ಕೆ. ಭಟ್ ಸೇರಾಜೆ ಅಭಿನಂದನಾ ಭಾಷಣವನ್ನು ನೆರವೇರಿಸಿಕೊಟ್ಟರು. ದಿವಾಣ ಗೋವಿಂದ ಭಟ್ಟರು ಮುಖ್ಯ ಅತಿಥಿಗಳಾಗಿ ಬಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಭಾದ ಅಧ್ಯಕ್ಷರಾದ ಶ್ರೀಮತಿ ಗೀತಾದೇವಿ ಚೂಂತಾರು ಅವರು ವಹಿಸಿದ್ದರು.
ಕಾರ್ಯಕಾರೀ ಸಮಿತಿಯ ಸದಸ್ಯ ಅನಂತ ಸುಬ್ರಹ್ಮಣ್ಯ ಶರ್ಮ ಅವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು ಮತ್ತು ಶ್ರೀಮತಿ ಆಶಾಗೌರಿ ಭಟ್ ಅವರು ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ಸಭಾದ ಸದಸ್ಯ ಶಂಕರನಾರಾಯಣ ಭಟ್ ಕೆರೆಮೂಲೆ ಕಾರ್ಯಕ್ರಮದ ನಿರೂಪಣೆ ಮಾಡಿಕೊಟ್ಟರು. ಕಾರ್ಯಕ್ರಮವು ಮಧ್ಯಾಹ್ನ 2.30ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮದೊಂದಿಗೆ ಸಮಾಪ್ತಿಯಾಯಿತು.
ದಿವಾಣ ಗೋವಿಂದ ಭಟ್, ಜಿ.ಕೆ. ಭಟ್ ಸಂಕಪಿತ್ಲು, ಶ್ಯಾಮ ಪ್ರಸಾದ್ ಬೀರಂತಡ್ಕ, ರಾಮಚಂದ್ರ ಭಟ್ ಕೂಡೂರು ಮತ್ತು ರಾಮ ಭಟ್ ನಿಡ್ಲೆ (ನರನ್ಸ್ ಬೇಕರಿ) ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ