ಮಂಗಳೂರು: ಫಿಜಾದಲ್ಲಿ ದಸರಾ ನವೋತ್ಸವ

Upayuktha
0


ಮಂಗಳೂರು:
ನಗರದ ಫಿಜಾ ಬೈ ನೆಕ್ಸಸ್ ಮಾಲ್ 'ದಸರಾ ನವೋತ್ಸವ, ಸೀಸನ್ 2' ಅನ್ನು ಪ್ರಕಟಿಸಿದೆ. ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರತಿದಿನವೂ ರೋಚಕ ಕಾರ್ಯಕ್ರಮಗಳು ಮತ್ತು ಹೊಸ ಅಚ್ಚರಿಗಳನ್ನು ಪ್ರದರ್ಶಿಸುವ ವಿಶಿಷ್ಟವಾದ ಅಭಿಯಾನ ಇದಾಗಿದೆ. ಅಕ್ಟೋಬರ್ 3 ರಿಂದ 12 ರ ನಡುವೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 8 ರವರೆಗೆ ಮಾಲ್‍ನ ಯುಜಿ ಓಪನ್ ಪ್ಲಾಜಾದಲ್ಲಿ ಇದನ್ನು ಆಯೋಜಿಸಲಾಗುತ್ತದೆ.


ನವೋತ್ಸವ ಅಂಗವಾಗಿ 3ರಂದು ಡೊಳ್ಳು ಕುಣಿತ, ಕಂಸಾಳೆ ನೃತ್ಯ ಮತ್ತು ಭರತನಾಟ್ಯ ಪ್ರದರ್ಶನಗಳ ಸಾಂಸ್ಕೃತಿಕ ಪ್ರದರ್ಶನ, 4ರಂದು ಸಾಂಪ್ರದಾಯಿಕ ಅಮರ ಚಿತ್ರ ಕಥಾದಿಂದ ದಸರಾ ಕಥೆ ಹೇಳುವಿಕೆ, 5ರಂದು ಪ್ರಶಂಸ ಕೌಪ್ ಅವರಿಂದ ತುಳು ಹಾಸ್ಯ ನಾಟಕ 'ಆದ್ಯಕ್ಷೇರ್' ನೊಂದಿಗೆ ನಗು ರಗಳೆ, 6ರಂದು ಪ್ರವೀಣ್ ಆಳ್ವ ನೇತೃತ್ವದ ಆಳ್ವಾ ಕುಟೊ ಬ್ಯಾಂಡ್‍ನಿಂದ ರೋಮಾಂಚಕ ಲೈವ್ ತುಳು ರಾಕ್ ಸಂಗೀತ ಪ್ರದರ್ಶನ, 7ರಂದು ತುಳುನಾಡು ವೈಭವ, 8ರಂದು ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಪ್ರದರ್ಶನ, 9ರಂದು ಮಲ್ಲಕಂಭ, 10ರಂದು ಬಹು ನಿರೀಕ್ಷಿತ ಕಿನ್ನಿ ಪಿಲಿ ವೇಷ ಸ್ಪರ್ಧೆ (ನೋಂದಣಿಗಾಗಿ, 99458 21444 ಗೆ ಕರೆ ಮಾಡಿ), 11ರಂದು ಮೈಮ್ ಶೋ, 12ರಂದು ಪಿಲಿ ನಲಿಕೆಯ ಗ್ರ್ಯಾಂಡ್ ಶೋ ಇರುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top