ಮಂಗಳೂರು: ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘ ಮಾಮ್ ನಿಯೋಗ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಗಳೂರು ವಿ.ವಿ. ಸಹಯೋಗದಲ್ಲಿ ಮಾಮ್ ಚಟುವಟಿಕೆಗಳನ್ನು ವಿಸ್ತರಿಸುವುದು, ಪತ್ರಿಕೋದ್ಯಮ ವಿಭಾಗದ ಅಭಿವೃದ್ಧಿ, ಪುನಶ್ಚೇತನಗೊಂಡ ಮಾಮ್ ಸಂಘಟನೆಯ ದಶಮಾನೋತ್ಸವ ಆಚರಣೆ ಕುರಿತು ಕುಲಪತಿ ಜೊತೆ ಚರ್ಚಿಸಲಾಯಿತು.
ಮುಂದಿನ ಕಾರ್ಯಕ್ರಮಗಳ ಕುರಿತು ಶೀಘ್ರ ಮಂಗಳೂರು ವಿ.ವಿ., ಪತ್ರಿಕೋದ್ಯಮ ವಿಭಾಗ ಜೊತೆ ಮಾಮ್ ಸಹಯೋಗದ ಸಭೆ ನಡೆಸುವುದಾಗಿ ಪ್ರೊ.ಧರ್ಮ ಈ ಸಂದರ್ಭ ತಿಳಿಸಿದರು.
ನಿಯೋಗದಲ್ಲಿ ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ, ಗೌರವಾಧ್ಯಕ್ಷ ವೇಣು ಶರ್ಮ, ಪದಾಧಿಕಾರಿ ಗಳಾದ ಸುರೇಶ್ ಪುದುವೆಟ್ಟು, ವೇಣುವಿನೋದ್, ಕೃಷ್ಣಕಿಶೋರ್, ಕೃಷ್ಣಮೋಹನ ತಲೆಂಗಳ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ