ಮಂಗಳೂರು: ಭಾರತದ ನಂಬರ್ ವನ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಕಂಪನಿಯಾದ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ ಇಂದು ಹೊಚ್ಚ ಹೊಸ ಕ್ರಾಂತಿಕಾರಕ ಎಲೆಕ್ಟ್ರಿಕ್ ಚತುಶ್ಚಕ್ರ ವಾಹನವಾದ ಮಹೀಂದ್ರಾ ಝಿಯೋ ಬಿಡುಗಡೆ ಮಾಡಿದೆ. 'ಝಿಯೋ' ಅಂದರೆ "ಝೀರೋ ಎಮಿಷನ್ ಆಪ್ಷನ್" ಎಂದಾಗಿದ್ದು, ಈ ಹೆಸರೇ ಈ ವಾಹನದ ಪರಿಸರ ಸ್ನೇಹಿ ಗುಣವನ್ನು ಸಾರುತ್ತದೆ.
ಕೊನೆಯ ಹಂತದ ಸಾಗಣೆ ಕ್ಷೇತ್ರವನ್ನು ವಿದ್ಯುತ್ ವಾಹನಗಳ ಮೂಲಕ ಮುನ್ನಡೆಸುವ ಮತ್ತು ಗ್ರಾಹಕರು ತಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ಸಹಾಯ ಮಾಡುವ ಕಂಪನಿಯ ಉದ್ದೇಶಕ್ಕೆ ಪೂರಕವಾಗಿ ಈ ವಾಹನ ಬಿಡುಗಡೆ ಮಾಡಲಾಗಿದೆ. ಇದು ಎರಡು ಅವತರಣಿಕೆಗಳಲ್ಲಿ ಲಭ್ಯವಿದ್ದು, ನಿರ್ದಿಷ್ಟವಾಗಿ ನಗರದ ಅಭಿವೃದ್ಧಿ ಹೊಂದುತ್ತಿರುವ ಲಾಜಿಸ್ಟಿಕ್ಸ್ ಕ್ಷೇತ್ರದ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಕೇವಲ 7.52 ಲಕ್ಷ ರೂಪಾಯಿ ಕೈಗೆಟುಕುವ ಬೆಲೆಗೆ ಲಭ್ಯ ಎಂದು ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಶ್ರೀಮತಿ ಸುಮನ್ ಮಿಶ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಡೀಎಸ್‍ಲ್ ಎಸ್‍ಸಿವಿಗ ಹೋಲಿಸಿದರೆ ಏಳು ವರ್ಷಗಳಲ್ಲಿ 7 ಲಕ್ಷ ರೂಪಾಯಿವರೆಗೆ ಉಳಿಸಬಹುದಾಗಿದೆ. ಮಹೀಂದ್ರಾ ಝಿಯೋವನ್ನು ದಕ್ಷ ಹೈ-ವೋಲ್ಟೇಜ್ 300+ ವಿ ಆರ್ಕಿಟೆಕ್ಚರ್‍ನಲ್ಲಿ ನಿರ್ಮಿಸಲಾಗಿದ್ದು, ಈ ಮೂಲಕ ಉತ್ತಮ ಇಂಧನ ದಕ್ಷತೆ, ಹೆಚ್ಚು ರೇಂಜ್ ಮತ್ತು ವೇಗದ ಚಾಜಿರ್ಂಗ್ ಸೌಲಭ್ಯ ಲಭ್ಯವಾಗಿದೆ.
ಮಹೀಂದ್ರಾ ಝಿಯೋ ವಾಹನವು 160 ಕಿಮೀವರೆಗಿನ ನೈಜ ಡ್ರೈವಿಂಗ್ ರೇಂಜ್ ಒದಗಿಸುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ನಲ್ಲಿ 60 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 100 ಕಿಮೀ ರೇಂಜ್ ಸಿಗುತ್ತದೆ. ಮಹೀಂದ್ರಾ ಝಿಯೋ ಜೊತೆಗೆ ವಿವಿಧ ಚಾರ್ಜರ್ ಕಾನ್ಫಿಗರೇಶನ್‍ಗಳು ಲಭ್ಯವಿದ್ದು, ಸ್ಟಾಂಡರ್ಡ್ ಆಗಿ 3.3 ಕೆಡಬ್ಲ್ಯೂ ಯುನಿಟ್ ಅನ್ನು ವಾಹನದ ಜೊತೆ ಒದಗಿಸಲಾಗುತ್ತದೆ ಎಂದು ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpg)
