ಕಲಬುರ್ಗಿ: ಹೋಟೆಲ್ ಸಂಘದ ನೂತನ ಅಧ್ಯಕ್ಷ ನರಸಿಂಹ ಮೆಂಡನ್‌ಗೆ ಸನ್ಮಾನ

Upayuktha
0

ಪ್ರವಾಸೋದ್ಯಮಕ್ಕೆ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರ: ಅಲ್ಲಮ ಪ್ರಭು




ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರ್ಗಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿದರು.


ಕಲ್ಬುರ್ಗಿಯಲ್ಲಿ ಅಕ್ಟೋಬರ್ 18ರಂದು ಹೋಟೆಲ್ ಮಯೂರ್ ಬಹುಮನಿಯ ಯಾತ್ರಿಕ್ ನಿವಾಸ ಸಭಾಂಗಣದಲ್ಲಿ ನಡೆದ ಕಲ್ಬುರ್ಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿಗಳ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾದ ನರಸಿಂಹ ಮೆಂಡನ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿ ಕಲ್ಬುರ್ಗಿಯಲ್ಲಿ ಪೊಲೀಸ್ ಅಕಾಡೆಮಿ ತರಬೇತಿ ಕೇಂದ್ರ ನಾಲ್ಕು ವಿಶ್ವವಿದ್ಯಾಲಯಗಳು ಇಎಸ್ಐ ಜಿಮ್ಸ್ ಜಯದೇವ ಆಸ್ಪತ್ರೆಗಳು ಹಾಗೂ ಸದ್ಯದಲ್ಲೇ ನೂತನ ಜವಳಿ ಪಾರ್ಕ್ ಆರಂಭವಾಗುವುದರಿಂದ ಪ್ರವಾಸೋದ್ಯಮ ರಂಗಕ್ಕೆ ಇಲ್ಲಿ ಹೇರಳ ಅವಕಾಶವಿದ್ದು ಹೋಟೆಲ್ ಉದ್ಯಮಿಗಳು ಉತ್ತಮ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಿ ಅವಕಾಶವನ್ನು ಬಳಸಿಕೊಳ್ಳಬೇಕು ಹೋಟೆಲ್ ಉದ್ಯಮಿಗಳ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ ಮಾಡುವುದಲ್ಲದೆ ಈ ಕ್ಷೇತ್ರದ ಅಭಿವೃದ್ಧಿಗೆ ನೂತನ ಸಮಿತಿಯ ಜೊತೆ ವಿಸ್ತೃತ ಚರ್ಚೆ ನಡೆಸಲು ಸದಾ ಸಿದ್ಧ ಎಂದು ಹೇಳಿದರು. 


ಪ್ರವಾಸೋದ್ಯಮ ಅಭಿವೃದ್ಧಿಗೆ ನಿಯೋಗ ಅಗತ್ಯ:

ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ, ಹೋಟೆಲ್ ಉದ್ಯಮ ರಂಗವು ಬೆಳೆಯಲು ಪರಿಶ್ರಮದ ದುಡಿಮೆ ಮತ್ತು ಕಾಯಕವೇ ಕೈಲಾಸ ಎಂಬ ತತ್ವ ಮೂಲ ಪ್ರೇರಣೆಯಾಗಿದೆ ಆತಿಥ್ಯ ಮತ್ತು ಉತ್ತಮ ಆಹಾರಕ್ಕೆ ಹೆಸರಾದ ಕರಾವಳಿಯ ಹೋಟೆಲ್ ಉದ್ಯಮಿಗಳು ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು ಕಲ್ಬುರ್ಗಿಗು ಮಹತ್ವದ ಕೊಡುಗೆ ನೀಡಿದ್ದಾರೆ ಕುಂದಪ್ರಭೆಯಾದ (ಕುಂದಾಪುರ ಪ್ರತಿಭೆ) ನರಸಿಂಹ ಮೆಂಡನ್ ಅಧ್ಯಕ್ಷ ಸ್ಥಾನದವರೆಗೆ ಏರಿ 45 ವರ್ಷಗಳ ಸುದೀರ್ಘ ಅನುಭವದಿಂದ ಈಗ ಕಲ್ಯಾಣ ಪ್ರಭೆಯಾಗಿ ಬೆಳಗಿದ್ದಾರೆ. ಪ್ರವಾಸಿಗರ ಮನೋಧರ್ಮಕ್ಕೆ ಹೋಟೆಲು ಉದ್ಯಮ ರಂಗ ಪ್ರಾಮಾಣಿಕ ಸ್ಪಂದನೆ ಮಾಡುತ್ತಿದ್ದು ಕ್ಷಿಪ್ರ ಬೆಳೆಯುತ್ತಿರುವ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಹೋಟೆಲ್ ವಸತಿ ಆರಂಭ ಹಾಗೂ ಉದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ನೇತೃತ್ವದಲ್ಲಿ ಸರಕಾರಕ್ಕೆ ನಿಯೋಗ ಕೊಂಡೊ ಇದು ಯೋಜನೆಗಳ ಜಾರಿಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.


ನಿರ್ಗಮಿತ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ಸತ್ಯನಾಥ ಶೆಟ್ಟಿ ಯವರು ಕರಾವಳಿಯ ಹೋಟೆಲ್ ಉದ್ಯಮಿಗಳು ಕಲ್ಯಾಣ ಕರ್ನಾಟಕದಲ್ಲಿ ಹಾಲು ನೀರಿನಂತೆ ಬೆಸೆದುಕೊಂಡು ಶೇಂಗಾ ಚಟ್ನಿ- ರೊಟ್ಟಿಯಂತಹ ಆಹಾರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆಂದು ಹೇಳಿ ಹೊಸದಾಗಿ ರಚನೆಯಾದ ಸಮಿತಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷ ನರಸಿಂಹ ಮಂಡನ್ ಮಾತನಾಡಿ ಹೋಟೆಲ್ ಬೇಕರಿ ನಡೆಸುತ್ತಿರುವುದು ದುಸ್ತರವಾದ ಕೆಲಸವಾಗಿದ್ದು ಶುಚಿತ್ವ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಸಣ್ಣ ಪುಟ್ಟ ಕಾರಣ ನೆಪ ಒಡ್ಡಿ ಕಿರುಕುಳ ನೀಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಕಾರ್ಮಿಕ ನ್ಯಾಯ ಮತ್ತು ಹಕ್ಕುಗಳ ಕುರಿತಾಗಿ ಕಾರ್ಮಿಕ ಇಲಾಖೆಯ ಉಪಯುಕ್ತರಾದ ವೆಂಕಟೇಶ ಸಿಂಧಿಗಟ್ಟಿ, ಮಾತನಾಡಿದರು. ನೂತನ ಗೌರವಾಧ್ಯಕ್ಷರಾದ ರಾಜಶೇಖರ ಶಿಳ್ಳಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ರವೀಂದ್ರನಾಥ ರವೀಂದ್ರ ಕುಮಾರ್ ಆಹಾರ ಸುರಕ್ಷತಾಧಿಕಾರಿ ಡಾ. ರತ್ನಾಕರ್ ತೋರಣ್, ಶ್ರೀಶೈಲ ಮಲ್ಲ, ಹಿರಿಯ ಉದ್ಯಮಿಗಳಾದ ಸತೀಶ್ ಗುತ್ತೇದಾರ್, ಮಾಜಿ ಗೌರವಾಧ್ಯಕ್ಷ ವಿಷ್ಣುಮೂರ್ತಿಛಾತ್ರಾ, ಸಾಹಿತಿಗಳಾದ ಏ.ಕೆ ರಾಮೇಶ್ವರ, ಎ.ಕೆ. ರಾಮೇಶ್ವರ ಸಿಎಸ್ ಆನಂದ ಉದ್ಯಮಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ಸುರೇಶ್ ಗುತ್ತೇದಾರ್ ಮಟ್ಟೂರು ತಿಮ್ಮಪ್ಪ ಗಂಗಾವತಿ ಅಂಬಯ್ಯ ಗುತ್ತೇದಾರ ಅಲ್ಪಸಂಖ್ಯಾತರ ನಿಗಮದ ವ್ಯವಸ್ಥಾಪಕರಾದ ರವಿ ಬೆ, ರಾಜೇಶ್ ಡಿ ಗುತ್ತೇದಾರ್ ಪ್ರಶಾಂತ ಶೆಟ್ಟಿ ಇನ್ನಾ, ಚಂದ್ರಶೇಖರ್ ಶೆಟ್ಟಿ, ಸಂತೋಷ ಪೂಜಾರಿ, ಶಿವರಾಜ್ ಕೋಟ್ಯಾನ್, ಸುರೇಶ್ ಬಡಿಗೇರ್, ಹಿರಿಯ ಕಲಾವಿದರಾದ ಮೋಹನ ಸೀತನೂರ್, ಮಾನಯ್ಯ ಬಡಿಗೇರ್, ಓಬಿಸಿ ಕಲಬುರಗಿ ದಕ್ಷಿಣದ ಅಧ್ಯಕ್ಷ ಧರ್ಮರಾಜ್ ಹೇರೂರ್, ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಎಸ್ ಮಾಲಿ ಪಾಟೀಲ್  ರಮೇಶ್ ಬಂಧು, ಮೊಯಿನುದ್ದಿನ್, ಲಕ್ಷ್ಮಣ ರಾವ್ ಪೋಲಿಸ್ ಪಾಟೀಲ್ ಮತ್ತಿತರರಿದ್ದರು. ಮಾಲಾ ಕಣ್ಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.


ಹೋಟೆಲ್ ಅಸೋಸಿಯೇಷನ್ ನೂತನ ಸಮಿತಿ:

ಇಲ್ಲ ಹೋಟೆಲ್ ಅಸೋಸಿಯೇಷನ್ ನ ಮೂರು ವರ್ಷಗಳ ಅವಧಿಗೆ ನರಸಿಂಹ ಮೆಂಡನ್ (ಅಧ್ಯಕ್ಷ) ರಾಜಶೇಖರ್ ಶೆಳ್ಳಗಿ (ಗೌರವಾಧ್ಯಕ್ಷರು) ಮಹಾಕೀರ್ತಿ ಶೆಟ್ಟಿ (ಪ್ರಧಾನ ಕಾರ್ಯದರ್ಶಿ) ಅವಿನಾಶ್ ಹಾರಕೂಡ (ಸಹಕಾರ್ಯ ದರ್ಶಿ) ಉಪಾಧ್ಯಕ್ಷರಾಗಿ ಶರಣು ಪಾಟೀಲ್, ಗಿರಿಧರ ಭಟ್ (ವಸತಿ ವಿಭಾಗ) ಸುನಿಲ್ ಶೆಟ್ಟಿ (ಖಜಾಂಚಿ) ಮಾಲಾ ಕಣ್ಣಿ (ಪ್ರಚಾರ ಕಾರ್ಯದರ್ಶಿ) ಆಗಿ ಆಯ್ಕೆ ಹೊಂದಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top