ಬಳ್ಳಾರಿ:ವೈ ಎಂ ಸಿ ಎ ಸಂಸ್ಥೆ ಪ್ರಪಂಚದಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಷಿಯೇಷನ್ ಗ್ರಾಮೀಣ ಸಂಸ್ಥೆ ಯುವ ಘಟಕದ ಅಧ್ಯಕ್ಷ ಕಾಂತಿನೋಹ ವಿಲ್ಸನ್ ತಿಳಿಸಿದರು. ಸಿಎಸ್ ಸಂಗನಕಲ್ ಚರ್ಚಿನ ಆವರಣದಲ್ಲಿ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಷಿಯೇಷನ್ ರೂರಲ್ ಸಂಸ್ಥೆಯ ಯೂಥ್ ಪೋರಂ ವತಿಯಿಂದ ಯುವಕರಿಗಾಗಿ ಹಮ್ಮಿಕೊಂಡಿದ್ದ ಕ್ರೈಸ್ತ ಸಭೆಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಂಸ್ಥೆ ಸಾಮಾಜಿಕವಾಗಿ ಹಲವಾರು ಕೊಡುಗೆಯನ್ನು ನೀಡಿದೆ. ನಗರದಲ್ಲಿಯೂ ಸಹ ಉತ್ತಮವಾದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ಯೂತ್ ಫೋರಂನ ಯುವಕರು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಚರ್ಚ್ ನ ಪಾಸ್ಟರ್ ಎಡ್ವಿನ್ ರವಿ ಕುಮಾರ್ ಅಯ್ಯ, ವೈಎಂಸಿಎ ಬಳ್ಳಾರಿ ಪದಾಧಿಕಾರಿಗಳಾದ ಮಾರ್ಗರೇಟ್ ಮೋಹನ್, ಯೇಸು ಪೌಲ್. ಎಸ್. ಪ್ರಸಾದ್. ಭಾಸ್ಕರ್ ಮ್ಯಾಥ್ಯೂ, ಫಾಸ್ಟರ್. ಪ್ರಭಾಕರ್, ಬ್ರದರ್ ನೋಹ ಅನಿಲ್ ಕುಮಾರ್, ಪಾಸ್ಟರ್ ನವೀನ್ ಇನ್ನಿತರರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಯುವ ಸಮ್ಮೇಳನ ಕಾರ್ಯಕ್ರಮಕ್ಕೆ ವೈ ಎಂ ಸಿ ಎ ಬಳ್ಳಾರಿ ರೂರಲ್ ಸಮಿತಿಯ ಸದಸ್ಯರು, ಯೂಥ್ ಫೋರಂನ ಸದಸ್ಯರು, ಸಂಗನಕಲ್ಲು ಚರ್ಚಿನ ಹಿರಿಯರು, ಬಳ್ಳಾರಿ ಗ್ರಾಮೀಣ ಭಾಗದ ಕ್ರೈಸ್ತ ಸಭೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ