ಮಂಗಳೂರು: ವಿಶ್ವದ ಮೂರನೇ ಅತಿದೊಡ್ಡ ವಾಹನಗಳ ಮೂಲ ಸಾಧನ ಸಲಕರಣೆಗಳ ಕಂಪನಿಯಾದ ಹ್ಯೂಂಡೈ ಮೋಟರ್ ಸಮೂಹದ ಭಾಗವಾಗಿರುವ ಹ್ಯೂಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಕಂಪನಿಯು ಈ ತಿಂಗಳ 15ರಂದು ಆರಂಭಿಕ ಷೇರು ಬಿಡುಗಡೆ ಅಥವಾ ಸಾರ್ವಜನಿಕ ಷೇರು ಮಾರಾಟ ಕೊಡುಗೆ ಮೂಲಕ ಈಕ್ವಿಟಿ ಷೇರುಗಳ ಮಾರಾಟ ಆರಂಭಿಸಲಿದೆ.
ಸಾಂಸ್ಥಿಕ (ಅ್ಯಂಕರ್ ಹೂಡಿಕೆದಾರರಿಗೆ ಬಿಡ್/ಆಫರ್ ತೆರೆಯುವ ದಿನಾಂಕ ಅಕ್ಟೋಬರ್ 14 ಆಗಿದ್ದು, 17ರಂದು ಷೇರು ಮಾರಾಟ ಹರಾಜು ಪ್ರಕ್ರಿಯೆ ಕೊನೆಗೊಳ್ಳಲಿದೆ.
10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 1,865-1,960 ರೂ. ದರ ಪಟ್ಟಿ ನಿಗದಿಪಡಿಸಿದೆ. ಸಾರ್ವಜನಿಕರು ಕನಿಷ್ಠ 7 ಈಕ್ವಿಟಿ ಷೇರುಗಳು ಮತ್ತು ಇದರ ಗುಣಕಗಳಲ್ಲಿ ಖರೀದಿಸಬಹುದು. ಐಪಿಓ ಭಾಗವಾಗಿ ಪ್ರವರ್ತಕ ಕಂಪನಿಗೆ
14,21,94,700 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಕಂಪನಿಯು ಈ ಮಾರಾಟ ಕೊಡುಗೆಯಿಂದ ಬರುವ ಯಾವುದೇ ಆದಾಯ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹ್ಯೂಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಈಕ್ವಿಟಿ ಷೇರು ಮಾರಾಟ ಕೊಡುಗೆ ಅಥವಾ ಐಪಿಒ ಕೊಡುಗೆಯನ್ನು ಬಿಎಸ್‍ಇ ಮತ್ತು ಎನ್‍ಎಸ್‍ಇನಲ್ಲಿ ಪಟ್ಟಿ ಮಾಡಲಿದೆ. ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಚ್‍ಎಸ್‍ಬಿಸಿ ಸೆಕ್ಯುರಿಟೀಸ್ ಮತ್ತು ಕ್ಯಾಪಿಟಲ್ ಮಾರ್ಕೆಟ್ಸ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಜೆಪಿ ಮೋರ್ಗಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮೋರ್ಗಾನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಈ ಐಪಿಒ ಪ್ರಕ್ರಿಯೆಗೆ ದಾಖಲಾತಿ ನಿರ್ವಹಣೆ(ಬುಕ್ ರನ್ನಿಂಗ್)ಯ ಪ್ರಮುಖ ವ್ಯವಸ್ಥಾಪಕರಾಗಿ ಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ