ಸಾಗರ ಮಂಡಲೋತ್ಸವ, ಆಹಾರ ಮೇಳ ಸಂಪನ್ನ

Upayuktha
0


ಸಾಗರ: ಹವ್ಯಕ ಮಹಾಮಂಡಲದ ಸಾಗರ ಮಂಡಲೋತ್ಸವ ಮತ್ತು ಆಹಾರಮೇಳ ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ಶನಿವಾರ (ಅ.26) ನಡೆಯಿತು.


ಸಾಗರದ ಪ್ರಖ್ಯಾತ ವೈದ್ಯರಾದ ಡಾ. ರಾಮಚಂದ್ರ ಭಾಗವತ್ ಅವರು ಮಂಡಲೋತ್ಸವವನ್ನು ಹಾಗೂ ಶಿಮುಲ್ ನ ಅಧ್ಯಕ್ಷರಾದ ಶಶಿಧರ್ ಗುರುಶಕ್ತಿ ಅವರು ಆಹಾರೋತ್ಸವವನ್ನು ಉದ್ಘಾಟಿಸಿದರು.


ಇಂದು ರಂಗೋಲಿ, ಚಿತ್ರಕಲೆ, ರಸಪ್ರಶ್ನೆ, ಕವಿತೆ ರಚನೆ, ಪ್ರಬಂಧ, ಕೆರೆ- ದಡ, ಹಗ್ಗ ಜಗ್ಗಾಟ, ಕಪ್ಪೇಜಿಗಿತ, ಸ್ಕಿಪ್ಪಿಂಗ್ ಸ್ಪರ್ಧೆಗಳು ನಡೆದವು. 


ಗೋಸ್ವರ್ಗದ ಮೇವಿಗಾಗಿ ಆಹಾರಮೇಳವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಮೇಳದಲ್ಲಿ ಶಾವಿಗೆ, ಪಡ್ಡು, ಪನ್ನೀರ್ ದೋಸೆ, ಪರೋಟ, ಸೊಗದೆ ಬೇರಿನ ಕಷಾಯ, ಜಲ್ಜೀರ, ಐಸ್ಕ್ರೀಮ್, ಮಸಾಲೆ ಮಂಡಕ್ಕಿ, ಹೋಳಿಗೆ, ಅತ್ರಾಸ, ತೊಡೆದವು ಮುಂತಾದ ಪದಾರ್ಥಗಳಿದ್ದವು.


'ಗೋ ಭಾರತ' ಎಂಬ ಒಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವ್ಯಾಖ್ಯಾನ, ನೃತ್ಯ, ಗೀತೆ, ಹಾಸ್ಯಗಳ ಮೂಲಕ ಗೋ ಸಾಕಾಣಿಕೆ ಹಾಗೂ ಅದರ ಮಹತ್ವವನ್ನು ತಿಳಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಸಾಗರ ಮಂಡಲೋತ್ಸವದ ಮೊದಲನೆಯ ದಿವಸವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top