ಉತ್ತಮ ಫಲಿತಾಂಶಕ್ಕೆ ಶ್ರಮವೊಂದೇ ಸಾಧನ

Upayuktha
0

ಆಳ್ವಾಸ್ ಆವರಣದಲ್ಲಿ ‘ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ ಉದ್ಘಾಟನೆ  



ವಿದ್ಯಾಗಿರಿ: ‘ಕಠಿಣ ಪರಿಶ್ರಮ, ಶ್ರಮದಲ್ಲಿನ ಭಕ್ತಿ, ಸಮರ್ಪಣಾ ಭಾವ ಮತ್ತು ಕಾರ್ಯ ಬದ್ಧತೆಯಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ನಿರ್ದಿಷ್ಟ ಗುರಿಯೆಡೆಗೆ ಸ್ಪಷ್ಟತೆ ಇರಲಿ. ಗೊಂದಲ ಬೇಡ’ ಎಂದು   ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್,  ಕೋಲ್ಕತ್ತಾದಲ್ಲಿನ ಯೂನಿಯನ್ ಬ್ಯಾಂಕ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಸತೀಶ್ ರೈ ಹೇಳಿದರು.


ವಿದ್ಯಾಗಿರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ‘ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ಹಾರೈಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಹಲವಾರು ನುರಿತ ತರಬೇತುದಾರರ ಸಹಕಾರದಿಂದ  ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಷ್ಟಿçÃಯ ಮಟ್ಟ ಹಾಗೂ ಒಲಿಂಪಿಕ್ಸ್ನಲ್ಲಿ    ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಧಕರ ಹೆಸರುಗಳನ್ನು ಆಳ್ವಾಸ್ ಸಂಸ್ಥೆಯ ಹಲವು ಕಟ್ಟಡಗಳಿಗೆ ಇಡಲಾಗಿದೆ. ನೂತನವಾಗಿ ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಸೇರ್ಪಡೆಯಾಗಿದೆ ಎಂದು ಸಂಭ್ರಮಿಸಿದರು.


ಲೋಕನಾಥ ಬೋಳಾರ್ ಅವರನ್ನು ಮಾದರಿಯನ್ನಾಗಿಸಿ ಇಂದಿನ ಕ್ರೀಡಾ ವಿದ್ಯಾರ್ಥಿಗಳು ಅಭ್ಯಾಸ ನಡೆಸಬೇಕು. ಇದು ದೇಶದ ಮಟ್ಟದಲ್ಲಿ ಸಾಧನೆಗೈಯ್ಯಲು ಕ್ರೀಡಾಪಟುಗಳಿಗೆ ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು. ಜನಪದ ಕ್ರೀಡೆ ಕಂಬಳ ಹೇಗೆ ಪ್ರಸಿದ್ಧಿ ಪಡೆಯುತ್ತಿದೆಯೋ, ಅಂತೆಯೇ ಕ್ರೀಡೆಗೂ ಪ್ರಾಶಸ್ತö್ಯ ನೀಡುವ ದಿನ ಬರಲಿ ಎಂದರು.  


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ನನ್ನ ಬದುಕಿನಲ್ಲಿ ಕಂಡ  ಶ್ರೇಷ್ಠ ಕ್ರೀಡಾಪಟು ಲೋಕನಾಥ ಬೋಳಾರ್. ಅವರ ಪತ್ನಿ ಜಿಲ್ಲಾ ವೈದ್ಯಾಧಿಕಾರಿಯಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಡಾ. ದೇವಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.


ತಾಲ್ಲೂಕು ಮಟ್ಟದಲ್ಲಿ ಸಿಂಥೆಟಿಕ್ ಟ್ರಾö್ಯಕ್ ತರಲು ಹೆಚ್ಚು ಶ್ರಮಿಸಿದ ವ್ಯಕ್ತಿ ಆಳ್ವರು.  ಅವರು ಎಲ್ಲ ಕೀಡಾಪಟುಗಳಿಗೆ ಮಾದರಿ ಎಂದು ಅಭಿನಂದಿಸಿದರು.


ಲೋಕನಾಥ ಬೋಳಾರ್ ಅವರ ಪತ್ನಿ ಡಾ. ದೇವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ  ಡಾ ಎಸ್. ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಆಲ್ವಿನ್ ಪಿಂಟೋ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಇದ್ದರು.


ಬಳಿಕ  ದಕ್ಷಿಣ ಕನ್ನಡ ವೇಯ್ಟ್ ಲಿಫ್ಟಿಂಗ್ ಸಂಘದ ಸಮಾಲೋಚನಾ ಸಭೆ ನಡೆಯಿತು.


ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ನಿಕಾಯದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top