ಮೂಡುಬಿದಿರೆ: ಸ್ತ್ರೀ ರೋಗ ಮಾಹಿತಿ, ಉಚಿತ ಆರೋಗ್ಯ ತಪಾಸಣ ಶಿಬಿರ ಇಂದು

Upayuktha
0


ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ಸ್ನಾತಕೋತ್ತರ ವಿಭಾಗ, ಎ.ಎ.ಎಂ.ಸಿ. ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಬಂಟರ ಸಂಘ ಮಹಿಳಾ ಘಟಕ (ರಿ)ಇವರ ಸಹಯೋಗದೊಂದಿಗೆ, ಕನ್ನಡ ಭವನ ಮೂಡುಬಿದಿರೆಯಲ್ಲಿ ದಿನಾಂಕ  ಅಕ್ಬೋಬರ್ 02 ರ ಬುಧವಾರದಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ಸ್ತ್ರೀರೋಗ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ.


ತಜ್ಞ ಆಯುರ್ವೇದ ವೈದ್ಯರೊಂದಿಗೆ ಸಮಾಲೋಚನೆ, ನುರಿತ ವೈದ್ಯಕೀಯ ವೃತ್ತಿಪರರಿಂದ ಸಮಗ್ರ ಮೌಲ್ಯಮಾಪನ, ಸ್ತ್ರೀರೋಗಗಳು  ಹಾಗೂ ಅವುಗಳನ್ನು ತಡೆಗಟ್ಟುವ ಕ್ರಮಗಳ ತಿಳುವಳಿಕೆ ಮತ್ತು ಪರಿಣಿತರೊಂದಿಗೆ ಸಂವಾದಾತ್ಮಕ ಪ್ರಶ್ನೋತ್ತರ ಈ ಶಿಬಿರದ ವಿಶೇಷತೆಯಾಗಿದೆ.


ಆಳ್ವಾಸ್ ಹೆಲ್ತ್ ಸೆಂಟರ್ ನ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ ಹನಾ ಶೆಟ್ಟಿ ಈ ಶಿಬಿರದ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರುವರು. ಆಳ್ವಾಸ್ ಆಯುರ್ವೇದದ  ತಜ್ಞ ವೈದ್ಯರುಗಳು ಈ ಶಿಬಿರವನ್ನು ನಡೆಸಿ ಕೊಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.


ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಈ ಸಂಖ್ಯೆಯನ್ನು 9742473545 ಸಂಪರ್ಕಿಸಲು  ಕೋರಲಾಗಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top