ಮಂಗಳೂರು: ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ಯೋಜನೆಗಳ ಮಾಹಿತಿ, ನೋಂದಣಿ ಶಿಬಿರ

Upayuktha
0


ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ದಕ್ಷಿಣ ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಡೆದ ಸೇವಾ ಸಪ್ತಾಹದ ಅಂಗವಾಗಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ನೋಂದಣಿ ಶಿಬಿರ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಹೆಮ್ಮೆಯ ಪ್ರಧಾನಿಗಳು ತಮ್ಮ ಬದುಕನ್ನೇ ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟವರು. ಸಮಸ್ತ ದೇಶವಾಸಿಗಳನ್ನೇ ತನ್ನ ಕುಟುಂಬವೆಂದು ಪರಿಗಣಿಸಿರುವ ಅವರು ಎಲ್ಲರ ಒಳಿತಿಗಾಗಿ ಹತ್ತು ಹಲವು ಯೋಜನೆಗಳನ್ನು ತಂದಿದ್ದಾರೆ. ಆ ಯೋಜನೆಗಳನ್ನು ತಳಮಟ್ಟದವರೆಗೂ ತಲುಪಿಸುವ ಇಂತಹ ಕಾರ್ಯಗಳು ಶ್ಲಾಘನೀಯ ಮತ್ತು ಅಗತ್ಯವಾಗಿ ನಡೆಯಬೇಕು ಎಂದು ಪ್ರಶಂಸಿಸಿದರು.


ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಅಶ್ವಿತ್ ಕೊಟ್ಟಾರಿ, ಬಾಬು ಮಾಸ್ಟರ್, ಕಿರಣ್ ರೈ, ರಾಮಪ್ರಸಾದ್, ಭರತ್ ರಾಜ್ ಶೆಟ್ಟಿ, ಸುಮತಿ ಚಂದ್ರಶೇಖರ್, ಯಶೋದ ಗಟ್ಟಿ, ಚೇತನ್ ನೆಕ್ಕರೆಮಾರ್, ರೇಖಾ ಶೆಟ್ಟಿ, ಸುಕೇಶ್ ಅಳಪೆ, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top